ETV Bharat / state

ಕೃಷಿ ಪತ್ತಿನ ಸಹಕಾರಿ ಸಂಘದಿಂದ ಸಾಮಾಜಿಕ ಅಂತರ ಪಾಲನೆ

ಹಾವೇರಿ ಜಿಲ್ಲೆಯ ರಟ್ಟೀಹಳ್ಳಿ ತಾಲೂಕಿನ ಹಿರೇಮೊರಬದ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಸಾಮಾಜಿಕ ಅಂತರದ ನಿಯಮವನ್ನು ಪಾಲನೆ ಮಾಡಲಾಗುತ್ತಿದೆ.

Haveri
ಕೃಷಿ ಪತ್ತಿನ ಸಹಕಾರಿ ಸಂಘ
author img

By

Published : Apr 2, 2020, 2:13 PM IST

ಹಾವೇರಿ: ಕೊರೊನಾ ಸೋಂಕು ಹರಡೋದನ್ನು ತಡೆಯಲು ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಎಷ್ಟೇ ಹೇಳಿದ್ರೂ ಬಹುತೇಕ ಕಡೆಗಳಲ್ಲಿ ಈ ಕೆಲಸ ಆಗ್ತಿಲ್ಲ. ಆದ್ರೆ ಜಿಲ್ಲೆಯ ರಟ್ಟೀಹಳ್ಳಿ ತಾಲೂಕಿನ ಹಿರೇಮೊರಬದ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಸಾಮಾಜಿಕ ಅಂತರದ ನಿಯಮವನ್ನು ಚಾಚೂ ತಪ್ಪದೆ ಪಾಲನೆ ಮಾಡಲಾಗ್ತಿದೆ.

ಸಾಮಾಜಿಕ ಅಂತರದ ನಿಯಮವನ್ನು ಪಾಲಿಸುತ್ತಿರುವ ಕೃಷಿ ಪತ್ತಿನ ಸಹಕಾರಿ ಸಂಘ

ಸಹಕಾರಿ ಸಂಘದಲ್ಲಿ ವಿತರಣೆ ಆಗೋ ಪಡಿತರ ಪಡೆಯಲು ಬರೋ ಜನರಿಗೆ ಕಡ್ಡಾಯವಾಗಿ ಸಾಮಾಜಿಕ ಅಂತರದ ಬಾಕ್ಸ್​ಗಳನ್ನು ಹಾಕಲಾಗಿದೆ. ಪಡಿತರ ಒಯ್ಯಲು ಬರೋ ಜನರಿಗೆ ಬಿಸಿಲು ತಾಗದಿರಲಿ ಎಂದು ಸಹಕಾರಿ ಸಂಘದ ಮುಂಭಾಗದಲ್ಲಿ ಪೆಂಡಾಲ್ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಸಾಮಾಜಿಕ ಅಂತರದ ಬಾಕ್ಸ್​ಗಳನ್ನು ಹಾಕಿ ಪಡಿತರಕ್ಕೆ ಬರೋ ಜನರಿಗೆ ಕುಳಿತುಕೊಳ್ಳಲು ಚೇರ್‌ಗಳ ವ್ಯವಸ್ಥೆ ಮಾಡಿದೆ.

ಇದರ ಜೊತೆಗೆ ಜನರಿಗೆ ಕುಡಿಯೋ ನೀರಿನ ವ್ಯವಸ್ಥೆ ಮಾಡಿ ಪಡಿತರ ಒಯ್ಯಲು ಬರೋ ಜನರಿಗೆ ಕೊರೊನಾ ಸೋಂಕು ತಡೆಯೋ ಜಾಗೃತಿ ಮೂಡಿಸ್ತಿದೆ. ಪಡಿತರ ಒಯ್ಯಲು ಬರೋ ಜನರು ಸಹ ಸಹಕಾರಿ ಸಂಘದ ವ್ಯವಸ್ಥೆಗೆ ಮೆಚ್ಚುಗೆ ವ್ಯಕ್ತಪಡಿಸ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.