ETV Bharat / state

ಬಾಲಕಿಗೆ ಅಶ್ಲೀಲ ವಿಡಿಯೋ ಕಳಿಸುತ್ತಿದ್ದವನನ್ನು ಜೈಲಿಗೆ ಅಟ್ಟಿದ ಪೊಲೀಸರು - ಹಾವೇರಿ ಸುದ್ದಿ

ಬಾಲಕಿಯ ತಂದೆ ಹಾವೇರಿ ಮಹಿಳಾ ಠಾಣೆಯಲ್ಲಿ ಪೋಕ್ಸೋ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಹಾವೇರಿ ಪೊಲೀಸರು ಆರೋಪಿ ವಸಂತನನ್ನ ಬಂಧಿಸಿ ಜೈಲಿಗಟ್ಟಿದ್ದಾರೆ..

vasantha Ravanakar
ವಸಂತ ರೇವಣಕರ್
author img

By

Published : Oct 3, 2020, 10:30 PM IST

ಹಾವೇರಿ : 16 ವರ್ಷದ ಬಾಲಕಿಗೆ ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋ ಕಳಿಸುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಹಾವೇರಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಯನ್ನ 30 ವರ್ಷದ ವಸಂತ ರೇವಣಕರ್ ಎಂದು ಗುರುತಿಸಲಾಗಿದೆ. ಆರೋಪಿಯ ಸಹೋದರನದ್ದು ಮೊಬೈಲ್ ರಿಪೇರಿ ಮಾಡುವ ಅಂಗಡಿ ಇದೆ.

ಆರೋಪಿ ಅಂಗಡಿಗೆ ಹೋದಾಗ ಬಾಲಕಿ ರಿಪೇರಿಗೆಂದು ಬಿಟ್ಟಿದ್ದ ಮೊಬೈಲ್‌ನಿಂದ ನಂಬರ್ ತಿಳಿದುಕೊಂಡಿದ್ದಾನೆ. ಆರಂಭದಲ್ಲಿ ಸಂದೇಶಗಳನ್ನು ಕಳಿಸುತ್ತಿದ್ದ ವಸಂತ, ನಂತರ ನಿತ್ಯ ಅಶ್ಲೀಲ ವಿಡಿಯೋ ಕಳಿಸಲಾರಂಭಿಸಿದ್ದಾನೆ. ಇದರಿಂದ ಬೇಸತ್ತ ಬಾಲಕಿ ವಿಷಯವನ್ನ ತಂದೆಗೆ ತಿಳಿಸಿದ್ದಾಳೆ.

ಬಾಲಕಿಗೆ ಅಶ್ಲೀಲ ವಿಡಿಯೋ ಕಳಿಸುತ್ತಿದ್ದ ಆರೋಪಿ ಬಂಧನ

ಬಾಲಕಿಯ ತಂದೆ ಹಾವೇರಿ ಮಹಿಳಾ ಠಾಣೆಯಲ್ಲಿ ಪೋಕ್ಸೋ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಹಾವೇರಿ ಪೊಲೀಸರು ಆರೋಪಿ ವಸಂತನನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.