ETV Bharat / bharat

ಗೂಗಲ್​ ಮ್ಯಾಪ್​ ಎಡವಟ್ಟು: ರಂಗ ಕಲಾವಿದರಿದ್ದ ಮಿನಿ ಬಸ್​ ಅಪಘಾತ, ಇಬ್ಬರು ಸಾವು - MINIBUS ACCIDENT IN KERALA

ಮಿನಿ ಬಸ್​ ಚಾಲಕ ಗೂಗಲ್ ಮ್ಯಾಪ್​ ಸಹಾಯದಿಂದ ಬಸ್​ ಚಲಾಯಿಸುತ್ತಿದ್ದರು. ರಸ್ತೆ ಮಾರ್ಗ ಕಡಿದಾಗಿದ್ದರಿಂದ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.

minibus Accident in Kerala after Driver Fallow Google Maps instructions
ಮಿನಿ ಬಸ್​ ಅಪಘಾತ (ETV Bharat)
author img

By ETV Bharat Karnataka Team

Published : Nov 15, 2024, 2:12 PM IST

ಕಣ್ಣೂರು: ರಂಗಭೂಮಿ ಕಲಾವಿದರನ್ನು ಹೊತ್ತು ಸಾಗುತ್ತಿದ್ದ ಮಿನಿಬಸ್​ವೊಂದು ಕಣ್ಣೂರಿನ ಸಮೀಪದ ಕೆಲಕಮ್​ ಬಳಿ ಅಪಘಾತಕ್ಕೆ ಒಳಗಾಗಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಕಾಯಂಕುಲಂನ ಅಂಜಲಿ ಮತ್ತು ಕರುನಾಗಪಲ್ಲಿಯ ಜೆಸ್ಸಿ ಮೋಹನ್​ ಸಾವನ್ನಪ್ಪಿರುವ ದುರ್ದೈವಿಗಳು.

ಈ ಇಬ್ಬರು ರಂಗಭೂಮಿಯ ಪ್ರಮುಖ ನಟಿಯರಾಗಿ ಗುರುತಿಸಿಕೊಂಡಿದ್ದಾರೆ. ಘಟನೆಯಲ್ಲಿ 9 ಮಂದಿ ಗಾಯಗೊಂಡಿದ್ದು, ಮತ್ತೋರ್ವರ ಸ್ಥಿತಿ ಗಂಭೀರವಾಗಿದೆ. ಅಪಘಾತದ ಶಬ್ಧ ಕೇಳಿದ ಕೂಡಲೇ ಸ್ಥಳೀಯರು ಸ್ಥಳಕ್ಕೆ ಆಗಮಿಸಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು.

ಮಿನಿ ಬಸ್​ ಚಾಲಕ ಗೂಗಲ್ ಮ್ಯಾಪ್​ ಸಹಾಯದಿಂದ ಬಸ್​ ಚಲಾಯಿಸುತ್ತಿದ್ದರು. ರಸ್ತೆ ಮಾರ್ಗ ಕಡಿದಾಗಿದ್ದರಿಂದ ಅನಾಹುತ ನಡೆದಿದೆ. ಶುಕ್ರವಾರ ಬೆಳಗ್ಗೆ 4 ಗಂಟೆಗೆ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಕಯಂಕುಮಂ ದೇವ ಕಮ್ಯೂನಿಕೇಷನ್​ ರಂಗಭೂಮಿ ಗುಂಪು ಕಡನ್ನಪಲ್ಲಿಯಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ಬಸ್ ವಯನಾಡ್‌ನ ಸುಲ್ತಾನ್​ ಬಥೇರಿ ಕಡೆ ಸಾಗುತ್ತಿತ್ತು. ಪೆರಿಯಾ ಚೂರ್ಮದ ನೆಡುಂಪೊಲ್ಲಿ- ವಾಡಿ ರಸ್ತೆ ಬಂದ್​ ಆಗಿದ್ದ ಕಾರಣ ಕೊಟ್ಟಿಯೂರು ಬಾಯ್ಸ್​ ಟೌನ್​ ರಸ್ತೆ ಮಾರ್ಗವಾಗಿ ಕೆಲಕಮ್​ ಪರ್ಯಾಯ ಮಾರ್ಗವನ್ನು ಮ್ಯಾಪ್​ ತೋರಿಸಿದೆ. ಮಲಯಂಪಡಿಯಲ್ಲಿ ಕಡಿದಾದ ಎಸ್​ ತಿರುಗಳಿಂದಾಗಿ ಮಿನಿ ಬಸ್​ ಅಪಘಾತಕ್ಕೀಡಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಯಗೊಂಡವರನ್ನು ಕಾಯಂಕುಲಂನ ಉನ್ನಿ, ಉಮೇಶ್​, ಸುರೇಶ್​ ಮತ್ತು ಶಿಬು, ಎರ್ನಾಕುಲಂನ ಬಿಂಧು, ಕಲ್ಲುವತುಕ್ಕಲ್​ನ ಚೆಲ್ಲಪ್ಪನ್​ ಮತ್ತು ಕೊಲ್ಲಂನ ಶ್ಯಾಮ್​ ಹಾಗೂ ಅಥಿರುಂಗಲ್​ನ ಸುಭಾಶ್​ ಎಂದು ಗುರುತಿಸಲಾಗಿದ್ದು, ಕಣ್ಣೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ಕುಡಿದ ಅಮಲಿನಲ್ಲಿ ರಾಂಗ್​ ರೂಟ್​​​​​ನಲ್ಲಿ ಟ್ರಕ್​ ಚಲಾಯಿಸಿದ ಡ್ರೈವರ್​; ಐವರ ಸಾವು, ಆರು ಮಂದಿಗೆ ಗಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.