ETV Bharat / state

9 ತಿಂಗಳ ಬಳಿಕ ನಾಪತ್ತೆಯಾಗಿದ್ದ ಪತ್ನಿ, ಮಕ್ಕಳು ಪತ್ತೆ: ಪೊಲೀಸರಿಗೆ ಧನ್ಯವಾದ ಹೇಳಿದ ಪತಿ - ರಾಣೆಬೆನ್ನೂರು ತಾಲೂಕಿನ ಮೆಡ್ಲೇರಿ ಗ್ರಾಮ

'ಒಂಬತ್ತು ತಿಂಗಳ ಬಳಿಕ ಪತ್ನಿ ಮತ್ತು ಮಕ್ಕಳನ್ನು ನೋಡಿ ಖುಷಿಯಾಗಿದೆ. ಮಡದಿ, ಮಕ್ಕಳಿಗಾಗಿ ಸಾಕಷ್ಟು ಹುಡುಕಾಡಿದ್ದೆ. ಇದೀಗ ನನ್ನ ಹುಡುಕಾಟಕ್ಕೆ ಫಲ ಸಿಕ್ಕಿದೆ. ಪೊಲೀಸರಿಗೆ ಧನ್ಯವಾದ ಸಲ್ಲಿಸುತ್ತೇನೆ'- ದೂರು ನೀಡಿದ ಪತಿ

Haveri
ಹಾವೇರಿ
author img

By

Published : Jun 12, 2022, 1:00 PM IST

Updated : Jun 12, 2022, 1:10 PM IST

ಹಾವೇರಿ: 9 ತಿಂಗಳ ಹಿಂದೆ ನಾಪತ್ತೆಯಾಗಿದ್ದ ರಾಣೆಬೆನ್ನೂರು ತಾಲೂಕಿನ ಮೆಡ್ಲೇರಿ ಗ್ರಾಮದ ನಿಂಗಪ್ಪ (ಹೆಸರು ಬದಲಾಯಿಸಲಾಗಿದೆ) ಎಂಬುವವರ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ರಾಣೆಬೆನ್ನೂರು ಗ್ರಾಮಾಂತರ ಪೊಲೀಸರು ಪತ್ತೆ ಹಚ್ಚಿ ಧಾರವಾಡ ಹೈಕೋರ್ಟ್‌ಗೆ ಹಾಜರುಪಡಿಸಿದ್ದಾರೆ.

ಪ್ರಕರಣದ ಹಿನ್ನೆಲೆ: ರಾಣೆಬೆನ್ನೂರು ತಾಲೂಕಿನ ಮೆಡ್ಲೇರಿಯ ನಿಂಗಪ್ಪ ಅವರ ಪತ್ನಿ ಎರಡು ಮಕ್ಕಳೊಂದಿಗೆ 9 ತಿಂಗಳ ಹಿಂದೆ ನಾಪತ್ತೆಯಾಗಿದ್ದಳು. ತನ್ನ ಬಳಿ ಇದ್ದ ಓರ್ವ ಮಗನೊಂದಿಗೆ ನಿಂಗಪ್ಪ ಸಂಬಂಧಿಕರ ಮನೆ, ಗ್ರಾಮಗಳೆಲ್ಲ ಹುಡುಕಾಡಿದ್ದ. ಪತ್ನಿ, ಪುತ್ರರು ಸಿಗದ ಕಾರಣ ರಾಣೆಬೆನ್ನೂರು ಗ್ರಾಮಾಂತರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದ. ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಾಕಷ್ಟು ಹುಡುಕಾಟ ನಡೆಸಿದ್ದರು. ಆದರೂ ಪತ್ತೆಯಾಗಿರಲಿಲ್ಲ. ಇದರಿಂದ ಬೇಸತ್ತ ನಿಂಗಪ್ಪ ಕೊನೆಗೆ ನ್ಯಾಯಾಲಯದ ಮೊರೆ ಹೋಗಿದ್ದಾನೆ.

ಧಾರವಾಡ ಹೈಕೋರ್ಟ್​ನಲ್ಲಿ ನಿಂಗಪ್ಪ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದ. ಪ್ರಕರಣ ಆಲಿಸಿದ ನ್ಯಾಯಾಧೀಶರು ಒಂದು ತಿಂಗಳ ಗಡುವು ನೀಡಿ ನಿಂಗಪ್ಪ ಅವರ ಪತ್ನಿ ಮತ್ತು ಮಕ್ಕಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಆದೇಶಿಸಿದ್ದರು. ನ್ಯಾಯಾಲಯದ ಆದೇಶದ ಮೇಲೆ ರಾಣೆಬೆನ್ನೂರು ಗ್ರಾಮಾಂತರ ಪೊಲೀಸರು ಅವರ ಪತ್ತೆಗೆ ಬಲೆ ಬೀಸಿದ್ದಾರೆ. ಮಂಗಳೂರು, ಗೋವಾ ಸೇರಿದಂತೆ ವಿವಿಧೆಡೆ ಹುಡುಕಾಟ ನಡೆಸಿದ್ದ ಪೊಲೀಸರು ಕೊನೆಗೆ ತಮಿಳುನಾಡಿನಲ್ಲಿ ಅವರನ್ನು ಪತ್ತೆ ಹಚ್ಚಿದ್ದಾರೆ. ಸದ್ಯ ನಿಂಗಪ್ಪ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ವಶಕ್ಕೆ ಪಡೆದಿರುವ ಪೊಲೀಸರು ಧಾರವಾಡ ಹೈಕೋರ್ಟ್‌ಗೆ ಹಾಜರುಪಡಿಸಿದ್ದಾರೆ.

ನಾಪತ್ತೆಯಾಗಿದ್ದ ಪತ್ನಿ, ಮಕ್ಕಳು ಪತ್ತೆ: ಪೊಲೀಸರಿಗೆ ಧನ್ಯವಾದ ಹೇಳಿದ ಪತಿ

'ಒಂದು ತಿಂಗಳ ಬಳಿಕ ಪತ್ನಿ ಮತ್ತು ಮಕ್ಕಳನ್ನು ನೋಡಿ ಖುಷಿಯಾಗಿದೆ. ಮಡದಿ, ಮಕ್ಕಳಿಗಾಗಿ ಸಾಕಷ್ಟು ಹುಡುಕಾಡಿದ್ದೆ. ಇದೀಗ ನನ್ನ ಹುಡುಕಾಟಕ್ಕೆ ಫಲ ಸಿಕ್ಕಿದೆ. ಪೊಲೀಸರ ಕಾರ್ಯಕ್ಕೆ ಅಭಿನಂದನೆ ಸಲ್ಲಿಸುತ್ತೇನೆ' ಎಂದು ನಿಂಗಪ್ಪ ಹೇಳಿದರು. ನಿಂಗಪ್ಪ ಪತ್ನಿ ಮಾತನಾಡಿ, 'ಕೆಟ್ಟಗಳಿಗೆಯಲ್ಲಿ ಮನೆಬಿಟ್ಟು ಹೋಗಿದ್ದೆ. ಇನ್ನು ಮುಂದೆ ಈ ರೀತಿಯ ದುಸ್ಸಾಹಸಕ್ಕೆ ಕೈ ಹಾಕುವುದಿಲ್ಲ' ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸ್ನೇಹಿತನೊಂದಿಗೆ ಇಬ್ಬರು ಮಕ್ಕಳ ಸಮೇತ ಪತ್ನಿ ಪರಾರಿ.. ಪೊಲೀಸ್​ ಠಾಣೆ ಮೆಟ್ಟಿಲೇರಿದ ಪತಿ

ಏನಿದು ಹೇಬಿಯಸ್ ಕಾರ್ಪಸ್?: ಯಾವುದೇ ವ್ಯಕ್ತಿ ಮತ್ತೊಬ್ಬ ವ್ಯಕ್ತಿಯನ್ನು ಬಂಧನದಲ್ಲಿಟ್ಟಾಗ ಆ ರೀತಿಯ ಬಂಧನಕ್ಕೆ ಕಾರಣವನ್ನು ತಿಳಿಯಲು ಬಂಧಿತ ವ್ಯಕ್ತಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ನೀಡುವ ಆದೇಶ. ಕಾನೂನು ಸಮರ್ಥನೆಯಿಲ್ಲದೇ ಬಂಧಿತನಾಗಿರುವ ವ್ಯಕ್ತಿಯನ್ನು ಮುಕ್ತಗೊಳಿಸುವುದೇ ಇದರ ಉದ್ದೇಶ.

ಹೇಬಿಯಸ್ ಕಾರ್ಪಸ್ ರಿಟ್ ಅರ್ಜಿಗಳನ್ನು ಈ ಕೆಳಗಿನವರು ಸಲ್ಲಿಸಬಹುದು:

  • ಸ್ವತಃ ಬಾಧಿತ ವ್ಯಕ್ತಿ
  • ಆತನ ಪರವಾಗಿ ಬೇರೆ ಯಾವುದೇ ವ್ಯಕ್ತಿ.

Last Updated : Jun 12, 2022, 1:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.