ETV Bharat / state

ರಕ್ತದಾನದಲ್ಲಿ ಸೆಂಚೂರಿ ಮಾಡಿದ ಸ್ನೇಹಮೈತ್ರಿ ಬ್ಲಡ್ ಆರ್ಮಿಯ ಕರಬಸಪ್ಪ ಗೊಂದಿ.. ಅಕ್ಕಿಆಲೂರಿನಲ್ಲಿ ರಕ್ತಸ್ರಾವ ಹೋರಾಟಗಾರರ ಉಚಿತ ಆರೈಕೆ ಕೇಂದ್ರ ಸ್ಥಾಪನೆ

ಸ್ನೇಹಮೈತ್ರಿ ರಕ್ತಸ್ರಾವ ಹೋರಾಟಗಾರರ ಉಚಿತ ಆರೈಕೆ ಸದನವನ್ನು ಹಾನಗಲ್ ತಾಲೂಕಿನ ಅಕ್ಕಿ ಆಲೂರು ಗ್ರಾಮದಲ್ಲಿ ತೆರೆಯಲಾಗಿದೆ.

Karabasappa Gondi
ಕರಬಸಪ್ಪ ಗೊಂದಿ
author img

By ETV Bharat Karnataka Team

Published : Oct 21, 2023, 10:29 AM IST

Updated : Oct 21, 2023, 10:49 AM IST

ನೂರು ಬಾರಿ ರಕ್ತದಾನ ಮಾಡಿದ ಕರಬಸಪ್ಪ ಗೊಂದಿ

ಹಾವೇರಿ : ಜಿಲ್ಲೆಯ ಹಾನಗಲ್ ತಾಲೂಕಿನ ಅಕ್ಕಿ ಆಲೂರು ಗ್ರಾಮ ರಕ್ತಸೈನಿಕರ ತವರೂರು ಎಂದೇ ಖ್ಯಾತಿ ಪಡೆದಿದೆ. ಈ ಗ್ರಾಮದ ಕರಬಸಪ್ಪ ಮನೋಹರ ಗೊಂದಿ ಅವರು ಇದೀಗ ಮತ್ತೊಂದು ದಾಖಲೆ ಮಾಡಿದ್ದಾರೆ. ನೂರು ಬಾರಿ ರಕ್ತದಾನ ಮಾಡಿದ ಹಾವೇರಿ ಜಿಲ್ಲೆಯ ಪ್ರಥಮ ರಕ್ತದಾನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

ಹೌದು, ನೂರನೇ ರಕ್ತದಾನ ಮತ್ತು ರಕ್ತಸ್ರಾವ ಹೋರಾಟಗಾರರ ಉಚಿತ ಆರೈಕೆ ಸದನದ ಉದ್ಘಾಟನಾ ಕಾರ್ಯಕ್ರಮ ಜಿಲ್ಲೆಯ ಹಾನಗಲ್ ತಾಲೂಕಿನ ಅಕ್ಕಿ ಆಲೂರು ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆಯಿತು. ಚಿಕ್ಕ ಕಾರ್ಯಕ್ರಮದಲ್ಲಿ ರಕ್ತಸ್ರಾವ ಉಚಿತ ಹೋರಾಟಗಾರರ ಆರೈಕೆ ಕೇಂದ್ರಕ್ಕೆ ಚಾಲನೆ ನೀಡಲಾಯಿತು. ಈ ಮೂಲಕ ರಾಜ್ಯದಲ್ಲಿ ಪ್ರಥಮ ಬಾರಿಗೆ ರಕ್ತಸ್ರಾವ ಹೋರಾಟಗಾರರ ಆರೈಕೆ ಸದನ ಲೋಕಾರ್ಪಣೆಗೊಂಡಿತು. ಈ ವೇಳೆ ರಕ್ತದಾನಿ ಕರಬಸಪ್ಪ ಗೊಂದಿ ನೂರನೇ ಬಾರಿ ರಕ್ತದಾನ ಮಾಡಿದರು. ಇವರ ಜೊತೆಗೆ 30ಕ್ಕೂ ಅಧಿಕ ದಾನಿಗಳು ರಕ್ತದಾನ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕರಬಸಪ್ಪ ಗೊಂದಿ, "ರಕ್ತದಾನದ ಬಗ್ಗೆ ಆರಂಭದಲ್ಲಿ ಸಾಕಷ್ಟು ಮೂಢನಂಬಿಕೆಗಳಿದ್ದವು. ಅದಕ್ಕಾಗಿ ಸ್ನೇಹ ಮೈತ್ರಿ ಬ್ಲಡ್ ಆರ್ಮಿ ಗ್ರೂಪ್ ರಚಿಸಿ ರಕ್ತದಾನದ ಮಹತ್ವ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸಲಾಯಿತು. ಆರಂಭದಲ್ಲಿ ರಕ್ತದಾನಕ್ಕೆ ಹಿಂದೇಟು ಹಾಕುತ್ತಿದ್ದ ಜನರು ಕ್ರಮೇಣ ರಕ್ತದಾನ ಮಾಡುತ್ತಿದ್ದಾರೆ" ಎಂದರು.

"ಸ್ನೇಹ ಮೈತ್ರಿ ಬ್ಲಡ್ ಆರ್ಮಿ ಸುಮಾರು 125 ರಕ್ತದಾನ ಶಿಬಿರ ಏರ್ಪಡಿಸಿದೆ. ಅದರಲ್ಲಿ ನೂರು ರಕ್ತದಾನ ಶಿಬಿರಗಳು ಹಾವೇರಿ ಜಿಲ್ಲೆಯಲ್ಲಿ ನಡೆದಿರುವುದು ವಿಶೇಷ. ಇನ್ನು ರಕ್ತಸೈನಿಕರ ತವರೂರು ಎಂಬ ಹೆಗ್ಗಳಿಕೆಗೆ ಭಾಜನವಾಗಿರುವ ಅಕ್ಕಿ ಆಲೂರಲ್ಲಿ 25 ಬಾರಿ ರಕ್ತದಾನ ಶಿಬಿರ ಏರ್ಪಡಿಸಿರುವುದು ವಿಶೇಷ. ಹಾವೇರಿ ಜಿಲ್ಲೆಯಲ್ಲಿ ಸುಮಾರು 200 ಕ್ಕೂ ಅಧಿಕ ಮಕ್ಕಳು ಥಲಸ್ಸಿಮಿಯಾ, ಹಿಮೋಫಿಲಿಯಾ ಮತ್ತು ಸಿಕಲ್ ಸೆಲ್​ ಸೇರಿದಂತೆ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಈ ಮಕ್ಕಳಿಗೆ ತಿಂಗಳಿಗೆ, ವಾರಕ್ಕೆ ಮತ್ತು ಚಿಕಿತ್ಸೆಗೆ ಅನುಗುಣವಾಗಿ ರಕ್ತ ಅವಶ್ಯಕವಾಗಿರುತ್ತದೆ. ರಕ್ತ ಹೊಂದಾಣಿಕೆ ಕಷ್ಟದ ಕೆಲಸವಾಗಿದೆ. ಅಲ್ಲದೇ, ಈ ಮಕ್ಕಳು ರಕ್ತ ಪಡೆಯಲು ಇಂಜೆಕ್ಷನ್‌ಗಾಗಿ ಪದೇ ಪದೇ ಜಿಲ್ಲಾಸ್ಪತ್ರೆಗೆ ಆಗಮಿಸಬೇಕಾಗುತ್ತದೆ. ಜಿಲ್ಲಾಸ್ಪತ್ರೆಯಲ್ಲಿ ಈ ಕುರಿತಂತೆ ಪ್ರತ್ಯೇಕವಾದ ವಿಭಾಗವಿಲ್ಲ. ಹೀಗಾಗಿ, ಜಿಲ್ಲಾಡಳಿತ ಮತ್ತು ದಾವಣಗೆರೆ ರಾಜ್ಯ ಹಿಮೋಫಿಲಿಯಾ ಸೊಸೈಟಿ ಸಹಯೋಗದಲ್ಲಿ ಸ್ನೇಹ ಮೈತ್ರಿ ಬ್ಲಡ್ ಆರ್ಮಿ ಸಹಕಾರದಿಂದ ಅಕ್ಕಿಆಲೂರಿನಲ್ಲಿ ರಕ್ತಸ್ರಾವ ಹೋರಾಟಗಾರರ ಆರೈಕ ಸದನ ಆರಂಭಿಸಿದ್ದೇವೆ ಎಂದರು.

ಜಿಲ್ಲೆಯ ರಕ್ತಸ್ರಾವ ಹೋರಾಟಗಾರ ಮಕ್ಕಳು ಈ ಸದನದಲ್ಲಿ ಚಿಕಿತ್ಸೆ ಪಡೆಯಬಹುದು. ಪ್ರತಿ ತಿಂಗಳು ಮೊದಲ ರವಿವಾರದಂದು ಇಲ್ಲಿ ಈ ರೀತಿಯ ಮಕ್ಕಳಿಗೆ ಎಲ್ಲಾ ರೀತಿಯ ಆರೋಗ್ಯದ ನೆರವು ನೀಡಲಾಗುತ್ತದೆ. ಮೊದಲೆಲ್ಲಾ ಈ ರೀತಿಯ ಮಕ್ಕಳಿಗೆ ರಕ್ತದಾನ ಮಾಡಲು ಸಾರ್ವಜನಿಕರಲ್ಲಿ ಪ್ರೋತ್ಸಾಹ ನೀಡುತ್ತಿದ್ದೆ. ಈಗ ಅಕ್ಕಿಆಲೂರಿನಲ್ಲಿ ಸದನ ತೆರೆದಿರುವುದು ಸಾಕಷ್ಟು ಸಂತಸ ತಂದಿದೆ. ಇದರ ಸದುಪಯೋಗವನ್ನು ಜಿಲ್ಲೆಯ ರಕ್ತಸ್ರಾವ ಹೋರಾಟಗಾರರು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಇದೇ ವೇಳೆ ಮಾತನಾಡಿದ ಹಾವೇರಿ ರಕ್ತಭಂಡಾರದ ಡಾ. ಬಸವರಾಜ ತಳವಾರ ಅವರು ಸ್ನೇಹ ಮೈತ್ರಿ ಬ್ಲಡ್ ಆರ್ಮಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ರಕ್ತದಾನ ಮಹತ್ವವನ್ನು ಸಾರುವಲ್ಲಿ ಸ್ನೇಹ ಮೈತ್ರಿ ಬ್ಲಡ್ ಆರ್ಮಿ ಮಹತ್ತರ ಪಾತ್ರವಹಿಸುತ್ತಿದೆ. ಅಲ್ಲದೆ, ಹಾವೇರಿ ಜಿಲ್ಲೆಯಲ್ಲಿ ಸಂಗ್ರಹವಾಗುವ ರಕ್ತದಲ್ಲಿ ಪ್ರತಿಶತ 60 ರಿಂದ 70 ರಷ್ಟು ಹಾನಗಲ್ ತಾಲೂಕಿನಿಂದ ಸಂಗ್ರಹವಾಗುತ್ತಿದೆ. ಇದಕ್ಕೆ ರಕ್ತದಾನಿ ಕರಬಸಪ್ಪ ಗೊಂದಿ ಜಾಗೃತಿ ಕಾರ್ಯಕ್ರಮ ಕಾರಣ ಎಂದು ತಿಳಿಸಿದರು.

ಇದನ್ನೂ ಓದಿ : ರಕ್ತದಾನದ ಜಾಗೃತಿಯ ಸದ್ದುದ್ದೇಶ : ಮಂಗಳೂರಿನಿಂದ ಕಾರ್ಗಿಲ್​ಗೆ ದಂಪತಿ ಬೈಕ್ ಪ್ರಯಾಣ

Last Updated : Oct 21, 2023, 10:49 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.