ETV Bharat / state

ಸ್ನೇಹಿತನೊಂದಿಗೆ ಇಬ್ಬರು ಮಕ್ಕಳ ಸಮೇತ ಪತ್ನಿ ಪರಾರಿ.. ಪೊಲೀಸ್​ ಠಾಣೆ ಮೆಟ್ಟಿಲೇರಿದ ಪತಿ - ಪತ್ನಿ ಪರಾರಿ ಹುಡಿಕಿಕೊಡುವಂತೆ ಠಾಣೆ ಮೆಟ್ಟಿಲೇರಿದ ಪತಿ

ರಾಣೆಬೆನ್ನೂರು ತಾಲೂಕಿನ ಮೆಡ್ಲೇರಿ ಗ್ರಾಮದ ಡಿಳ್ಳೆಪ್ಪ ಬುಡ್ಡಳ್ಳೇರ್ ಎಂಬುವವರ ಪತ್ನಿ ಸಣ್ಣನಾಗಪ್ಪ ಎಂಬಾತನ ಜೊತೆ ತನ್ನ ಇಬ್ಬರು ಗಂಡು ಮಕ್ಕಳನ್ನು ಕರೆದುಕೊಂಡ ಪರಾರಿಯಾಗಿದ್ದಾಳಂತೆ. ಈ ಬಗ್ಗೆ ಪತಿ ಡಿಳ್ಳೆಪ್ಪ ರಾಣೆಬೆನ್ನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

haveri
ಪತ್ನಿ ಪರಾರಿ: ಹುಡಿಕಿಕೊಡುವಂತೆ ಠಾಣೆ ಮೆಟ್ಟಿಲೇರಿದ ಪತಿ
author img

By

Published : Jun 7, 2022, 10:14 AM IST

Updated : Jun 7, 2022, 1:27 PM IST

ಹಾವೇರಿ: ಸ್ನೇಹಿತನನ್ನ ಮನೆಗೆ ಕರೆದುಕೊಂಡಿದ್ದೇ ತಪ್ಪಾಯಿತು. ನನ್ನ ಒಂದು ಸಣ್ಣ ತಪ್ಪಿನಿಂದ ಹೆಂಡತಿ ಮಕ್ಕಳನ್ನ ಕಳೆದುಕೊಂಡೆ. ಒಬ್ಬ ಮಗ ನನ್ನ ಬಳಿ ಇದ್ದು, ಇಬ್ಬರು ಮಕ್ಕಳು ಪತ್ನಿಯ ಜೊತೆಗೆ ಇದ್ದಾರೆ. ಆದಷ್ಟು ಬೇಗ ನನ್ನ ಪತ್ನಿ ಮಕ್ಕಳನ್ನು ಕರೆದುಕೊಂಡು ಬನ್ನಿ. ಅವರನ್ನು ಒಮ್ಮೆ ನೋಡುತ್ತೇನೆ ಎಂದು ಡಿಳ್ಳೆಪ್ಪ ಬುಡ್ಡಳ್ಳೇರ್ ಎಂಬುವವರು ಅಳಲು ತೋಡಿಕೊಂಡಿದ್ದಾರೆ.

ಸ್ನೇಹಿತನೊಂದಿಗೆ ಪತ್ನಿ ಪರಾರಿ.. ಪೊಲೀಸ್​ ಠಾಣೆ ಮೆಟ್ಟಿಲೇರಿದ ಪತಿ

ಏನಿದು ಪ್ರಕರಣ?: ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಮೆಡ್ಲೇರಿ ಗ್ರಾಮದ ಡಿಳ್ಳೆಪ್ಪ ಬುಡ್ಡಳ್ಳೇರ್ ಕುಟುಂಬ ಗ್ರಾಮದ ಸುಖಿ ಕುಟುಂಬಗಳಲ್ಲಿ ಒಂದಾಗಿತ್ತು. ಡಿಳ್ಳೆಪ್ಪ ಮತ್ತು ಪತ್ನಿ ಅವರ ಸುಖಿ ದಾಂಪತ್ಯಕ್ಕೆ ಸಾಕ್ಷಿಯೆಂಬಂತೆ ಮೂವರು ಮಕ್ಕಳಿದ್ದಾರೆ. ಪತಿ-ಪತ್ನಿ ಇಬ್ಬರು ಕುರಿ ಕಾಯ್ದುಕೊಂಡು ಜೀವನ ಸಾಗಿಸುತ್ತಿದ್ದರು.

ಆದರೆ ಹಲವು ತಿಂಗಳಿಂದ ಡಿಳ್ಳೆಪ್ಪಗೆ ಪರಿಯಚನಾಗಿದ್ದ ಸಣ್ಣನಾಗಪ್ಪ ಎಂಬಾತ ಈ ಕುಟುಂಬಕ್ಕೆ ಹತ್ತಿರವಾಗಿದ್ದ. ಡಿಳ್ಳೆಪ್ಪನಿಗೆ ಮಾವ ಎನ್ನುತ್ತಿದ್ದ ಸಣ್ಣನಾಗಪ್ಪ ಆ ಕುಟುಂಬದ ಸದಸ್ಯನಂತೆ ಇದ್ದ. ಆದರೆ ಕಳೆದ ಏಳು ತಿಂಗಳ ಹಿಂದೆ ಡಿಳ್ಳೆಪ್ಪನಿಗೆ ತನ್ನ ಪತ್ನಿಯ ಮೇಲೆ ಸಂಶಯ ಬಂದಿತ್ತು. ಸಣ್ಣನಾಗಪ್ಪ ಮತ್ತು ತನ್ನ ಪತ್ನಿ ನಡುವೆ ಅಕ್ರಮ ಸಂಬಂಧವಿದೆ ಎಂಬುದು ಡಿಳ್ಳೆಪ್ಪನಿಗೆ ಗೊತ್ತಾಗಿತ್ತು.

ಇದನ್ನ ತಿಳಿದ ಡಿಳ್ಳೆಪ್ಪ ಪತ್ನಿಗೆ ಬುದ್ಧಿ ಮಾತು ಹೇಳಿದ್ದ. ಅಲ್ಲದೇ, ಸುಧಾರಿಸಿಕೊಂಡು ಸಂಸಾರ ನಡೆಸುವಂತೆ ತಿಳಿಸಿದ್ದ. ಆದರೆ ಆರು ತಿಂಗಳ ಹಿಂದೆ ಡಿಳ್ಳೆಪ್ಪನ ಪತ್ನಿ ಸಣ್ಣನಾಗಪ್ಪನ ಜೊತೆ ತನ್ನ ಜೊತೆ ಇಬ್ಬರು ಗಂಡು ಮಕ್ಕಳನ್ನು ಕರೆದುಕೊಂಡು ಪರಾರಿಯಾಗಿದ್ದಾಳಂತೆ.

ಸಣ್ಣನಾಗಪ್ಪ ಮತ್ತು ತನ್ನ ಪತ್ನಿ ಮನೆಯಿಂದ ಹೊರಗೆ ಹೋಗುವಾಗ 1 ಲಕ್ಷ 50 ಸಾವಿರ ರೂಪಾಯಿ ಹಾಗೂ 4 ತೊಲೆ ಬಂಗಾರ ತೆಗೆದುಕೊಂಡು ಹೋಗಿದ್ದಾರೆ ಎಂದು ಪತಿ ಡಿಳ್ಳೆಪ್ಪ ಆರೋಪಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಡಿಳ್ಳೆಪ್ಪನು ಸಂಬಂಧಿಕರ ಮನೆ, ಸ್ನೇಹಿತರ ಮನೆ ಸೇರಿದಂತೆ ಎಲ್ಲಾ ಕಡೆ ಹುಡುಕಾಟ ನಡೆಸಿದ್ದಾನೆ. ಆದರೆ ಎಲ್ಲಿಯೂ ಪತ್ತೆಯಾಗದ ಕಾರಣ ರಾಣೆಬೆನ್ನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತನ್ನ ಪತ್ನಿ ನಾಪತ್ತೆಯಾಗಿ ಏಳು ತಿಂಗಳಾಗುತ್ತ ಬಂದರೂ ಇನ್ನೂ ಪತ್ತೆಯಾಗದಿರುವುದು ಡಿಳ್ಳೆಪ್ಪನಿಗೆ ತೀವ್ರ ದುಃಖ ತಂದಿದೆ.

ಈ ಕುರಿತಂತೆ ಪೊಲೀಸ್ ಅಧಿಕಾರಿಗಳು ಡಿಳ್ಳೆಪ್ಪ ಪತ್ನಿ ಮತ್ತು ಮಕ್ಕಳ ಭಾವಚಿತ್ರವಿರುವ ಭಿತ್ತಿಪತ್ರಗಳನ್ನು ಅಂಟಿಸಿದ್ದಾರೆ. ಈ ಕುರಿತಂತೆ ವಿಶೇಷ ತಂಡ ರಚಿಸಲಾಗಿದ್ದು, ಆದಷ್ಟು ಬೇಗ ಡಿಳ್ಳೆಪ್ಪನಿಗೆ ಪತ್ನಿ ಮತ್ತು ಮಕ್ಕಳನ್ನು ಕರೆ ತರುವ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ಕುಪ್ವಾರಾ​ ಎನ್​ಕೌಂಟರ್: ಪಾಕ್ ಭಯೋತ್ಪಾದಕ ಸೇರಿ ಎಲ್​​ಇಟಿಯ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಸೇನೆ

Last Updated : Jun 7, 2022, 1:27 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.