ಹಾವೇರಿ: ರಾಜ್ಯ ಚುನಾವಣಾ ಕಣ ರಂಗೇರಿದೆ. ಅತಿರಥ - ಮಹಾರಥ ನಾಯಕರೆಲ್ಲ ನಾಮಪತ್ರ ಸಲ್ಲಿಸಿ ಅಖಾಡಕ್ಕೆ ಧುಮುಕುತ್ತಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಸಹ ಇಂದು ತಮ್ಮ ಉಮೇದುವಾರಿಕೆ ಸಲ್ಲಿಕೆ ಮಾಡಿದರು. ಚಿತ್ರನಟ ಸುದೀಪ್ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ, ಸಚಿವ ಗೋವಿಂದ ಕಾರಜೋಳ ಜೊತೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ನಾಮಿನೇಷನ್ ಸಲ್ಲಿಕೆ ಬಳಿಕ ಮಾತನಾಡಿದ ಅವರು ಚುನಾವಣೆಯಲ್ಲಿ ಪಕ್ಷ ನಿರೀಕ್ಷೆಯಂತೆ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
-
#WATCH | BJP national president JP Nadda, Karnataka CM Basavaraj Bommai, Kannada actor Kiccha Sudeep and other BJP leaders hold a road show in Shiggaon.
— ANI (@ANI) April 19, 2023 " class="align-text-top noRightClick twitterSection" data="
Karnataka CM filed his nomination from the Assembly constituency. pic.twitter.com/Es4iOq5xCb
">#WATCH | BJP national president JP Nadda, Karnataka CM Basavaraj Bommai, Kannada actor Kiccha Sudeep and other BJP leaders hold a road show in Shiggaon.
— ANI (@ANI) April 19, 2023
Karnataka CM filed his nomination from the Assembly constituency. pic.twitter.com/Es4iOq5xCb#WATCH | BJP national president JP Nadda, Karnataka CM Basavaraj Bommai, Kannada actor Kiccha Sudeep and other BJP leaders hold a road show in Shiggaon.
— ANI (@ANI) April 19, 2023
Karnataka CM filed his nomination from the Assembly constituency. pic.twitter.com/Es4iOq5xCb
ಇದಕ್ಕೂ ಮುನ್ನ ಶಿಗ್ಗಾಂವಿಯಲ್ಲಿ ತಮ್ಮ ಬಲ ಪ್ರದರ್ಶನ ತೋರಿಸಿದರು. ಇಂದು ತಮ್ಮ ಸ್ವಕ್ಷೇತ್ರ ಶಿಗ್ಗಾಂವಿಯಲ್ಲಿ ಭರ್ಜರಿ ರೋಡ್ ಶೋ ನಡೆಸಿದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ನಟ ಕಿಚ್ಚ ಸುದೀಪ್ ಸೇರಿದಂತೆ ಬಿಜೆಪಿ ನಾಯಕರು ರೋಡ್ ಶೋದಲ್ಲಿ ಭಾಗಿಯಾಗಿದ್ದರು.
ತೆರೆದ ವಾಹನದಲ್ಲಿ ನಾಯಕರು ಮತದಾರರತ್ತ ಕೈಬೀಸುತ್ತಾ ಸಾಗಿದರು. ರೋಡ್ ಶೋ ನಡೆದ ರಸ್ತೆಯ ಇಕ್ಕೆಲಗಳಲ್ಲಿ ಭಾರೀ ಜನಸ್ತೋಮವೇ ಬಂದಿತ್ತು. ಸಿಎಂ ಜೊತೆಗೆ ಪ್ರಚಾರಕ್ಕೆ ಆಗಮಿಸಿರುವ ನಟ ಸುದೀಪ್ ಕೂಡ ಅಭಿಮಾನಿಗಳತ್ತ ಕೈಬೀಸಿದರು. ನೆಚ್ಚಿನ ನಟನನ್ನು ಕಾಣಲು ಜನರು ಆಗಮಿಸಿದ್ದರು. ಶಿಗ್ಗಾಂವಿಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ಬೃಹತ್ ರೋಡ್ ಶೋ ಆರಂಭವಾಯಿತು. ಹಳೆ ಬಸ್ ನಿಲ್ದಾಣದ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ, ತಾಲೂಕು ಕ್ರೀಡಾಂಗಣದಲ್ಲಿ ರೋಡ್ ಶೋ ಮುಕ್ತಾಯಗೊಂಡಿತು.
ರೋಡ್ ಶೋ ಗೂ ಮುನ್ನ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಪ್ರಧಾನಿ ಮೋದಿ ಮತ್ತು ಕನ್ನಡ ನಟ ಕಿಚ್ಚ ಸುದೀಪ್ ಅವರ ಪರ ಪ್ರಚಾರ ಮಾಡುವುದು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ನಿರೀಕ್ಷೆಯನ್ನು ಹೆಚ್ಚಿಸಿದೆ ಎಂದು ಹೇಳಿದರು.
ಇನ್ನು ರೋಡ್ ಶೋ ವೇಳೆ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ, ಕಾಂಗ್ರೆಸ್ ಎಂದರೆ ಭ್ರಷ್ಟಾಚಾರ ಮತ್ತು ಅಪರಾಧೀಕರಣ ಎಂದು ಟೀಕಾಪ್ರಹಾರ ನಡೆಸಿದರು. ಅಭಿವೃದ್ಧಿಗೆ ಮತ ನೀಡುವಂತೆ ಎಲ್ಲರಿಗೂ ಮನವಿ ಮಾಡಲು ಬಂದಿದ್ದೇನೆ ಎಂದು ಹೇಳಿದರು.
-
#WATCH | BJP national president JP Nadda, Karnataka CM Basavaraj Bommai, Kannada actor Kiccha Sudeep and other BJP leaders hold a road show in Shiggaon.
— ANI (@ANI) April 19, 2023 " class="align-text-top noRightClick twitterSection" data="
Karnataka CM Basavaraj Bommai filed his nomination from the Assembly constituency.#KarnatakaElection pic.twitter.com/tUCaD6srRv
">#WATCH | BJP national president JP Nadda, Karnataka CM Basavaraj Bommai, Kannada actor Kiccha Sudeep and other BJP leaders hold a road show in Shiggaon.
— ANI (@ANI) April 19, 2023
Karnataka CM Basavaraj Bommai filed his nomination from the Assembly constituency.#KarnatakaElection pic.twitter.com/tUCaD6srRv#WATCH | BJP national president JP Nadda, Karnataka CM Basavaraj Bommai, Kannada actor Kiccha Sudeep and other BJP leaders hold a road show in Shiggaon.
— ANI (@ANI) April 19, 2023
Karnataka CM Basavaraj Bommai filed his nomination from the Assembly constituency.#KarnatakaElection pic.twitter.com/tUCaD6srRv
ನಡ್ಡಾ ಬಳಿಕ ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಕನ್ನಡ ನಟ ಕಿಚ್ಚ ಸುದೀಪ್ ಸಾರ್ವಜನಿಕ ರ‍್ಯಾಲಿ ಉದ್ದೇಶಿಸಿ ಮಾತನಾಡಿದರು. ಇದಕ್ಕೂ ಮೊದಲು ನಟ ಕಿಚ್ಚ ಸುದೀಪ್ ಹುಬ್ಬಳ್ಳಿ ವಿಮಾನ ನಿಲ್ದಾಣದಕ್ಕೆ ಬಂದಿಳಿದರು. ಈ ವೇಳೆ ಅಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಸೇರಿದಂತೆ ಪಕ್ಷದ ಮುಖಂಡರನ್ನು ಭೇಟಿ ಮಾಡಿದರು. ಬಳಿಕ ಹಾವೇರಿಗೆ ಆಗಮಿಸಿದರು.
ತಾಲೂಕು ಮೈದಾನದಲ್ಲಿ ಸಮಾವೇಶ: ರೋಡ್ ಶೋ ಮುಕ್ತಾಯದ ಬಳಿಕ ತಾಲೂಕು ಮೈದಾನದಲ್ಲಿ ಸಮಾವೇಶ ನಡೆಯಿತು. ನಡ್ಡಾ, ಕಟೀಲ್, ಸುದೀಪ್ ಹಾಗೂ ಸಿಎಂ ಬೊಮ್ಮಾಯಿ ಸೇರಿದಂತೆ ವಿವಿಧ ಮುಖಂಡರು ಭಾಷಣ ಮಾಡಿದರು.
ಸಿಎಂ ಇಂದು ನಾಮಪತ್ರ ಸಲ್ಲಿಕೆ: ಏ.15ರಂದು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ನಾಮಪತ್ರ ಸಲ್ಲಿಸಲಿದ್ದಾರೆ.
ಓದಿ: ಇಂದು ಭರ್ಜರಿ ರೋಡ್ ಶೋ ಮೂಲಕ ಸಿಎಂ ನಾಮಪತ್ರ ಸಲ್ಲಿಕೆ.. ಬೊಮ್ಮಾಯಿಗೆ ಸುದೀಪ್, ನಡ್ಡಾ ಸಾಥ್