ETV Bharat / state

ಕಟಗೆಹಳ್ಳಿಮಠದ ಡಾ ಮಹಾಂತೇಶ್ವರ ಮಹಾಸ್ವಾಮೀಜಿ ಲಿಂಗೈಕ್ಯ - ನಡೆದಾಡುವ ದೇವರು

ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಸ್ವಾಮೀಜಿ ಚಿಕಿತ್ಸೆ ಫಲಿಸದೇ ಲಿಂಗೈಕ್ಯರಾಗಿದ್ದಾರೆ.

Dr Mahantheshwara Mahaswamiji passed away
ಕಟಗೆಹಳ್ಳಿಮಠದ ಡಾ ಮಹಾಂತೇಶ್ವರ ಮಹಾಸ್ವಾಮಿಜಿ ಲಿಂಗೈಕ್ಯ
author img

By ETV Bharat Karnataka Team

Published : Sep 16, 2023, 10:53 AM IST

ಹಾವೇರಿ: ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ಕಟಗೆಹಳ್ಳಿಮಠದ ಸ್ವಾಮೀಜಿ ಡಾ. ಮಹಾಂತೇಶ್ವರ ಮಹಾಸ್ವಾಮಿಜಿ ಲಿಂಗೈಕ್ಯರಾಗಿದ್ದಾರೆ. ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನಡೆದಾಡುವ ದೇವರು ಎಂದು ಸ್ವಾಮೀಜಿ‌ ಪ್ರಸಿದ್ಧಿ ಪಡೆದಿದ್ದರು. ಡಾ.ಮಹಾಂತೇಶ್ವರ ಸ್ವಾಮೀಜಿಗೆ 72 ವರ್ಷ ವಯಸ್ಸಾಗಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ಸ್ವಾಮೀಜಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಸ್ವಾಮೀಜಿ ಶುಕ್ರವಾರ ರಾತ್ರಿ ಲಿಂಗ್ಯಕ್ಯರಾಗಿದ್ದಾರೆ.

ಅರವಿಂದ್ ಘೋಷ್ ಅವರ‌ ಬಗ್ಗೆ ಸಂಶೋಧನೆ ಮಾಡಿದ್ದ ಸ್ವಾಮೀಜಿ ಗೌರವ ಡಾಕ್ಟರೇಟ್ ಪಡೆದಿದ್ದರು. ಶ್ರೀಗಳು ಲಿಂಗ್ಯಕ್ಯರಾಗಿದ್ದು ಸಾವಿರಾರು ಭಕ್ತರಲ್ಲಿ ದುಃಖ ಮಡುಗಟ್ಟಿದೆ. ಸಾಣಿಹಳ್ಳಿ ಶ್ರೀಗಳು ಮಹಾಂತೇಶ್ವರ ಶ್ರೀಗಳ ಅಂತಿಮ ದರ್ಶನ ಪಡೆದರು. ಶನಿವಾರ ಸಂಜೆ 4.30ಕ್ಕೆ ಚಳಗೇರಿಯ ಕಟ್ಟಿಗೆಹಳ್ಳಿಮಠದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಹಿಂದೂ ವೀರಶೈವ ಪದ್ಧತಿಯಂತೆ ಸಂಜೆ ಅಂತ್ಯಕ್ರಿಯೆ ನಡೆಯಲಿದೆ.

ಇದನ್ನೂ ಓದಿ : 'ಚಕ್​ ದೇ ಇಂಡಿಯಾ' ಖ್ಯಾತಿಯ ಬಾಲಿವುಡ್​ ನಟ ರಿಯೊ ಕಪಾಡಿಯಾ ನಿಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.