ETV Bharat / state

Farmer suicide: ಕನ್ಯೆ ಸಿಗದಿದ್ದಕ್ಕೆ ಮನನೊಂದು ರೈತ ಆತ್ಮಹತ್ಯೆ - ರೈತ ಆತ್ಮಹತ್ಯೆ

ಕನ್ಯೆ ಸಿಗದೇ ಮನನೊಂದು ರೈತ ಆತ್ಮಹತ್ಯೆ - ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮಾಸಣಗಿ ಗ್ರಾಮದಲ್ಲಿ ನಡೆದ ಘಟನೆ- ಮಂಜುನಾಥ ನಾಗನೂರು ಆತ್ಮಹತ್ಯೆಗೆ ಶರಣಾದ ರೈತ.

Haveri
ಹಾವೇರಿ
author img

By

Published : Jun 23, 2023, 9:01 AM IST

ಹಾವೇರಿ: ರಾಜ್ಯದಲ್ಲಿ ರೈತರನ್ನು ಮದುವೆಯಾಗಲು ವಧುವೇ ಸಿಗುತ್ತಿಲ್ಲ ಎಂಬ ವಿಷಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಕೃಷಿಕರಾಗಿರುವ ಕಾರಣ ನಮಗೆ ಹೆಣ್ಣು ಕೊಡ್ತಿಲ್ಲ ಎಂದು ಅವಿವಾಹಿತರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ. ಈ ಚರ್ಚೆ ಚುನಾವಣೆ ಸಮಯದಲ್ಲೂ ಜೋರಾಗಿಯೇ ನಡೆದಿತ್ತು. ಈ ನಡುವೆ ಕನ್ಯೆ ಸಿಗದಿದ್ದಕ್ಕೆ ಮನನೊಂದು ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮಾಸಣಗಿ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಂಜುನಾಥ ನಾಗನೂರು ಆತ್ಮಹತ್ಯೆಗೆ ಶರಣಾದ ರೈತ.

ಇದನ್ನೂ ಓದಿ: ವಯಸ್ಸು ಐವತ್ತಾದರೂ ಸಿಗದ ಕನ್ಯೆ... ಮದುವೆ ಮಾಡಿಸಿ ಎಂದು ಗ್ರಾ. ಪಂ. ಮೊರೆ ಹೋದ ವರ!

ಮಂಜುನಾಥನಿ ಅವರಿಗೆ ಕಳೆದ ಏಳೆಂಟು ವರ್ಷಗಳಿಂದ ಕನ್ಯೆ ಹುಡುಕುತ್ತಿದ್ದರಂತೆ. ಆದರೆ, ಯಾರೊಬ್ಬರೂ ಮದುವೆಗೆ ಕನ್ಯೆ ಕೊಟ್ಟಿರಲಿಲ್ಲ. ನನ್ನಿಂದ ತಂದೆ ತಾಯಿಗೆ ತೊಂದರೆ ಎಂದು ಜೀವನದಲ್ಲಿ ಜಿಗುಪ್ಸೆಗೊಂಡು ಮಂಜುನಾಥ್ ಆತ್ಮಹತ್ಯೆ ಶರಣಾಗಿದ್ದಾರೆ ಎನ್ನಲಾಗಿದೆ. ಜೂ. 15ರಂದು ಜಮೀನಿನಲ್ಲಿ ವಿಷ ಸೇವಿಸಿದ್ದರು. ಸುದ್ದಿ ತಿಳಿದು ತಕ್ಷಣ ಪೋಷಕರು ಹಾಗೂ ಗ್ರಾಮಸ್ಥರು ಬ್ಯಾಡಗಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ಕಿಮ್ಸ್‌ಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೇ ಜೂ. 21ರಂದು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬ್ಯಾಡಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ನಮ್ಮೂರಿನ ಹುಡುಗರಿಗೆ ಮದುವೆ ಆಗುವಂತೆ ಮಾಡಿ ಪುಣ್ಯ ಕಟ್ಟಿಕೊಳ್ಳಿ.. ಡಿಸಿ, ಶಾಸಕರಿಗೆ ಊರನ ಜನರ ಮನವಿ..

ಆತ್ಮಹತ್ಯೆಗೆ ಯತ್ನಿಸಿದ ಯುವಕ: ವಯಸ್ಸಾದರೂ ಮದುವೆಗೆ ಹೆಣ್ಣು ಸಿಕ್ಕಿಲ್ಲ ಎಂದು ಮನನೊಂದ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮದಲ್ಲಿ ಇತ್ತೀಚೆಗೆ ನಡೆದಿತ್ತು. ಸಂತೋಷ ಕೊರಡಿ ಸ್ಮಶಾನದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಯುವಕ. ವಯಸ್ಸಾದರೂ ನನಗೆ ಮದುವೆಯಾಗಿಲ್ಲ ಎಂದು ಮನನೊಂದ ಈತ, ಗ್ರಾಮದ ಸ್ಮಶಾನದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ. ಕೂಡಲೇ ಯುವಕನನ್ನು ಗಮನಿಸಿದ ಸ್ಥಳೀಯರು ಆತನನ್ನು ರಕ್ಷಣೆ ಮಾಡಿದ್ದರು.

ಇದನ್ನೂ ಓದಿ: ಮದುವೆಗೆ ಹೆಣ್ಣು ಸಿಕ್ಕಿಲ್ಲ ಎಂದು ಆತ್ಮಹತ್ಯೆಗೆ ಯತ್ನಿಸಿದ ಯುವಕ

ಮನೆ ತೊರೆದ ಯುವಕ: ಮದುವೆಯಾಗಲು ಹೆಣ್ಣು ಕೊಡುವವರು ಸರ್ಕಾರಿ ನೌಕರಿಗೆ ಪಟ್ಟು ಹಿಡಿದಿದ್ದರಿಂದ ಬೇಸತ್ತು ಯುವಕನೋರ್ವ ಮನೆ ತೊರೆದಿರುವ ಘಟನೆ ಚಾಮರಾಜನಗರ ತಾಲೂಕಿನ ಉಮ್ಮತ್ತೂರು ಗ್ರಾಮದಲ್ಲಿ ಇತ್ತೀಚೆಗೆ ನಡೆದಿತ್ತು. ಗ್ರಾಮದ ಅಭಿಷೇಕ್(29) ಎಂಬಾತನೆ ನಾಪತ್ತೆಯಾಗಿದ್ದ ಯುವಕ. ಮನೆಯವರು ಅಭಿಷೇಕ್​ಗೆ ಮದುವೆ ಮಾಡಲು ಹೆಣ್ಣು ಹುಡುಕುತ್ತಿದ್ದು, ಎಲ್ಲೇ ಹೋದರೂ ಸರ್ಕಾರಿ ನೌಕರಿ ಇರುವವನೇ ಬೇಕೆಂದು ಹುಡುಗಿ ಮನೆಯವರು ಬೇಡಿಕೆ ಇಡುತ್ತಿದ್ದರಂತೆ. ಒಂದಲ್ಲ, ಎರಡಲ್ಲ ಹತ್ತಾರು ಹುಡುಗಿ ಮನೆಯವರು ಸರ್ಕಾರಿ ನೌಕರಿ ಇರುವ ಹುಡುಗನಿಗೇ ಪಟ್ಟು ಹಿಡಿದಿದ್ದರಿಂದ ಅಭಿಷೇಕ್ ಮನನೊಂದು ಮನೆ ತೊರೆದಿದ್ದಾನೆ ಎನ್ನಲಾಗಿತ್ತು.

ಇದನ್ನೂ ಓದಿ: ಕನ್ಯೆ ಕೊಡುವವರೆಲ್ಲ ಸರ್ಕಾರಿ ನೌಕರಿನೇ ಇರಬೇಕೆಂದ್ರು.. ಬೇಸತ್ತ ಯುವಕ ಮಾಡಿದ್ದೇನು ಗೊತ್ತಾ!?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.