ETV Bharat / state

ಹಾವೇರಿಯಲ್ಲಿ ಜೇಮ್ಸ್​​ದ್ದೇ ಹವಾ: ಪಟಾಕಿ ಸಿಡಿಸಿ ಸಂಭ್ರಮಿಸಿದ ಅಪ್ಪು ಫ್ಯಾನ್ಸ್​

author img

By

Published : Mar 17, 2022, 10:53 AM IST

ಹಾವೇರಿಯ ಚಿತ್ರಮಂದಿರಗಳಲ್ಲಿ ಪುನೀತ್​ ಜೇಮ್ಸ್​ ಸಿನಿಮಾ ಅದ್ಧೂರಿಯಾಗಿ ರಿಲೀಸ್​ ಆಗಿದೆ. ಸಿನಿಮಾ ಥಿಯೇಟರ್​ಗಳ ಮುಂದೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ.

James movie grand release Haveri theaters
ಹಾವೇರಿಯಲ್ಲಿ ಜೇಮ್ಸ್ ಸಿನಿಮಾ ರಿಲೀಸ್​

ಹಾವೇರಿ: ಪವರ್​​ ಸ್ಟಾರ್​ ಪುನೀತ್​ ರಾಜ್​ ಕುಮಾರ್​ ಅಭಿನಯದ ಜೇಮ್ಸ್​​ ಸಿನಿಮಾ ನಗರ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಅಪ್ಪು ಅಭಿಮಾನಿಗಳು ಥಿಯೇಟರ್​​ಗಳ ಮುಂದೆ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಹಾವೇರಿಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ ಅಪ್ಪು ಫ್ಯಾನ್ಸ್​

ನಗರದ ಸರಸ್ವತಿ ಮತ್ತು ಮಾಗಾವಿ ಚಿತ್ರಮಂದಿರಗಳ ಮುಂದೆ 25 ಅಡಿ ಬೃಹತ್ ಕಟೌಟ್ಸ್​ಗಳನ್ನು ನಿರ್ಮಿಸಿ, ವಿದ್ಯುತ್ ದೀಪ ಮತ್ತು ದೊಡ್ಡ ಹೂವಿನ ಹಾರಗಳಿಂದ ಅಲಂಕರಿಸಿದ್ದರು. ಮುಂಜಾನೆ 7.30 ಕ್ಕೆ ಆರಂಭವಾದ ಪ್ರದರ್ಶನಕ್ಕೆ ಅಭಿಮಾನಿಗಳ ದಂಡೇ ಆಗಮಿಸಿತ್ತು. ಚಿತ್ರಮಂದಿರದ ಮುಂದೆ ಜಾಂಜ್ ಮೇಳದ ಸದ್ದಿಗೆ ಅಭಿಮಾನಿಗಳು ಹೆಜ್ಜೆ ಹಾಕಿದರು. ಎಲ್ಲ ಚಿತ್ರಮಂದಿರಗಳು ಹೌಸ್​ಫುಲ್​ ಆಗಿವೆ.

ಜೇಮ್ಸ್​ ಸಿನಿಮಾ ಬಿಡುಗಡೆಯ ಜೊತೆಗೆ ಇಂದು ಪುನೀತ್ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳು, ಪುನೀತ್ ರಾಜಕುಮಾರ್ ಭಾವಚಿತ್ರದ ಮೆರವಣಿಗೆ ಆಯೋಜಿಸಿದ್ದಾರೆ. ಇದರ ಜೊತೆಗೆ ರಕ್ತದಾನ, ನೇತ್ರದಾನ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.

ಇದನ್ನೂ ಓದಿ: ಜೇಮ್ಸ್ ಜಾತ್ರೆ: ಅಪ್ಪು ಕಟೌಟ್ ಮುಂದೆ 1001 ಈಡುಗಾಯಿ ಒಡೆದ ಫ್ಯಾನ್ಸ್, ಪ್ರೇಕ್ಷಕರಿಗೆ ಚಿಕನ್ ಪಲಾವ್ ವಿತರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.