ETV Bharat / bharat

ಎಸಿ ಕೋಣೆಯಲ್ಲಿ ಇಲಿ ಪಾಷಾಣ: ಇಬ್ಬರು ಮಕ್ಕಳು ಸಾವು - INHALING TOXIC FUMES FROM PESTICIDE

ಎಸಿ ಹಾಕಿದ ಹಿನ್ನೆಲೆಯಲ್ಲಿ ಗಾಳಿಯಾಡಲು ಸಾಧ್ಯವಾಗದೇ ಇಲಿ ಪಾಷಾಣದ ಗಾಳಿಯನ್ನೇ ಮನೆಯ ನಾಲ್ವರು ಉಸಿರಾಡಿದ್ದಾರೆ.

Chennai two kids died after inhaling toxic fumes from pesticide
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Karnataka Team

Published : Nov 15, 2024, 2:09 PM IST

ಚೆನ್ನೈ: ಇಲಿಗಳ ಕಾಟ ತಡೆಯುವುದಕ್ಕಾಗಿ ಇಟ್ಟಿದ್ದ ಪಾಷಾಣದ ವಿಷಕಾರಿ ಗಾಳಿಯನ್ನು ಉಸಿರಾಡಿದ ಮಕ್ಕಳಿಬ್ಬರು ಸಾವನ್ನಪ್ಪಿರುವ ಘಟನೆ ಚೆನ್ನೈನ ಕುಂದ್ರಥೂರ್​​ನಲ್ಲಿ ನಡೆದಿದ್ದು, ಕೀಟನಾಯಕ ನಿಯಂತ್ರಣ ಸಂಸ್ಥೆಯ ಓರ್ವನನ್ನು ಬಂಧಿಸಲಾಗಿದೆ. ಆರು ವರ್ಷದ ವೈಷ್ಣವಿ ಮತ್ತು ನಾಲ್ಕು ವರ್ಷದ ಸಾಯಿ ಸುದರ್ಶನ್​ ಸಾವನ್ನಪ್ಪಿದ ಮಕ್ಕಳಾಗಿದ್ದಾರೆ.

ಏನಿದು ಘಟನೆ?: ಗಿರಿಥರನ್​ ಮತ್ತು ಪವಿತ್ರಾ ದಂಪತಿ ಚೆನ್ನೈನ ಕುದ್ರಥೂರ್​ ನಿವಾಸಿಗಳಾಗಿದ್ದಾರೆ. ಮನೆಯಲ್ಲಿ ಇಲಿ ಕಾಟ ಹೆಚ್ಚಾದ ಕಾರಣ, ಉಪಶಮನಕ್ಕೆ ಖಾಸಗಿ ಕೀಟ ನಿಯಂತ್ರಣ ಕಂಪನಿಯನ್ನು ಸಂಪರ್ಕಿಸಿದ್ದಾರೆ. ಮನೆಗೆ ಬಂದ ಕೀಟ ನಿಯಂತ್ರಕ ಕಂಪನಿ ಸದಸ್ಯರು ಮನೆಯ ಎಲ್ಲಾ ಮೂಲೆಗಳಲ್ಲಿ ಇಲಿ ಸಾಯುವ ಪಾಷಾಣವನ್ನು ಇರಿಸಿದ್ದಾರೆ. ಮಲಗುವ ಕೋಣೆಯಲ್ಲೂ ಇರಿಸಿದ್ದಾರೆ. ಈ ಪಾಷಣಾದಲ್ಲಿ ಕೊಂಚ ಹೆಚ್ಚಿನ ಮಟ್ಟದ ವಿಷಕಾರಿ ಅಂಶ ಇರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

ದಂಪತಿ ಪಾಷಾಣವಿರಿಸಿದ್ದ ಬೆಡ್​ ರೂಂನಲ್ಲಿ ಎಂದಿನಂತೆ ಮಕ್ಕಳೊಂದಿಗೆ ರಾತ್ರಿ ಎಸಿ ಹಾಕಿ ಎಲ್ಲಾ ಬಾಗಿಲುಗಳನ್ನು ಬಂದ್​ ಮಾಡಿ ಮಲಗಿದ್ದಾರೆ. ಎಸಿ ಹಾಕಿದ ಹಿನ್ನೆಲೆಯಲ್ಲಿ ಗಾಳಿಯಾಡಲು ಸಾಧ್ಯವಾಗದೇ ಇಲಿಯ ಪಾಷಾಣದ ಗಾಳಿಯನ್ನು ಮನೆಯ ನಾಲ್ಕು ಮಂದಿ ಉಸಿರಾಡಿದ್ದಾರೆ. ಬೆಳಗ್ಗೆ ಏಳುತ್ತಿದ್ದಂತೆ ದಂಪತಿಗಳಿಬ್ಬರು ಅಸ್ವಸ್ಥರಾಗಿದ್ದಾರೆ. ಮಕ್ಕಳು ಕೂಡ ಪ್ರಜ್ಞೆ ತಪ್ಪಿದ್ದಾರೆ.

ತಕ್ಷಣಕ್ಕೆ ನೆರೆ ಹೊರೆಯವರ ಸಹಾಯದಿಂದ ನಾಲ್ವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ, ಮಕ್ಕಳ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾರೆ. ಅತಿಯಾದ ವಿಷಕಾರಿ ಅಂಶದ ಬಳಕೆ ಜೊತೆಗೆ ಈ ರಾಸಾಯನಿಕ ಸಿಂಪಡಿಸಿದಾಗ ಮುನ್ನೆಚ್ಚರಿಕೆ ಕ್ರಮ ಪಾಲಿಸದ ಹಿನ್ನೆಲೆಯಲ್ಲಿ ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಈ ಘಟನೆ ಸಂಬಂಧ ಕುಟಂಬಸ್ಥರು ನೀಡಿದ ದೂರಿನ ಅನ್ವಯ ಖಾಸಗಿ ಕಂಪನಿಯ ಮೂವರು ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಓರ್ವನನ್ನು ಬಂಧಿಸಲಾಗಿದೆ.

ದಿನಕರ್​ ಬಂಧಿತನಾಗಿದ್ದು, ಪ್ರಕರಣದ ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ವಿಧಿ ವಿಜ್ಞಾನ ಅಧಿಕಾರಿಗಳು ಪಾಷಾಣದ ಮಾದರಿಗಳನ್ನು ಸಂಗ್ರಹಿಸಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ: ದೆಹಲಿಯಲ್ಲಿ ಉಸಿರಾಡುವುದೂ ಕಷ್ಟ! ಕಳಪೆ ವರ್ಗದಲ್ಲೇ ಮುಂದುವರೆದ ವಾಯು ಗುಣಮಟ್ಟ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.