ಹಾವೇರಿ: ಶಿಥಿಲಗೊಂಡಿರುವ ಸೇತುವೆ ಮೇಲೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಪಯಣಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಶನಿವಾರ ಹಾವೇರಿ ಜಿಲ್ಲೆಯ ಪ್ರವಾಸ ಕೈಗೊಂಡಿದ್ದರು. ಈ ಸಂದರ್ಭದಲ್ಲಿ ನದಿಯ ಹರವು ವೀಕ್ಷಣೆಗೆ ತೆರಳಿದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಕಳೆದ ಒಂದು ವರ್ಷದಿಂದ ಲೋಕೋಪಯೋಗಿ ಇಲಾಖೆ ಈ ಸೇತುವೆಯಲ್ಲಿ ಸಂಚಾರ ನಿಷೇಧಿಸಿದೆ. ಆದರೆ ಶನಿವಾರ ಸಚಿವ ಬಸವರಾಜ್ ಬೊಮ್ಮಾಯಿ ಸಂಚರಿಸುತ್ತಿದ್ದ ವೇಳೆ ಫಲಕಕ್ಕೆ ಬಟ್ಟೆ ಹಾಕಿ ಮುಚ್ಚಲಾಗಿತ್ತು. ಸಚಿವ ಬೊಮ್ಮಾಯಿ ಮತ್ತು ಇತರ ಜನಪ್ರತಿನಿಧಿಗಳು ಸೇತುವೆ ಮೇಲೆ ಸಾಗಿ ವರದಾ ನದಿ ಹರಿವಿನ ಪ್ರಮಾಣ ವೀಕ್ಷಣೆ ಮಾಡಿದರು.