ETV Bharat / state

ಹಾವೇರಿಯಲ್ಲಿ ಮುಂದುವರೆದ ಮಳೆ: ನೆಲಕ್ಕುರುಳಿದ ಮನೆ, ಹಲವೆಡೆ ರಸ್ತೆ ಸಂಪರ್ಕ ಕಡಿತ - ಹಾವೇರಿ ಜಿಲ್ಲೆಯ ಹಲವೆಡೆ ರಸ್ತೆ ಸಂಪರ್ಕ ಕಡಿತ, ಜಮೀನುಗಳು ಜಲಾವೃತ

ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಕಳಸೂರು ಗ್ರಾಮದ ಬಳಿ‌ಯಿರುವ ವರದಾ ನದಿಯ ಬ್ರಿಡ್ಜ್ ಕಂ ಬ್ಯಾರೇಜ್ ಮೇಲೆ ನೀರು ಹರಿಯಲಾರಂಭಿಸಿದೆ. ಪರಿಣಾಮ ಕಳಸೂರು ಗ್ರಾಮದಿಂದ ದೇವಗಿರಿ, ಹಾವೇರಿ, ಗಣಜೂರು ಗ್ರಾಮಗಳ ನಡುವಿನ ಸಂಪರ್ಕ ಕಡಿತಗೊಂಡಿದೆ.

Heavy Rainfall in Haveri district
ನಿರಂತರ ಮಳೆ: ಹಾವೇರಿ ಜಿಲ್ಲೆಯ ಹಲವೆಡೆ ರಸ್ತೆ ಸಂಪರ್ಕ ಕಡಿತ
author img

By

Published : Nov 20, 2021, 11:22 AM IST

Updated : Nov 20, 2021, 12:18 PM IST

ಹಾವೇರಿ: ಜಿಲ್ಲಾದ್ಯಂತ ಮಳೆಯ ಆರ್ಭಟ(Heavy Rainfall in Haveri) ಮುಂದುವರೆದಿದೆ. ನಿರಂತರ ಮಳೆಯಿಂದ ಜಿಲ್ಲೆಯ ಬ್ಯಾಡಗಿ ತಾಲೂಕಿನ ಬಿಸಲಹಳ್ಳಿ ಗ್ರಾಮದ ಈರಣ್ಣ ಜ್ಯೋತಿ ಎಂಬುವರ ಮನೆ ನೆಲಕ್ಕುರುಳಿದೆ.

ನಿರಂತರ ಮಳೆ: ಹಾವೇರಿ ಜಿಲ್ಲೆಯ ಹಲವೆಡೆ ರಸ್ತೆ ಸಂಪರ್ಕ ಕಡಿತ, ಜಮೀನುಗಳು ಜಲಾವೃತ

ರಾಣೆಬೆನ್ನೂರು ತಾಲೂಕಿನ ನದಿಹರಳಹಳ್ಳಿ ಗ್ರಾಮದ ಮನೆಗಳಿಗೆ ಮಳೆ ನೀರು ನುಗ್ಗಿದ್ದು, ಮನೆಯಲ್ಲಿನ ವಸ್ತುಗಳೆಲ್ಲ ನೀರಲ್ಲಿ ನಿಂತು ಹಾಳಾಗಿವೆ. ರಾಣೆಬೆನ್ನೂರು ನಗರದ ದೊಡ್ಡಕೆರೆ ಕೋಡಿ ಬಿದ್ದಿದ್ದು, ಪರಿಣಾಮ ರಾಣೆಬೆನ್ನೂರು ನಗರ ಹಾಗು ಅಡವಿ ಆಂಜನೇಯ ಬಡಾವಣೆ ನಡುವಿನ ರಸ್ತೆ ಸಂಪರ್ಕ ಕಡಿತಗೊಂಡಿದೆ.

ರಸ್ತೆ ಮೇಲೆ ನೀರು ಹರಿಯುತ್ತಿರುವುದರಿಂದ ಸಂಪರ್ಕ ಬಂದ್​​ ಆಗಿದೆ. ರಾಣೆಬೆನ್ನೂರು ತಾಲೂಕಿನ ಯತ್ತಿನಹಳ್ಳಿ ಗ್ರಾಮದಲ್ಲಿನ ಜಮೀನುಗಳಿಗೆ ಹಳ್ಳದ ನೀರು ನುಗ್ಗಿದ್ದು, ಇದರಿಂದ ಕಟಾವು ಮಾಡಿ ರಾಶಿ ಹಾಕಿದ್ದ ಮೆಕ್ಕೆಜೋಳ ಉಳಿಸಿಕೊಳ್ಳಲು ರೈತರ ಹರಸಾಹಸ ಪಡುತ್ತಿದ್ದಾರೆ.

ಜಿಲ್ಲೆಯ ತುಂಗಭದ್ರಾ, ವರದಾ, ಕುಮದ್ವತಿ ಮತ್ತು ಧರ್ಮಸ ನದಿಗಳು ಮೈದುಂಬಿ ಹರಿಯಲಾರಂಭಿಸಿವೆ. ಹಳ್ಳ ಕೊಳ್ಳ ಅಪಾಯಮಟ್ಟ ಮೀರಿ ಹರಿಯತ್ತಿದ್ದು, ಇದರಿಂದಾಗಿ ಕೆಲ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಜಲಾವೃತಗೊಂಡಿವೆ. ನದಿಹರಳಹಳ್ಳಿಯಲ್ಲಿ ಜಮೀನುಗಳಿಗೆ ನೀರು ನುಗ್ಗಿದ್ದು, ಹಾನಗಲ್ ತಾಲೂಕು ಮಲಗುಂದ ಗ್ರಾಮದಲ್ಲಿ ಮನೆ ಧರೆಗುರುಳಿದೆ ಎಂದು ತಿಳಿದು ಬಂದಿದೆ.

ಹಲವೆಡೆ ರಸ್ತೆ ಸಂಪರ್ಕ ಕಡಿತ

ಶುಕ್ರವಾರ ರಾತ್ರಿ ಸುರಿದ ಮಳೆಗೆ ಹಾವೇರಿ ಜಿಲ್ಲೆಯ( Heavy Rainfall in Haveri) ಹಲವೆಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಸವಣೂರು ತಾಲೂಕು ಕುರುಬರಮಲ್ಲೂರು ಗ್ರಾಮದ ಬಳಿ ಇರುವ ಬಾಜಿರಾಯನ ಹಳ್ಳ ತುಂಬಿ ಹರಿಯುತ್ತಿದೆ. ಪರಿಣಾಮ ಸವಣೂರು ತಾಲೂಕಿನ ಕುರುಬರಮಲ್ಲೂರ ಗ್ರಾಮದಿಂದ ಹಾವೇರಿ, ಬಂಕಾಪುರ, ಮಾಹೂರ ಸೇರಿದಂತೆ ಕೆಲವು ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದೆ.

ಸವಣೂರು ತಾಲೂಕಿನ ಕಳಸೂರು ಗ್ರಾಮದ ಬಳಿ‌ಯಿರುವ ವರದಾ ನದಿಯ ಬ್ರಿಡ್ಜ್ ಕಂ ಬ್ಯಾರೇಜ್ ಮೇಲೆ ನೀರು ಹರಿಯಲಾರಂಭಿಸಿದೆ. ಪರಿಣಾಮ ಕಳಸೂರು ಗ್ರಾಮದಿಂದ ದೇವಗಿರಿ, ಹಾವೇರಿ, ಗಣಜೂರು ಗ್ರಾಮಗಳ ನಡುವಿನ ಸಂಪರ್ಕ ಕಡಿತಗೊಂಡಿದೆ.

ರಾಣೆಬೆನ್ನೂರು ತಾಲೂಕಿನ ಕೋಟಿಹಾಳ, ಹೊಳೆ ಆನ್ವೇರಿ, ಕುಪ್ಪೇಲೂರು ಸೇರಿದಂತೆ ಹಲವೆಡೆ ಜಮೀನಿಗೆ ಮಳೆ ನೀರು ನುಗ್ಗಿದ್ದು, ಜಮೀನುಗಳು ಕೆರೆಯಂತಾಗಿವೆ. ಸಂಪೂರ್ಣ ಜಮೀನು ನೀರಿನಲ್ಲಿ ಜಲಾವೃತಗೊಂಡ ಪರಿಣಾಮ ಅಪಾರ ಪ್ರಮಾಣದ ಭತ್ತದ ಬೆಳೆ ನೀರಲ್ಲಿ ಮುಳುಗಿದೆ.

Last Updated : Nov 20, 2021, 12:18 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.