ಹಾವೇರಿ: ರಾಜ್ಯದಲ್ಲಿ ಹಾಸಿಗೆ ಹಾಸಿಕೊಂಡು ಮಲಗಿದ್ದ ಸರ್ಕಾರ ಹೋಗಿದೆ. ಜಾಗೃತವಾಗಿರುವ ಸರ್ಕಾರ ಬಂದಿದೆ ತಿಳಿದುಕೋ ಎಂದು ಸಚಿವ ಬಸವರಾಜ್ ಬೊಮ್ಮಾಯಿ ಅವರು ತಹಶೀಲ್ದಾರ್‌ಗೆ ಕ್ಲಾಸ್ ತೆಗೆದುಕೊಂಡರು.
ಹಾವೇರಿ ಮತ್ತು ಸವಣೂರು ತಾಲೂಕಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಗುರುವಾರ ಬಸವರಾಜ್ ಬೊಮ್ಮಾಯಿ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.
ಸವಣೂರಿನ ಮೇಲ್ಮುರಿಯಲ್ಲಿ ಸಂತ್ರಸ್ತರು ತಮಗೆ ಮನೆ ಬಿದ್ದಿರುವುದಕ್ಕೆ ಪರಿಹಾರ ಬಂದಿಲ್ಲ ಎಂದು ದೂರಿದರು. ಇದಕ್ಕೆ ಸಚಿವರು ಹಾವೇರಿ ತಹಸೀಲ್ದಾರ್ ಹೆಚ್.ಸಿ.ಶಿವಕುಮಾರ್‌ಗೆ ಪ್ರಶ್ನಿಸಿದರು. ಆಗವರು ಬಂದಿದೆ ಎಂಬ ಹಾರಿಕೆಯ ಉತ್ತರ ಕೊಟ್ಟರು. ಈ ಸಂದರ್ಭದಲ್ಲಿ ಗರಂ ಆದ ಸಚಿವರು ರಾಜ್ಯದಲ್ಲಿ ಜಾಗೃತವಾಗಿರುವ ಸರ್ಕಾರ ಬಂದಿದೆ. ಹುಷಾರಾಗಿರಿ ಎಂದು ಎಚ್ಚರಿಕೆ ಕೊಟ್ಟರು. ಬೇಜವಾಬ್ದಾರಿ ಅಧಿಕಾರಿಗಳನ್ನ ಸಸ್ಪೆಂಡ್ ಮಾಡ್ರಿ ಉಳಿದವರಿಗೆ ಬುದ್ದಿ ಬರುತ್ತೆ ಅಂತಾ ಜಿಲ್ಲಾಧಿಕಾರಿಗೆ ಸೂಚಿಸಿದರು.
ಪರಿಶೀಲನೆ ವೇಳೆ ಮಂಟಗಣಿಯಲ್ಲಿ ರೈತ ಅರವಿಂದ ಅವರು ಸಚಿವ ಬಸವರಾಜ್ ಬೊಮ್ಮಾಯಿ ಅವರಿಗೆ ಕಾಲಿಗೆ ಬಿದ್ದು ಬೇಡಿಕೆ ಈಡೇರಿಸುವಂತೆ ಮನವಿ ಮಾಡಿಕೊಂಡರು. ರಸ್ತೆ ಸರಿ ಮಾಡಿಸಿ ಕೊಡಿ ಎಂದು ಬೇಡಿಕೊಂಡ ಮನವಿ ಸ್ಪಂದಿಸಿದ ಸಚಿವರು ಅಧಿಕಾರಿಗಳಿಗೆ ರಸ್ತೆ ಸರಿ ಮಾಡಿಕೊಡುವಂತೆ ಆದೇಶಿಸಿದರು.