ಹಾವೇರಿ: ಬಾರ್ನಲ್ಲಿ ದುಬಾರಿ ಮದ್ಯ ಖರೀದಿಸಿ ಆನ್ಲೈನ್ ಮೂಲಕ ಹಣ ಪಾವತಿಸುವ ನಾಟಕವಾಡಿ ವಂಚಿಸುತ್ತಿದ್ದ ಇಬ್ಬರು ಟೆಕ್ಕಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಹಾವೇರಿಯ ನವೀನ್ ಬುಕ್ಕಶೇಟ್ಟರ್ ಮತ್ತು ಸಿದ್ದರಾಜು ಹಿರೇಮಠ ಎಂದು ಗುರುತಿಸಲಾಗಿದೆ.
ಇಬ್ಬರು ಚಿದಾನಂದ ಎಂಬುವರ ಬಾರಿಗೆ ತೆರಳಿ ಮದ್ಯ ಖರೀದಿಸಿದ್ದಾರೆ. ಬಳಿಕ ಫೋನ್ ಪೇ ಮಾಡುತ್ತೇವೆ ಎಂದು ಹೇಳಿ ಹಳೆಯ ಹಣ ಪಾವತಿ ಫೋಟೋ ತೋರಿಸಿ ಅಲ್ಲಿಂದ ಪರಾರಿಯಾಗಿದ್ದರಂತೆ. ಇದೀಗ ಇಬ್ಬರ ಕೃತ್ಯ ಬೆಳಕಿಗೆ ಬಂದಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಾರಿನ ಸಿಸಿಟಿವಿ ಪರಿಶೀಲನೆ ನಡೆಸಿದಾಗ ಇಬ್ಬರ ಕೃತ್ಯ ಬಯಲಾಗಿದ್ದು, ಪೊಲೀಸರು ತನಿಖೆ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. ಇದಲ್ಲದೆ ಹಾವೇರಿ ಹಲವು ಬಾರ್ಗಳಲ್ಲಿ ಈ ಆರೋಪಿಗಳು ಇದೇ ರೀತಿಯ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದ್ದು, ಬಾರ್ ಮಾತ್ರವಲ್ಲದೆ ಮೊಬೈಲ್ ಹಾಗೂ ಬಟ್ಟೆ ಅಂಗಡಿಗಳಲ್ಲೂ ಇಬ್ಬರೂ ಈ ರೀತಿಯ ವಂಚನೆ ಎಸಗಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಹಾವೇರಿ ಹುಕ್ಕೇರಿಮಠ ಜಾತ್ರೆ ಆರಂಭ : ಅದ್ಧೂರಿ ಆಚರಣೆಗೆ ಬ್ರೇಕ್