ಹಾವೇರಿ: ಜಮ್ಮು ಕಾಶ್ಮೀರದಲ್ಲಾದ ಉಗ್ರರ ದಾಳಿಗೆ ಸಿಲುಕಿ ಯೋಧರು ವೀರಮರಣ ಹೊಂದಿದ ಹಿನ್ನೆಲೆ ಹಾವೇರಿ ಜಿಲ್ಲೆಯ ಹಾನಗಲ್ ಹಾಗೂ ರಾಣೆಬೆನ್ನೂರ ಪಟ್ಟಣಗಳಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ರಾಣೆಬೆನ್ನೂರು ಮತ್ತು ಹಾನಗಲ್ ಸಾರ್ವಜನಿಕರು, ಉಗ್ರರ ಪೈಶಾಚಿಕ ಕೃತ್ಯಕ್ಕೆ ಬಲಿಯಾದ ಯೋಧರ ಅತ್ಮಕ್ಕೆ ಶಾಂತಿ ಕೋರಿದರು. ಅಲ್ಲದೇ ಮೊಂಬತ್ತಿ ಬೆಳಗುವ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಸಮರ್ಪಿಸಿದರು. ಜೊತೆಗೆ ಉಗ್ರರ ಈ ಕೃತ್ಯಕ್ಕೆ ತಕ್ಕ ಪ್ರತ್ಯುತ್ತರ ನೀಡುವಂತೆ ಆಗ್ರಹಿಸಿದರು.