ETV Bharat / state

ಶಿಕ್ಷಣ ದುಬಾರಿಯಾಗುತ್ತಿರುವುದೇ ಭ್ರಷ್ಟಾಚಾರಕ್ಕೆ ಕಾರಣ: ಪಂಡಿತ ಶಿವಾಚಾರ್ಯ ಶ್ರೀ ಹೇಳಿಕೆ

ಕೊಪ್ಪಳದ ಗವಿಸಿದ್ದೇಶ್ವರಮಠದ ಗವಿಸಿದ್ದೇಶ್ವರ ಶ್ರೀಗಳು ಗುರುವಾರ ಸಾರ್ವಜನಿಕ ಸಭೆಯಲ್ಲಿ ಕಣ್ಣೀರು ಹಾಕಿದ್ದನ್ನು ಉಲ್ಲೇಖಿಸಿ ಶ್ರೀಗಳು ಮಾತನಾಡುತ್ತಿದ್ದರು.

Dr Panditaradhya Shivacharya Swami
ಪಂಡಿತ ಶಿವಾಚಾರ್ಯ ಶ್ರೀ
author img

By

Published : Jun 24, 2022, 10:55 PM IST

ಹಾವೇರಿ: ಬಹುಶಃ ಹಿರಿಯಶ್ರೀಗಳು ನಮ್ಮನ್ನ ಆಯ್ಕೆ ಮಾಡದಿದ್ದರೇ ನಾನು ಸಹ ಯಾರದಾದರೂ ಮನೆಯಲ್ಲಿ ಸಂಬಳ ಇರಬೇಕಾಗಿತ್ತು. ಇಂದು ಶಿಕ್ಷಣ ದುಬಾರಿಯಾಗುತ್ತಿರುವದೇ ಭ್ರಷ್ಟಾಚಾರಕ್ಕೆ ಕಾರಣವಾಗಿದೆ. ಎಲ್ಲರಿಗೂ ಉಚಿತ ಶಿಕ್ಷಣ ನೀಡಿದ್ದೇ ಆದರೆ ಭ್ರಷ್ಟಾಚಾರ ಸಹ ಇರುವದಿಲ್ಲ ಎಂದು ಸಾಣಿಹಳ್ಳಿಮಠದ ಪಂಡಿತ ಶಿವಾಚಾರ್ಯ ಶ್ರೀಗಳು ತಿಳಿಸಿದರು.

ಶಿಕ್ಷಣ ದುಬಾರಿಯಾಗುತ್ತಿರುವದೇ ಭ್ರಷ್ಟಾಚಾರಕ್ಕೆ ಕಾರಣ

ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕಿನ ಮಾಸೂರಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಕೊಪ್ಪಳದ ಗವಿಸಿದ್ದೇಶ್ವರಮಠದ ಗವಿಸಿದ್ದೇಶ್ವರ ಶ್ರೀಗಳು ಗುರುವಾರ ಸಾರ್ವಜನಿಕ ಸಭೆಯಲ್ಲಿ ಕಣ್ಣೀರು ಹಾಕಿದ್ದನ್ನು ಉಲ್ಲೇಖಿಸಿ ಅವರು ಮಾತನಾಡುತ್ತಿದ್ದರು. ಗವಿಸಿದ್ದೇಶ್ವರ ಶ್ರೀಗಳು ಸ್ವಾರ್ಥಕ್ಕಾಗಿ ಕಣ್ಣೀರು ಹಾಕಲಿಲ್ಲಾ ಬದಲಿಗೆ ತಮ್ಮ ಗುರುಗಳು ತನಗೆ ಆಶ್ರಯ ನೀಡಿ ಶಿಕ್ಷಣ ನೀಡಿದ್ದರಿಂದ ನಾನು ಈ ಸ್ಥಾನಕ್ಕೆ ಬಂದಿದ್ದೇನೆ ಎಂಬುದನ್ನು ನೆನೆದು ಗವಿಸಿದ್ದೇಶ್ವರ ಶ್ರೀಗಳು ಕಣ್ಣೀರು ಹಾಕಿದ್ದಾರೆ ಎಂದು ಶ್ರೀಗಳು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಎಲ್ಲದರಲ್ಲಿ ಸಂಸ್ಕೃತಿ ಇದೆ. ಬಸವಣ್ಣನವರು ದುಡಿಯುವ ಸಂಸ್ಕೃತಿ ಪ್ರಮಾಣಿಕತೆ ಸಂಸ್ಕೃತಿ ಎಂದು ಕಲಿಸಿದರು. ಪ್ರತಿ ತಾಯಿ ಮಗನಿಗೆ ಯಾವ ವಸ್ತು ಪುಕ್ಕಟೆಯಾಗುತ್ತೆ ಅದನ್ನ ಸ್ವೀಕರಿಸಬೇಡಾ ಎಂದು ತಿಳಿಸಿದರೇ ಸಾಕು. ನಮ್ಮ ಶಾಲೆ ಕಾಲೇಜು ಮಕ್ಕಳಿಗೆ ಈ ಮಾತು ಕಲಿಸಿದರೆ ಭಾರತ ಮತ್ತೆ ವಿಶ್ವಗುರುವಾಗುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ: ಸದ್ದಿಲ್ಲದೆ ಎಂಗೇಜ್​ ಆದ ತಿಥಿ ಸಿನಿಮಾದ ನಟಿ ಪೂಜಾ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.