ETV Bharat / state

ಸಿಎಂ ಜಾತಿ ಮೇಲೆ, ನಾವು ನೀತಿ ಮೇಲೆ ರಾಜಕಾರಣ ಮಾಡುತ್ತಿದ್ದೇವೆ: ಡಿ ಕೆ ಶಿವಕುಮಾರ್‌

ಹೆಚ್‌ಡಿಕೆ ಮೇಲೆ ಗೌರವ ಇದೆ. ವೈಯಕ್ತಿಕ ನಿಂದನೆ ಮಾಡಲ್ಲ. ಯುದ್ಧ ಏನೇ ಇದ್ರು ಸದನದಲ್ಲಿ ಮಾಡುತ್ತೇವೆ. ಸಿಎಂ ಜಾತಿ ಮೇಲೆ, ನಾವು ನೀತಿ ಮೇಲೆ ರಾಜಕಾರಣ ಮಾಡುತ್ತಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಹಾನಗಲ್‌ನಲ್ಲಿ ಹೇಳಿದ್ದಾರೆ.

kpcc president dk shivakumar speech in honkana, hangal
ಸಿಎಂ ಜಾತಿ ಮೇಲೆ, ನಾವು ನೀತಿ ಮೇಲೆ ರಾಜಕಾರಣ ಮಾಡುತ್ತಿದ್ದೇವೆ - ಡಿಕೆ ಶಿವಕುಮಾರ್‌
author img

By

Published : Oct 21, 2021, 6:06 PM IST

ಹಾನಗಲ್‌(ಹಾವೇರಿ): ನಾನು ಯಾವತ್ತು ವೈಯಕ್ತಿಕ ನಿಂದನೆ ಮಾಡಲ್ಲ. ವೈಯಕ್ತಿಕ ನಿಂದನೆ ಮೇಲೆ ವಿಶ್ವಾಸವೂ ಇಲ್ಲ. ನನಗೆ ಸಿಎಂ ಮೇಲೆ ಗೌರವ ಇದೆ. ಮುಖ್ಯಮಂತ್ರಿ ಕುರ್ಚಿ ಮೇಲೆ ಗೌರವ ಇದೆ. ಸಿಎಂ ಜಾತಿ ಮೇಲೆ. ನಾವೂ ನೀತಿ ಮೇಲೆ ರಾಜಕಾರಣ ಮಾಡುತ್ತಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಹೇಳಿದ್ದಾರೆ.

ಹಾನಗಲ್ ಉಪಚುನಾವಣೆ ಪ್ರಚಾರ ಹಿನ್ನೆಲೆಯಲ್ಲಿ ಹೊಂಕಣ ಗ್ರಾಮದಲ್ಲಿ ಪ್ರಚಾರದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಪ್ರಚಾರವನ್ನ ಅಡ್ಡ ದಾರಿಗೆ ತಗೆದುಕೊಂಡು ಹೋಗುತ್ತಾರೆ. ಡಬಲ ಇಂಜಿನ್ ಸರ್ಕಾರ ಅಂತಾರೆ. ಅವರ ಬಳಿ ಹಣವೇ ಇಲ್ಲ. ಮಕ್ಕಳಿಗೆ ಬಿಸಿಯೂಟ ಕೊಡಲು ಅವರ ಬಳಿ ಹಣ ಇಲ್ಲ. ಇದೇ 25 ರಿಂದ ಶಾಲೆ ಆರಂಭ ಅಂತಾರೆ, ಮಕ್ಕಳಿಗೆ ಬಿಸಿಯೂಟ ಕೊಡಲು ಆಗಲು ಆಗದಿದ್ರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.

ಅಂಗನವಾಡಿಯನ್ನ ಇಂದಿರಾಗಾಂಧಿ ಆರಂಭ ಮಾಡಿದ್ರು. ಎಸ್ ಎಂ ಕೃಷ್ಣ ನೇತೃತ್ವದ ಸರ್ಕಾರ ಆರಂಭ ಮಾಡಿದ ಯೋಜನೆ ಅದು. ಸರ್ಕಾರ ಅಭಿವೃದ್ಧಿಯ ಬಗ್ಗೆ ಚರ್ಚೆ ಮಾಡುತ್ತಿಲ್ಲ. ಜನರ ಜೀವನದ ಬದುಕು ಬದಲಾವಣೆ ಆಗಿಲ್ಲ. ಮನೆ ಕೊಟ್ಟಿದ್ದೇವೆ ಅಂತಾರೆ. ಯಾರಿಗೆ ಕೊಟ್ಟಿದ್ದಾರೆ ಪಟ್ಟಿ ಬಿಡುಗಡೆ ಮಾಡಲಿ ಎಂದು ಹೇಳಿದರು.

ಹೆಚ್‌ಡಿಕೆ ಮೇಲೆ ಗೌರವ ಇದೆ. ವೈಯಕ್ತಿಕ ನಿಂದನೆ ಮಾಡಲ್ಲ. ಯುದ್ಧ ಏನೇ ಇದ್ರು ಸದನದಲ್ಲಿ ಮಾಡುತ್ತೇವೆ. ಪ್ರಧಾನಿ ಬಗ್ಗೆ ನಮ್ಮವರು ಟ್ವೀಟ್ ಮಾಡಿದಾಗ 10 ನಿಮಿಷದಲ್ಲಿ ಡಿಲೀಟ್ ಮಾಡಿಸಿ ಕ್ಷಮೆ ಕೇಳಿದ್ದೇವೆ ಎಂದ ಡಿಕೆ ಶಿವಕುಮಾರ್‌, ಮಹದಾಯಿ ಯೋಜನೆ ಕಾಮಗಾರಿ ಯಾಕೆ ಆರಂಭ ಮಾಡುತ್ತಿಲ್ಲ ಎಂದರು.

ಡಿಕೆಶಿಗೆ ಹಣದ ಹೊಳೆ ಹರಿಸಿದ ಅನುಭವ ಇದೆ ಅನ್ನೋ ಸಚಿವ ಮುನ್ನಿರತ್ನ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಅಯ್ಯೋ ಮುನ್ನಿರತ್ನ ಬಗ್ಗೆ ಏನು ಮಾತನಾಡೋದು ಬಿಡಿ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.