ETV Bharat / state

ಸೋಂಕಿತರ ನೆರವಿಗೆ ಸಹಾಯ ಕೇಂದ್ರ : ಬಹದ್ದೂರ ದೇಸಾಯಿ ಶೋರೂಂ, ಶಾಸಕ ಓಲೇಕಾರ್ ಮತ್ತು ಸೇವಾಭಾರತ ಟ್ರಸ್ಟ್​​​ನಿಂದ ಮಹತ್ಕಾರ್ಯ

ಇಲ್ಲಿ ರೋಗಿಗಳ ಜೊತೆ ವಿಡಿಯೋ ಕಾಲ್ ಮಾಡುವ ವೈದ್ಯರು ರೋಗಿಗಳಿಗೆ ಆತ್ಮಸ್ಥೈರ್ಯ ತುಂಬುತ್ತಿದ್ದಾರೆ. ಅಲ್ಲದೆ ಕೇಂದ್ರದಲ್ಲಿ 10 ಕಾನ್ಸೆಂಟ್ರೇಟರ್ ಇದ್ದು, ರೋಗಿಗಳಿಗೆ ಅವಶ್ಯವಿದ್ದಲ್ಲಿ 9 ರೋಗಿಗಳಿಗೆ ಮನೆಯಲ್ಲಿ ಆಮ್ಲಜನಕ ವ್ಯವಸ್ಥೆಯನ್ನ ಕೇಂದ್ರ ಮಾಡಿದೆ..

help-center-open-for-the-corona-affected-in-haveri
ಸೋಂಕಿತರ ನೆರವಿಗೆ ಸಹಾಯ ಕೇಂದ್ರ
author img

By

Published : Jun 1, 2021, 11:01 PM IST

ಹಾವೇರಿ : ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದೆ. ಜಿಲ್ಲಾಸ್ಪತ್ರೆ ಸೇರಿದಂತೆ ಖಾಸಗಿ ಆಸ್ಪತ್ರೆಗಳು ಬೆಡ್, ಆಕ್ಸಿಜನ್ ಕೊರತೆ ಎದುರಿಸುತ್ತಿವೆ. ಇದನ್ನರಿತ ಹಾವೇರಿ ಬಹದ್ದೂರ ದೇಸಾಯಿ ಹೀರೋ ಶೋರೂಂ, ಶಾಸಕ ನೆಹರು ಓಲೇಕಾರ್ ಮತ್ತು ಸೇವಾಭಾರತ ಟ್ರಸ್ಟ್ ಕೊರೊನಾ ಪೀಡಿತರ ನೆರವಿಗೆ ಸಹಾಯ ಕೇಂದ್ರ ತೆರೆದಿವೆ.

ಸೋಂಕಿತರ ನೆರವಿಗೆ ಸಹಾಯ ಕೇಂದ್ರ

ಓದಿ: 'ರೈತರಿಗೆ ಈ ಬೆಳೆ ಹೋದ್ರೆ, ಮತ್ತೆ ಬೆಳೆ ಬರುತ್ತೆ ಬಿಡಿ': ನಗರಾಭಿವೃದ್ಧಿ ಸಚಿವರ ಬೇಜವಾಬ್ದಾರಿ ಉತ್ತರ

ಈ ಸಹಾಯ ಕೇಂದ್ರದಲ್ಲಿ ಶೋರೂಂನ 20 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಜೊತೆಗೆ 10 ವೈದ್ಯರು ಮತ್ತು ಸೇವಾಭಾರತ ಟ್ರಸ್ಟ್‌ನ ಸದಸ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಹಾವೇರಿ ನಗರ ಮತ್ತು ಸುತ್ತಮುತ್ತಲಿನ ಗ್ರಾಮಗಳ ಹೋಂ ಐಸೋಲೇಷನ್ ಇರುವ 679 ಸೋಂಕಿತರಿಗೆ ಸಹಾಯಕೇಂದ್ರ ಸೇವೆ ನೀಡುತ್ತಿದೆ.

ಸಹಾಯ ಕೇಂದ್ರದಿಂದ ಸೋಂಕಿತರಿಗೆ ಔಷಧಿ, ಭೋಜನ ಮತ್ತು ಮನರಂಜನೆ ನೀಡಲಾಗುತ್ತಿದೆ. ಡಿಜಿಟಲ್ ತಂತ್ರಜ್ಞಾನ ಬಳಸಿಕೊಂಡು ರೋಗಿಗಳಿಗೆ ನೆರವಾಗಬಹುದು ಎನ್ನುವುದಕ್ಕೆ ಈ ಕೇಂದ್ರ ಸಾಕ್ಷಿಯಾಗಿದೆ.

ಇಲ್ಲಿ ರೋಗಿಗಳ ಜೊತೆ ವಿಡಿಯೋ ಕಾಲ್ ಮಾಡುವ ವೈದ್ಯರು ರೋಗಿಗಳಿಗೆ ಆತ್ಮಸ್ಥೈರ್ಯ ತುಂಬುತ್ತಿದ್ದಾರೆ. ಅಲ್ಲದೆ ಕೇಂದ್ರದಲ್ಲಿ 10 ಕಾನ್ಸೆಂಟ್ರೇಟರ್ ಇದ್ದು, ರೋಗಿಗಳಿಗೆ ಅವಶ್ಯವಿದ್ದಲ್ಲಿ 9 ರೋಗಿಗಳಿಗೆ ಮನೆಯಲ್ಲಿ ಆಮ್ಲಜನಕ ವ್ಯವಸ್ಥೆಯನ್ನ ಕೇಂದ್ರ ಮಾಡಿದೆ.

ಹಾವೇರಿ ಶಾಸಕ ನೆಹರು ಓಲೇಕಾರ್ ಸ್ವತಃ ಕೇಂದ್ರಕ್ಕೆ ಬಂದು ರೋಗಿಗಳ ಆರೋಗ್ಯ ವಿಚಾರಿಸುತ್ತಿದ್ದಾರೆ. ಸಹಾಯ ಕೇಂದ್ರದಿಂದ 679 ರೋಗಿಗಳು ಗುಣಮುಖವಾಗುತ್ತಿದ್ದು, ಹಲವರು ಪೂರ್ಣ ಗುಣಮುಖರಾಗಿದ್ದಾರೆ. ಸಹಾಯ ಕೇಂದ್ರ ಬಹಳಷ್ಟು ಉತ್ತಮವಾಗಿ ಕೆಲಸ ಮಾಡುತ್ತಿದ್ದು, ಸೋಂಕಿತರು ಆಸ್ಪತ್ರೆ, ಕೋವಿಡ್ ಕೇರ್ ಸೇರುವ ಪ್ರಮೇಯವೇ ಬಂದಿಲ್ಲ ಎನ್ನುತ್ತಾರೆ ಇಲ್ಲಿನ ವೈದ್ಯರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.