ಹಾವೇರಿ: ಜಿಲ್ಲೆಯ ಹಿರೇಕೆರೂರು ತಾಲೂಕು ಪಿಎಫ್ಐ ಸಂಘಟನೆಯ ತಾಲೂಕು ಅಧ್ಯಕ್ಷನನ್ನು ಬಂಧಿಸಲಾಗಿದೆ. ಹಿರೇಕೆರೂರು ಠಾಣೆ ಪೊಲೀಸರು ಪಿಎಫ್ಐ ಸಂಘಟನೆ ತಾಲೂಕಾಧ್ಯಕ್ಷ ರಬ್ಬಾನಿ ಲೋಹಾರ (29) ಬಂಧಿತ ಆರೋಪಿ.
ಮುಂಜಾಗ್ರತಾ ಕ್ರಮವಾಗಿ ರಬ್ಬಾನಿಯನ್ನು ಬಂಧಿಸಿರುವುದಾಗಿ ಪೊಲೀಸ್ ಇಲಾಖೆ ತಿಳಿಸಿದೆ. ಪಟ್ಟಣದ ಬಸವೇಶ್ವರ ನಗರದ ಮೂರನೇ ಕ್ರಾಸ್ನಲ್ಲಿರೋ ನಿವಾಸದಲ್ಲಿದ್ದ ವೇಳೆ ಅವರನ್ನು ಅರೆಸ್ಟ್ ಮಾಡಲಾಗಿದೆ.
![Hirekerur PFI organization president arrested](https://etvbharatimages.akamaized.net/etvbharat/prod-images/16484669_thumb.jpg)
ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ರಬ್ಬಾನಿ ಬಂಧನವನ್ನು ಹಾವೇರಿ ಎಸ್ಪಿ ಹನುಮಂತರಾಯ ಖಚಿತ ಪಡಿಸಿದ್ದಾರೆ.
ಇದನ್ನೂ ಓದಿ: ಚಾಮರಾಜನಗರ: ಇಬ್ಬರು ಪಿಎಫ್ಐ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು