ನವದೆಹಲಿ: ಬಾಕ್ಸಿಂಗ್ ದಂತಕಥೆ, ಮಾಜಿ ಹೆವಿವೇಟ್ ಚಾಂಪಿಯನ್, ಸಾರ್ವಕಾಲಿಕ ಶ್ರೇಷ್ಠ ಬಾಕ್ಸರ್, ಐರನ್ ಮೈಕ್, ಕಿಡ್ ಡೈನಮೆಟ್ ಎಂದೇ ಪ್ರಖ್ಯಾತಿ ಪಡೆದಿರುವ ಮೈಕ್ ಟೈಸನ್ ವಿಶೇಷ ಬೆಳವಣಿಗೆಯೊಂದರಲ್ಲಿ ಯೂಟ್ಯೂಬರ್- ಜೇಕ್ ಪೌಲ್ ವಿರುದ್ಧ ನಾಳೆ ಕಾದಾಟ ನಡೆಸಲಿದ್ದಾರೆ. ಆದರೆ, ಗುರುವಾರ ತೂಕ ಪರಿಶೀಲಿಸುವ ವೇಳೆ ಎದುರಾಳಿ ಜ್ಯಾಕ್ ಪಾಲ್‌ಗೆ ಕಪಾಳಮೋಕ್ಷ ಮಾಡಿದ್ದಾರೆ ಎನ್ನಲಾಗುತ್ತಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಮೈಕ್ ಟೈಸನ್ 19 ವರ್ಷದ ಹಿಂದೆ, ಅಧಿಕೃತವಾಗಿ ರಿಟೈರ್ಡ್ ಆದ ನಂತರ ಮತ್ತೆ ರಿಂಗ್‌ಗೆ ಮರಳಿದ್ದರಿಂದ ಕ್ರೀಡಾ ಪಟುಗಳಲ್ಲಿ ತೀವ್ರ ಕುತೂಹಲ ಮೂಡಿಸಿದ್ದರು. ವಿಶೇಷ ಬೆಳವಣಿಗೆಯೊಂದರಲ್ಲಿ ಮತ್ತೊಬ್ಬ ಬಾಕ್ಸರ್ ಜೇಕ್ ಪೌಲ್ ವಿರುದ್ಧ ಕಾದಾಟ ನಡೆಸುತ್ತಿದ್ದು, ಈ ಐತಿಹಾಸಿಕ ಬಾಕ್ಸಿಂಗ್ ಕಾಳಗ ನಾಳೆ ರಾತ್ರಿ ನೆಟ್ಫ್ಲಿಕ್ಸ್ನಲ್ಲಿ ಪ್ರಸಾರಗೊಳ್ಳಲಿದೆ. ಹಾಗಾಗಿ ಇವರಿಬ್ಬರ ನಡುವಿನ ಬಾಕ್ಸಿಂಗ್ ಕಾದಾಟ ವೀಕ್ಷಿಸಲು ಇಡೀ ಜಗತ್ತು ಕಾದು ಕುಳಿತಿದೆ. ಅದಕ್ಕೂ ಮುನ್ನ ನಡೆದ ಈ ಕಪಾಳಮೋಕ್ಷ ಪ್ರಸಂಗ ಚರ್ಚೆಗೆ ಗ್ರಾಸವಾಗಿದೆ.
MIKE TYSON HITS JAKE PAUL AT THE WEIGH IN #PaulTyson
— Netflix (@netflix) November 15, 2024
--
LIVE ON NETFLIX
FRIDAY, NOVEMBER 15
8 PM ET | 5 PM PT pic.twitter.com/kFU40jVvk0
ಪಂದ್ಯ ಆರಂಭಕ್ಕೂ ಮುನ್ನ ಮೈಕ್ ಟೈಸನ್, ಎದುರಾಳಿ ಪೌಲ್ಗೆ ಕಪಾಳಮೋಕ್ಷ ಮಾಡಿದ್ದು, ಕ್ರೀಡಾಭಿಮಾನಿಗಳಲ್ಲಿ ಗೊಂದಲ ತರಿಸಿದೆ. ತೂಕ ಪರಿಶೀಲಿಸಿದ ಬಳಿಕ ಟೈಸನ್ ತಮ್ಮ ಬಲಗೈನಿಂದ ಜ್ಯಾಕ್ ಪೌಲ್ ಕೆನ್ನೆಗೆ ಬಾರಿಸಿದ್ದಾರೆ. ಮೈದಾನದಿಂದ ನಿರ್ಗಮಿಸುತ್ತಿರುವ ಸ್ವಲ್ಪ ಹೊತ್ತಿಗೆ ಮುನ್ನ ನಡೆದ ವಿದ್ಯಮಾನ ಇದಾಗಿದ್ದರಿಂದ ಎಲ್ಲರೂ ಶಾಕ್ ಆಗಿದ್ದಾರೆ. ಟೈಸನ್ ತನ್ನ ಕೆನ್ನೆಯ ಮೇಲೆ ಬಾರಿಸಿದ್ದಕ್ಕೆ ಜ್ಯಾಕ್ ಪೌಲ್ ಪ್ರತಿರೋಧ ತೋರಿದ್ದರಿಂದ, ಸ್ಥಳದಲ್ಲಿ ಸ್ವಲ್ಪಹೊತ್ತು ಬಿಗುವಿನ ವಾತಾವರಣ ಅಲ್ಲಿತ್ತು. ಕೂಡಲೇ, ಅಲ್ಲಿದ್ದ ಭದ್ರತಾ ಸಿಬ್ಬಂದಿ ಮಧ್ಯ ಪ್ರವೇಶಿಸಿ, ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಈ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
JAKE PAUL VS MIKE TYSON
— Netflix (@netflix) November 15, 2024
LIVE ON NETFLIX
FRIDAY, NOVEMBER 15
8PM ET | 5PM PT #PaulTyson pic.twitter.com/vEfNEaAojA
ಮೈಗೆ ಬರೀ ಎರಡು ಪೀಸ್ ಬಟ್ಟೆ ಧರಿಸಿದ್ದ ಟೈಸನ್, ಘಟನೆಯ ನಂತರ ಏನನ್ನೂ ಮಾತನಾಡದೇ ಅಲ್ಲಿಂದ ನಿರ್ಗಮಿಸಿದ್ದಾರೆ. ತಮ್ಮವರ ಜೊತೆಗೆ ನಿರ್ಗಮಿಸುವ ಮುನ್ನ, "ಮಾತನಾಡುವುದೆಲ್ಲಾ ಮುಗಿದಿದೆ" ಎಂದಷ್ಟೇ ಹೇಳಿದ್ದಾರೆ. ಆದರೆ, "ಟೈಸನ್ ತಮ್ಮ ಕೆನ್ನೆಗೆ ಬಾರಿಸಿದ್ದರಿಂದ ನನಗೇನೂ ನೋವಾಗಲಿಲ್ಲ" ಎಂದು ಪೌಲ್ ಪ್ರತಿಕ್ರಿಯಿಸಿದ್ದಾರೆ.
Jake Paul vs Mike Tyson
— Netflix (@netflix) November 15, 2024
Official Weigh-In Results #PaulTyson
Paul - 227.2 lbs
Tyson - 228.4 lbs
--
LIVE ON NETFLIX
FRIDAY, NOVEMBER 15
8 PM ET | 5 PM PT pic.twitter.com/YjEb2jBw1n
ಮೈಕ್ ಟೈಸನ್ ವಿರುದ್ಧ ಜೇಕ್ ಪೌಲ್: ಅಮೆರಿಕದ ಅನುಭವಿ ಟೈಸನ್ ತಮ್ಮ ವೃತ್ತಿ ಜೀವನದುದ್ದಕ್ಕೂ ಮತ್ತೊಬ್ಬ ಅಮೆರಿಕನ್ ವೃತ್ತಿಪರ ಬಾಕ್ಸರ್, ನಟ ಮತ್ತು ಯೂಟ್ಯೂಬರ್ ಆಗಿರುವ ಪೌಲ್ ಅವರನ್ನು ಎದುರಿಸತ್ತಲೇ ಬಂದವರು. ಸದ್ಯ ಟೈಸನ್‌ಗೆ 58 ವರ್ಷವಾದರೆ, ಅವರ ಎದುರಾಳಿ ಪೌಲ್ಗೆ ಕೇವಲ 27 ವರ್ಷ! ಟೈಸನ್ ವಯಸ್ಸಿನ ಅರ್ಧದಷ್ಟು ಅಂದರೂ ಸರಿ. ಟೈಸನ್ 19 ವರ್ಷಗಳ ನಂತರ ಬಾಕ್ಸಿಂಗ್ ರಿಂಗ್‌ಗೆ ಮರಳಿದ್ದರಿಂದ ಜೇಕ್ ಪೌಲ್ 2018ರಿಂದ 10-1 ದಾಖಲೆಯೊಂದಿಗೆ ಅದ್ಭುತ ಪ್ರದರ್ಶನ ನೀಡುತ್ತಿರುವುದರಿಂದ ಇಬ್ಬರ ಕಾದಾಟ ಇದೀಗ ತೀವೃ ಕುತೂಹಲ ಮೂಡಿಸಿದೆ. ಇಬ್ಬರ ನಡುವಿನ ಪಂದ್ಯವು ತಲಾ ಎರಡು ನಿಮಿಷಗಳ 8 ಸುತ್ತುಗಳನ್ನು ಹೊಂದಿರುತ್ತದೆ. ಬಾಕ್ಸರ್‌ಗಳು ಭಾರವಾದ 14 ಔನ್ಸ್ ಕೈಗವಸುಗಳನ್ನು ಧರಿಸುತ್ತಾರೆ. ಇದು ಸಾಮಾನ್ಯ ಕೈಗವಸುಗಳಿಗಿಂತ 4 ಔನ್ಸ್ ಭಾರವಾಗಿರುತ್ತದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: 360 ದಿನಗಳ ಬಳಿಕ ಮೈದಾನಕ್ಕೆ ಕಾಲಿಟ್ಟ ಶಮಿ: ರಣಜಿ ಮೊದಲ ಪಂದ್ಯದಲ್ಲೇ 4 ವಿಕೆಟ್ ಉಡೀಸ್!