ETV Bharat / state

ಮೃತ ನವೀನ್​ ನಿವಾಸಕ್ಕೆ ರಾಜ್ಯಪಾಲ ಗೆಹ್ಲೋಟ್​​ ಭೇಟಿ, ಕುಟುಂಬಸ್ಥರಿಗೆ ಸಾಂತ್ವನ - ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದಲ್ಲಿರುವ ನವೀನ್​ ನಿವಾಸ

ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದಲ್ಲಿನ ನವೀನ್​ ನಿವಾಸಕ್ಕೆ ಇಂದು ರಾಜ್ಯಪಾಲ ಥಾವರಚಂದ್​ ಗೆಹ್ಲೋಟ್​​ ಭೇಟಿ ನೀಡಿದರು. ಈ ವೇಳೆ, ಭಾವಚಿತ್ರಕ್ಕೆ ನಮನ ಸಲ್ಲಿಸಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಘಟನೆ ನಡೆದ ದಿನವೂ ರಾಜ್ಯಪಾಲರು ಕರೆ ಮಾಡಿ ಕುಟುಂಬದವರ ಜೊತೆ ಮಾತನಾಡಿದ್ದರು.

Governor Thavarachand Gehlot visits the dead Naveen residence
ನವೀನ್​ ನಿವಾಸಕ್ಕೆ ರಾಜ್ಯಪಾಲ ಥಾವರಚಂದ್​ ಗೆಹ್ಲೋಟ್​​ ಭೇಟಿ
author img

By

Published : Mar 24, 2022, 4:27 PM IST

ಹಾವೇರಿ: ಉಕ್ರೇನ್-ರಷ್ಯಾದ ಯುದ್ಧದಲ್ಲಿ ಮೃತಪಟ್ಟಿದ್ದ ನವೀನ್​​ ನಿವಾಸಕ್ಕೆ ರಾಜ್ಯಪಾಲ ಥಾವರಚಂದ್​ ಗೆಹ್ಲೋಟ್​​ ಇಂದು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮೃತ ವಿದ್ಯಾರ್ಥಿಯ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ, ಕುಟುಂಬಸ್ಥರಿಗೆ ಧೈರ್ಯ ತುಂಬಿದರು.

ನವೀನ್​​ ತಂದೆ ಶೇಖರಗೌಡ ಮಾಧ್ಯಮಗಳ ಜೊತೆ ಮಾತನಾಡಿ, ನನ್ನ ಹಿರಿಯ ಮಗ ಹರ್ಷನಿಗೆ ಇದೇ ರಾಜ್ಯಪಾಲರು ಗೋಲ್ಡ್ ಮೆಡಲ್ ಕೊಟ್ಟಿದ್ದರು. ಅದನ್ನು ಅವರು ನೆನಪಿಸಿಕೊಂಡಿದ್ದಾರೆ. ಪ್ರತಿಭಾವಂತನಾಗಿದ್ದ ನವೀನ್​​ನನ್ನು ಕಳೆದುಕೊಂಡಿದ್ದಕ್ಕೆ ರಾಜ್ಯಪಾಲರು ದುಃಖ ವ್ಯಕ್ತಪಡಿಸಿದರು.

ಇದನ್ನೂ ಓದಿ: ಪುನೀತ್ ಭಾವಚಿತ್ರದ ಬೆಳ್ಳಿ ಡಾಲರ್: ಶಕ್ತಿಧಾಮದ ಮಕ್ಕಳಿಗೆ ಅಭಿಮಾನಿ ದಂಪತಿಯ ಗಿಫ್ಟ್‌

ಮಾರ್ಚ್ 21ರಂದು ನವೀನ್​ ಪಾರ್ಥಿವ ಶರೀರ ಹುಟ್ಟೂರಿಗೆ ಬಂದಾಗ ಬರುವವನಿದ್ದೆ. ಮಧ್ಯಪ್ರದೇಶದಲ್ಲಿ ಪೂರ್ವನಿಗದಿತ ಕಾರ್ಯಕ್ರಮವಿದ್ದ ಕಾರಣ ಬರಲು ಆಗಲಿಲ್ಲ. ಯಾವುದಕ್ಕೂ ಹೆದರದೆ ಧೈರ್ಯದಿಂದಿರಿ, ನಿಮ್ಮ ಜೊತೆಗೆ ನಾವಿದ್ದೇವೆ ಎಂದು ರಾಜ್ಯಪಾಲರು ಧೈರ್ಯ ತುಂಬಿರುವುದಾಗಿ ಎಂದು ಶೇಖರಗೌಡ ತಿಳಿಸಿದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.