ಹಾವೇರಿ: ವಿವಿಧ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ದಿನಗೂಲಿ ನೌಕರರ ಸಂಘವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಗುತ್ತಿಗೆ ಪದ್ದತಿ ರದ್ದುಪಡಿಸಿ ದಿನಗೂಲಿ ನೌಕರರನ್ನ ಕಾಯಂ ನೌಕರರನ್ನಾಗಿಸಬೇಕು. ಸರ್ಕಾರ ಗುತ್ತಿಗೆನೌಕರರ ಕುರಿತಂತೆ ಇರುವ ದ್ವಂದ್ವನೀತಿ ಕೈಬೀಡಬೇಕು. ಮೂಲವೇತನ ಹಾಗೂ ತುಟ್ಟಿಭತ್ಯ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಒತ್ತಾಯಿಸಿದರು.
ಸರ್ಕಾರಕ್ಕೆ ಮಾರ್ಚ್ 11 ರವರೆಗೆ ಗಡುವು ನೀಡುತ್ತೇವೆ. ಅಷ್ಟರೊಳಗೆ ನಮ್ಮ ಬೇಡಿಕೆ ಸ್ಪಂಧಿಸಬೇಕು ಇಲ್ಲದಿದ್ದರೇ ವಿಧಾನಸೌಧದ ಮುಂದೆ ಧರಣಿ ಸತ್ಯಾಗ್ರಹ ಕೈಗೊಳ್ಳುವುದಾಗಿ ತಿಳಿಸಿದರು. ಅಲ್ಲಿಯೂ ತಮ್ಮ ಬೇಡಿಕೆ ಈಡೇರಿದಿದ್ದರೇ ಅನಿರ್ಧಾಷ್ಟಾವಧಿ ಸತ್ಯಾಗ್ರಹ ಮಾಡುವುದಾಗಿ ಎಚ್ಚರಿಕೆ ನೀಡಿದರು.