ETV Bharat / state

ಎಲ್ಲಾ ಕಡೆ ವಂಚಕರಿದ್ದು, ಮೆಟ್ಟಿ ನಿಲ್ಲುವುದೇ ರಾಜಕೀಯ ಗೆಲುವು: ಬಿ.ಸಿ.ಪಾಟೀಲ್

ಜ್ಯೂಲಿಯಸ್ ಸೀಜರ್, ಬಸವೇಶ್ವರರ ಕಾಲದಿಂದಲೂ ವಂಚಕರು ಅವರ ಜೊತೆಯಲ್ಲೇ ಇದ್ದಾರೆ. ಅಷ್ಟೇ ಯಾಕೆ ಟಿಪ್ಪು ಸುಲ್ತಾನ್​ಗೆ ಮೀರ್ ಸಾದಿಕ್ ದ್ರೋಹ ಬಗೆದರು. ಅಂತಹ ಮೀರ್ ಸಾದಿಕ್‌ರು ಎಲ್ಲ ಕಡೆ ಇರುತ್ತಾರೆ. ಈಗ ಸಿದ್ದರಾಮಯ್ಯನವರಿಗೆ ಅನುಭವವಾಗಿದೆ. ಅದನ್ನೇ ಅವರು ಹೇಳಿದ್ದಾರೆ ಎಂದು ಬಿ.ಸಿ.ಪಾಟೀಲ್ ಹೇಳಿದರು.

minister bc patil talk about statement of Siddaramaiah
ಬಿ.ಸಿ.ಪಾಟೀಲ್
author img

By

Published : Dec 18, 2020, 9:55 PM IST

ಹಾವೇರಿ: ನನ್ನ ಸೋಲಿಗೆ ನಮ್ಮ ಪಕ್ಷದವರೇ ಕಾರಣ ಎಂದಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.

ಬಿ.ಸಿ.ಪಾಟೀಲ್

ಹಾವೇರಿಯಲ್ಲಿ ಮಾತನಾಡಿದ ಅವರು, 'ದುಷ್ಮನ್ ಕಂಹಾ ಹೈ ಅಂದರೆ ಬಗಲ್ ಮೇ ಹೈ' ಎಂದಿದ್ದಾರೆ. ಈ ರೀತಿ ಉಂಡ ಮನೆಗೆ ದ್ರೋಹ ಬಗೆಯುವವರು ಎಲ್ಲಾ ಕಡೆಯೂ ಇರುತ್ತಾರೆ. ಅದನ್ನ ನೋಡಿಕೊಂಡು ಗೆಲ್ಲುವುದೇ ರಾಜಕೀಯ ಎಂದರು.

ಜ್ಯೂಲಿಯಸ್ ಸೀಜರ್, ಬಸವೇಶ್ವರರ ಕಾಲದಿಂದಲೂ ವಂಚಕರು ಅವರ ಜೊತೆಯಲ್ಲೇ ಇದ್ದಾರೆ. ಅಷ್ಟೇ ಯಾಕೆ ಟಿಪ್ಪು ಸುಲ್ತಾನ್​ಗೆ ಮೀರ್ ಸಾದಿಕ್ ದ್ರೋಹ ಬಗೆದರು. ಅಂತಹ ಮೀರ್ ಸಾದಿಕ್‌ರು ಎಲ್ಲ ಕಡೆ ಇರುತ್ತಾರೆ. ಈಗ ಸಿದ್ದರಾಮಯ್ಯನವರಿಗೆ ಅನುಭವವಾಗಿದೆ. ಅದನ್ನೇ ಅವರು ಹೇಳಿದ್ದಾರೆ ಎಂದರು.

ಓದಿ: ನನ್ನ ಸೋಲಿಗೆ ನಮ್ಮ ಪಕ್ಷದವರೇ ಕಾರಣ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

ಸಿದ್ದರಾಮಯ್ಯನವರು ಸಿಎಂ ಆದಾಗ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ವಲ್ಪ ಜನಸಂಪರ್ಕ ಕಡಿಮೆಯಾಗಿತ್ತು. ರಾಜಕೀಯದಲ್ಲಿ 99 ಪ್ರತಿಶತ ಕೆಲಸ ಮಾಡಿಕೊಂಡವರಿಗೆ ಒಂದು ಕೆಲಸ ಮಾಡದಿದ್ದರು ಅವರು ತಿರುಗಿ ಬೀಳ್ತಾರೆ. ಸಿದ್ದರಾಮಯ್ಯನವರ ಪರಿಸ್ಥಿತಿ ಸಹ ಈ ರೀತಿಯಾಗಿರಬಹುದು ಎಂದರು.

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಬೀಳಲು ಸಮನ್ವಯತೆ ಕೊರತೆ ಕಾರಣ. ಸಿದ್ದರಾಮಯ್ಯ ಮತ್ತು ಹೆಚ್.​​ಡಿ.ಕುಮಾರಸ್ವಾಮಿ ಜವಾಬ್ದಾರಿಯಿಂದ ನಡೆದುಕೊಂಡಿದ್ದರೆ ಈ ರೀತಿ ಪರಿಸ್ಥಿತಿ ಇರುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.