ಹಾವೇರಿ: ಜಿಲ್ಲೆಯ ಹಿರೇಕೆರೂರು ತಾಲೂಕಿನ ಕೋಡಮಗ್ಗಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸ್ಫೋಟಕ ವಸ್ತುಗಳು ಪತ್ತೆಯಾಗಿವೆ.
ಗ್ರಾಮದ ರಾಜು ಅಣ್ಣಪ್ಪನವರ್ ಜಮೀನಿನ ಕೋಳಿ ಶೆಡ್ ಹಿಂಭಾಗದಲ್ಲಿ ಜೆಲೆಟಿನ್ ಕಡ್ಡಿಗಳು ದೊರೆತಿವೆ. ಈ ಕುರಿತಂತೆ ಸುರೇಶ್, ಶೌಕತ್ ಮತ್ತು ಧನರಾಜ್ ಎಂಬುವರನ್ನು ವಿಚಾರಣೆಗೆ ಒಳಪಡಿಸಲಾಗಿದೆ.
ಇದನ್ನೂ ಓದಿ: ಹಾವೇರಿ: ಬಸ್ ನಿಲ್ದಾಣದ ಬಳಿ ಇಬ್ಬರ ಬರ್ಬರ ಹತ್ಯೆ
ಅಕ್ರಮ ಗಣಿಗಾರಿಕೆ ನಡೆಸಲು ಆರೋಪಿಗಳು ಈ ಸ್ಫೋಟಕ ವಸ್ತುಗಳನ್ನು ಸಂಗ್ರಹಿಸಿಟ್ಟಿದ್ದರು ಎನ್ನಲಾಗಿದೆ. ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.