ಹಾವೇರಿ: ಬೆಳೆಗಳ ರಕ್ಷಣೆಗೆ ರೈತರು ಹಾಕಿದ್ದ ಬಲೆಗೆ ಚಿರತೆ ಬಿದ್ದ ಘಟನೆ ಜಿಲ್ಲೆಯ ರಟ್ಟೀಹಳ್ಳಿ ತಾಲೂಕಿನ ಕೋಡಮಗ್ಗಿ ಗ್ರಾಮದಲ್ಲಿ ನಡೆದಿದೆ.
ಆಹಾರ ಹುಡುಕಿಕೊಂಡು ಬಂದ ಚಿರತೆಯು ಜಮೀನಿಗೆ ಹಾಕಿದ ತಂತಿ ಬೇಲಿಗೆ ಕಾಲು ಸಿಕ್ಕಿಕೊಂಡು ಓಡಲು ಸಾಧ್ಯವಾಗದೆ ಅಲ್ಲಿಯೇ ಒದ್ದಾಡುತ್ತಿತ್ತು. ಚಿರತೆ ಕಂಡ ಸ್ಥಳೀಯರು ಆತಂಕಗೊಂಡು ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ವಲಯ ಅರಣ್ಯಾಧಿಕಾರಿ ಪರಮೇಶಪ್ಪ ಪೇಲನವರ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಪರಿಶೀಲನೆ ನಡೆಸಿ, ಚಿರತೆ ರಕ್ಷಿಸಿ ಅರಣ್ಯಕ್ಕೆ ಬಿಟ್ಟಿದ್ದಾರೆ.
ಇದನ್ನೂ ಓದಿ: ಬೆಳ್ತಂಗಡಿಯಲ್ಲಿ ದಲಿತ ಯುವಕನ ಹತ್ಯೆ ಪ್ರಕರಣ: ಆರೋಪಿ ಬಂಧಿಸುವಂತೆ ಸಿದ್ದು ಒತ್ತಾಯ