ETV Bharat / state

ವರದಾ ಮೈದುಂಬಿ ಹರಿದರೆ 25 ಗ್ರಾಮಗಳಿಗೆ ಸಮಸ್ಯೆ: ಸೇತುವೆ ಎತ್ತರ ಹೆಚ್ಚಿಸಲು ಗ್ರಾಮಸ್ಥರ ಮನವಿ - ಕಳಸೂರು ಸೇತುವೆ ಮುಳುಗಡೆ

ಜಿಲ್ಲೆಯ ಸವಣೂರು ತಾಲೂಕಿನ ಕಳಸೂರು, ಮಂಟಗಣಿ, ಕಲಕೋಟಿ ಸೇರಿದಂತೆ 25 ಗ್ರಾಮಗಳು ಜಿಲ್ಲಾಡಳಿತ ಕಚೇರಿಯಿಂದ ಕೇವಲ 10 ಕಿ.ಮೀ ಅಂತರದಲ್ಲಿವೆ. ಆದರೆ ಈ ಗ್ರಾಮಗಳಿಗೆ ಮಳೆಗಾಲ ಆರಂಭವಾಗುತ್ತಿದ್ದಂತೆ ಆತಂಕ ಶುರುವಾಗುತ್ತೆ.

If the Varada River is filled Disconnection of 25 villages in Haveri district
ವರದಾ ಮೈದುಂಬಿ ಹರಿದರೆ 25 ಗ್ರಾಮಗಳ ಸಂಪರ್ಕ ಕಡಿ
author img

By

Published : Jun 23, 2021, 7:16 AM IST

ಹಾವೇರಿ: ಜಿಲ್ಲಾ ಕೇಂದ್ರ ಹಾವೇರಿ ಸುತ್ತಮುತ್ತಲು ಇರುವ ಗ್ರಾಮಗಳಿಗೆ ಮಳೆಗಾಲ ಆರಂಭವಾಯಿತು ಅಂದ್ರೆ ಸಾಕು ಆತಂಕ ಶುರುವಾಗುತ್ತೆ. ಜಿಲ್ಲಾ ಕೇಂದ್ರದಿಂದ 10 ಕಿ.ಮೀ ದೂರದಲ್ಲಿರುವ ಸುಮಾರು 25 ಗ್ರಾಮಗಳ ಜನರ ಆತಂಕಕ್ಕೆ ಕಾರಣ ವರದಾ ನದಿ.

ವರದಾ ಮೈದುಂಬಿ ಹರಿದರೆ 25 ಗ್ರಾಮಗಳ ಸಂಪರ್ಕ ಕಡಿ

ವರದಾ ಜಲಾನಯನ ಪ್ರದೇಶಗಳಲ್ಲಿ ಮಳೆಯಾದರೆ ಸಾಕು ವರದಾ ನದಿ ಮೈದುಂಬಿ ಹರಿಯಲಾರಂಭಿಸುತ್ತದೆ. ಈ ನದಿ ಮೈದುಂಬಿದರೆ ಹಾವೇರಿ ಮತ್ತು 25 ಕ್ಕೂ ಅಧಿಕ ಗ್ರಾಮಗಳನ್ನು ಸಂಪರ್ಕಿಸುವ ಸವಣೂರು ತಾಲೂಕಿನ ಕಳಸೂರು ಸೇತುವೆ ಮುಳುಗಡೆಯಾಗುತ್ತೆ. ಪರಿಣಾಮ, ಈ ಸೇತುವೆಯನ್ನು ಅವಲಂಭಿಸಿರುವ ಸುಮಾರು 25 ಕ್ಕೂ ಅಧಿಕ ಗ್ರಾಮಗಳ ಜನರು ಜಿಲ್ಲಾಕೇಂದ್ರಕ್ಕೆ ಬರಲು ಹರಸಾಹಸಪಡುತ್ತಾರೆ.

10 ಕಿ.ಮೀ ದೂರದ ಜಿಲ್ಲಾ ಕೇಂದ್ರ ವರದಾ ನದಿ ತುಂಬಿದರೆ ಬೇರೆ ಮಾರ್ಗದಿಂದ ಬರಬೇಕಾದರೆ 30 ಕಿ.ಮೀ ದೂರವಾಗುತ್ತದೆ. ಸೇತುವೆ ಎತ್ತರ ಹೆಚ್ಚಿಸಿ ಎಂದು ಜಿಲ್ಲಾಡಳಿತಕ್ಕೆ ಗ್ರಾಮಸ್ಥರು ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.

ಇದನ್ನೂ ಓದಿ: ಮಳೆಯ ಆರ್ಭಟಕ್ಕೆ ಕೆರೆಗಳಂತಾದ ಜಮೀನುಗಳು.. ಬಿತ್ತನೆ ಮಾಡಿದ್ದೆಲ್ಲ ನೀರಲ್ಲಿ ಹೋಮ

ಪ್ರತಿವರ್ಷ ಮಳೆಗಾಲ ಆರಂಭವಾಗುತ್ತಿದ್ದಂತೆ ಈ ಸಮಸ್ಯೆ ತಲೆದೋರುತ್ತೆ. ಹಲವು ವರ್ಷಗಳಿಂದ ಜನಪ್ರತಿನಿಧಿಗಳಿಗೆ ಅಧಿಕಾರಿಗಳಿಗೆ ಸಮಸ್ಯೆಗಳನ್ನು ತಿಳಿಸಲಾಗಿದೆ. ಈ ವರ್ಷವಾದರೂ ಸೇತುವೆ ಎತ್ತರ ಮಾಡಿ ತಮ್ಮ ಸಮಸ್ಯೆ ದೂರ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.