ETV Bharat / state

ಮೆಕ್ಕೆಜೋಳ ಟ್ರಾಕ್ಟರ್​​ಗೆ ಲಾರಿ ಡಿಕ್ಕಿ... ಇಬ್ಬರಿಗೆ ಗಾಯ.

ಮೆಕ್ಕೆಜೋಳ ತುಂಬಿಕೊಂಡು ಹೋಗುತ್ತಿದ್ದ ಟ್ರಾಕ್ಟರ್​ಗೆ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದಿದ್ದು, ಪರಿಣಾಮ ಇಬ್ಬರು ಗಾಯಗೊಂಡ ಘಟನೆ ತಾಲೂಕಿನ ಹನುಮನಮಟ್ಟಿ ಬಳಿ ನಡೆದಿದೆ.

author img

By

Published : Jan 30, 2020, 4:56 AM IST

larry-collides-with-a-maize-tractor-two-injured
ಮೆಕ್ಕೆಜೋಳ ಟ್ರಾಕ್ಟರ್​​ಗೆ ಲಾರಿ ಡಿಕ್ಕಿ... ಇಬ್ಬರಿಗೆ ಗಾಯ.

ರಾಣೆಬೆನ್ನೂರು: ಮೆಕ್ಕೆಜೋಳ ತುಂಬಿಕೊಂಡು ಹೋಗುತ್ತಿದ್ದ ಟ್ರಾಕ್ಟರ್​ಗೆ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದಿದ್ದು, ಪರಿಣಾಮ ಇಬ್ಬರು ಗಾಯಗೊಂಡ ಘಟನೆ ತಾಲೂಕಿನ ಹನುಮನಮಟ್ಟಿ ಬಳಿ ನಡೆದಿದೆ.

ಟ್ರಾಕ್ಟರ್​ನಲ್ಲಿದ್ದ ರಮೇಶ (38) ಮತ್ತು ರಮೇಶ ಲಮಾಣಿ (29) ಗಾಯಗೊಂಡ ವ್ಯಕ್ತಿಗಳು.

ಮೆಕ್ಕೆಜೋಳ ಮಾರಾಟ ಮಾಡಲು ರಮೇಶ ಟ್ರಾಕ್ಟರ್​ನಲ್ಲಿ ರಾಣೆಬೆನ್ನೂರು ನಗರಕ್ಕೆ ಬರುತ್ತಿದ್ದರು. ಈ ನಡುವೆ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಹಿಂಬದಿಯಲ್ಲಿ ಲಾರಿ ಬಂದು ಡಿಕ್ಕಿಯಾಗಿದೆ. ಪರಿಣಾಮ ಟ್ರಾಕ್ಟರ್ ಮಗುಚಿ ಬಿದ್ದಿದ್ದು, ಅದೃಷ್ಟವಶಾತ್ ಟ್ರಾಕ್ಟರ್ ಒಳಗೆ ಇದ್ದ ವ್ಯಕ್ತಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಗಾಯಗೊಂಡವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆ ಕುರಿತಂತೆ ರಾಣೆಬೆನ್ನೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.