ಹಾವೇರಿ : ಜಿಲ್ಲೆಯ ಕರ್ಜಗಿ ಗ್ರಾಮದಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆ ಪತಿಯೊಬ್ಬ ತನ್ನ ಪತ್ನಿಯ ಕುತ್ತಿಗೆಗೆ ಬ್ಲೇಡ್ ನಿಂದ ಕೊಯ್ದಿದ್ದಾನೆ.
ಕೌಟುಂಬಿಕ ಕಲಹದ ಹಿನ್ನೆಲೆ ಗಂಡನೆ ಹೆಂಡತಿಯ ಕುತ್ತಿಗೆಗೆ ಬ್ಲೇಡ್ ಹಾಕಿದ್ದಾನೆ. ತಾಲೂಕಿನ ಕರ್ಜಗಿ ಗ್ರಾಮದ ಸರೋಜಾ (28)ಹಲ್ಲೆಗೊಳಗಾದ ಮಹಿಳೆ. ಹೆಗ್ಗಪ್ಪ ಗಾಳೆಪ್ಪನವರ ಹಲ್ಲೆ ನಡೆಸಿದ ವ್ಯಕ್ತಿ. ಸದ್ಯ ಗಾಯಾಳುವನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.