ಹಾವೇರಿ : ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಿಧನಕ್ಕೆ ಜಿಲ್ಲೆಯ ಜ್ಯೂನಿಯರ್ ರಾಜ್ ಕುಮಾರ ಅಶೋಕ್ ಬಸ್ತಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ನಗರದ ತಮ್ಮ ಮನೆಯಲ್ಲಿ ಅಪ್ಪು ಜೊತೆ ತೆಗೆಸಿಕೊಂಡ ಫೋಟೋ ಕೈಯಲ್ಲಿ ಹಿಡಿದು ಅಶೋಕ್ ಕಂಬನಿ ಮಿಡಿದಿದ್ದಾರೆ.
ತಾನು ಮೊದಲಿನಿಂದಲೂ ರಾಜಕುಮಾರ್ ಅಭಿಮಾನಿ. ಹೀಗಾಗಿ, ಪದೇಪದೆ ರಾಜಕುಮಾರ್ ಮನೆಗೆ ಹೋಗುತ್ತಿದ್ದೆ. ಪುಟ್ಟ ಮಗುವಾಗಿದ್ದನಿಂದ ಪುನೀತ್ ಚಿತ್ರಗಳಲ್ಲಿ ನಾಯಕ ನಟನಾಗಿ ಆಭಿನಯಿಸುವವರೆಗೆ ಅವರ ಜೊತೆ ಒಡನಾಟವಿತ್ತು. ಯುವಕರ ಕಣ್ಮಣಿಯಾಗಿದ್ದ ಪುನೀತ್ ಅಸುನೀಗಿದ್ದಾರೆ ಎಂದರೆ ನಂಬಲಾಗುತ್ತಿಲ್ಲ ಎಂದು ಅಶೋಕ್ ಬಸ್ತಿ ದುಃಖ ವ್ಯಕ್ತಪಡಿಸಿದ್ದಾರೆ.
![ಸಂತಾಪ ಸೂಚಿಸಿದ ಜ್ಯೂ.ರಾಜ್ ಕುಮಾರ್ ಅಶೋಕ್ ಬಸ್ತಿ](https://etvbharatimages.akamaized.net/etvbharat/prod-images/kn-hvr-01-juniior-raj-7202143_29102021161935_2910f_1635504575_134.png)
ಕಳೆದ ಎರಡು ವರ್ಷಗಳ ಹಿಂದೆ ಹಾವೇರಿಯಲ್ಲಿ ವರನಟ ರಾಜಕುಮಾರ್ ರಂಗಮಂದಿರ ನಿರ್ಮಾಣಕ್ಕೆ ಮುಂದಾದಾಗ ಅಪ್ಪು ಬಂದಿದ್ದರು ಎಂದು ಅಶೋಕ್ ಹಿಂದಿನ ನೆನಪುಗಳನ್ನು ಮೆಲುಕು ಹಾಕಿದರು. ಅವರನ್ನ ಕಳೆದುಕೊಂಡ ಚಿತ್ರರಂಗ ಬಡವಾಗಿದೆ ಎಂದು ಅಶೋಕ್ ಬಸ್ತಿ ಸಂತಾಪ ವ್ಯಕ್ತಪಡಿಸಿದರು.