ಹಾವೇರಿ : ಜಾನುವಾರುಗಳಿಗೆ ಮೇವು ಹಾಕಲು ಬಣವೆಯಲ್ಲಿ ಮೇವು ಹಿರಿಯುತ್ತಿದ್ದ ವೇಳೆ ಮೇವಿನ ಬಣವೆ ಮೈಮೇಲೆ ಬಿದ್ದು ರೈತ ಸಾವನ್ನಪ್ಪಿದ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಇಟಗಿ ಗ್ರಾಮದಲ್ಲಿ ನಡೆದಿದೆ.
ಮುಳಗುಂದ (48) ಮೃತ ರೈತ. ಮನೆಯ ಹಿತ್ತಿಲಿನಲ್ಲಿದ್ದ ಮೇವಿನ ಬಣವೆ ಸತತ ಮಳೆಯಿಂದ ಸಂಪೂರ್ಣ ನೆನೆದು ಹೋಗಿತ್ತು. ಹೀಗಾಗಿ ಮೇವು ಹಿರಿದ ವೇಳೆ ಬಣವೆ ಮೈಮೇಲೆ ಬಿದ್ದು ಈ ದುರ್ಘಟನೆ ನಡೆದಿದೆ. ಸ್ಥಳಕ್ಕೆ ಹಲಗೇರಿ ಠಾಣೆ ಪೊಲೀಸರು ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಈ ಸಂಬಂಧ ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.