ಹಾವೇರಿ: ಕುರುಬ ಜನಾಂಗಕ್ಕೆ ಎಸ್ಟಿ ಮೀಸಲಾತಿ ನೀಡುವಂತೆ ಆಗ್ರಹಿಸಿ ಮಾಡುತ್ತಿರುವ ಹೋರಾಟದ ಬಗ್ಗೆ ಬೇರೆ ಬೇರೆ ವ್ಯಾಖ್ಯಾನಗಳು ಆಗುತ್ತಿವೆ. ಅದು ಯಾವುದೂ ಪ್ರಯೋಜನ ಆಗುವುದಿಲ್ಲ, ನಮ್ಮ ಜೊತೆಗೆ ಸ್ವಾಮೀಜಿಗಳು, ಕಾರ್ಣಿಕ ಹೇಳೋ ರಾಮಣ್ಣನವರು ಇದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಹೇಳಿದರು.
ಬ್ಯಾಡಗಿ ತಾಲೂಕಿನ ಕಾಗಿನೆಲೆಯಲ್ಲಿ ನಡೆದ ಪಾದಯಾತ್ರೆಯ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾರ್ಣಿಕಕ್ಕೆ ಸತ್ಯವಿದೆ. ಕಾರ್ಣಿಕ ಹೇಳಿದವರನ್ನೇ ಜೈಲಿಗೆ ಹಾಕಬೇಕು ಎಂದು ಕಾಗೋಡು ತಿಮ್ಮಪ್ಪ ಎಂದರು. ಆಗ ಕಾಂಗ್ರೆಸ್ ಸೋತು ಹೋಯಿತು. ಕುರುಬರ ಚರಿತ್ರೆಯೆ ಪ್ರಥಮ ಎಂದರು.
ಇದನ್ನೂ ಓದಿ: ಕುರುಬ ಸಮುದಾಯಕ್ಕೆ ಎಸ್ಟಿ ಮೀಸಲಾತಿಗೆ ಆಗ್ರಹಿಸಿ ಇಂದಿನಿಂದ ಪಾದಯಾತ್ರೆ
ವೀರಶೈವರೇ ಮುಖ್ಯಮಂತ್ರಿ ಆಗಿದ್ರೂ, ಪಂಚಮಸಾಲಿ ಸ್ವಾಮೀಜಿ ಪಾದಯಾತ್ರೆ ಮಾಡ್ತಿದ್ದಾರೆ. ಅದೇ ರೀತಿ ನಾವು ಹೋರಾಟ ಮಾಡಿ, ಸರ್ಕಾರದ ಗಮನ ಸೆಳೆಯಬೇಕು. ಕೆ.ಎಸ್. ಈಶ್ವರಪ್ಪ ಬಂದಿದ್ದಾರೆ, ಅಂದರೆ ಸರ್ಕಾರವೇ ನಮ್ಮ ಜೊತೆಗಿದೆ ಎಂದರ್ಥ ಎಂದರು.
ಕಾಗಿನೆಲೆಯ ಧರ್ಮ ಕ್ಷೇತ್ರದಿಂದಲೇ ನಡಿಗೆ ಆರಂಭ ಆಗ್ತಿದೆ. ನಮ್ಮವರು ನಾಲ್ಕು ಜನ ಮಂತ್ರಿಗಳು ಇದ್ದಾರೆ. 2013 ರಿಂದ 2018 ರವರೆಗೆ ಕುರುಬರು ಒಬ್ಬ ಮಂತ್ರಿನೂ ಇರ್ಲಿಲ್ಲ. ಕೊನೆ ಅವಧಿಯಲ್ಲಿ ರೇವಣ್ಣನನ್ನ ಮಂತ್ರಿ ಮಾಡಿದರು ಎಂದರು. ಮಂತ್ರಿ ಮಾಡದೆ ಇರೋದು ಜನಾಂಗದ ಪ್ರೀತಿ ಎಂದು ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ಛಾಟಿ ಬೀಸಿದರು.
ಹಿಂದೆ ತಾರಕಾನಂದಪುರಿ ಸ್ವಾಮೀಜಿ ಪಟ್ಟಾಧಿಕಾರ ಮಾಡುವಾಗಲೂ, ಅವರು ಆರ್ಎಸ್ಎಸ್ ಅನ್ನೋ ಪ್ರಶ್ನೆ ಬಂತು, ಪಟ್ಟಾಧಿಕಾರ ನಿಲ್ಲಲಿಲ್ಲ. ಇದನ್ನು ಯಾರ ಕೈಲೂ ನಿಲ್ಲಿಸಲು ಆಗೋದಿಲ್ಲ. ಧರ್ಮ, ನೀತಿ, ನಿಯತ್ತು, ಜನಾಂಗದ ಬಲದಿಂದ ಪಾದಯಾತ್ರೆಗೆ ಯಶಸ್ಸು ಸಿಗಲಿದೆ ಎಂದರು.