ಹಾನಗಲ್ : ತಾಲೂಕಿನ ಅಕ್ಕಿ ಆಲೂರ ಪಣದಲ್ಲಿ ಅನುಮಾನಸ್ಪದವಾಗಿ ಬೈಕ್ ಮೇಲೆ ಸಂಚರಿಸಿ ರಸ್ತೆಗಳ ಮೇಲೆ ಉಗುಳಿ ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಿಸಿದ್ದ ನಾಲ್ಕು ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಿದ್ದಾರೆ.
![Four accused arrested in hanagal](https://etvbharatimages.akamaized.net/etvbharat/prod-images/kn-hgl-01-aropiarrest-photo-av-kac10013_25042020111546_2504f_1587793546_965.jpg)
ಸಮೀವುಲ್ಲಾ, ಅಬ್ದುಲ್ ವಾಹಿದ್ ಲಾಲನವರ, ನಿಸಾರಹ್ಮದ್, ಕಬೀರ್ ಹಿತ್ತಲಮನಿ, ಶಾರುಖಾನ್ ಅನ್ವರ್ ಖಾನ್ ಪಠಾಣ ಬಂಧಿತ ಆರೋಪಿಗಳು. ತಡ ರಾತ್ರಿ ಬೈಕ್ನಲ್ಲಿ ಪಟ್ಟಣದ ಪೇಟೆ ಓಣಿಯಲ್ಲಿ ಮಾಸ್ಕ್ ಹಾಕಿಕೊಳ್ಳದೇ ಪದೇ ಪದೆ ಸಂಚರಿಸಿದ್ದಾರೆ. ರಸ್ತೆಯಲ್ಲಿ ಉಗುಳುವುದು ಮಾಡಿದ್ದಾರೆ ಅನುಮಾನಗೊಂಡ ಗ್ರಾಮಸ್ಥರು ಇಂತಹ ಕೃತ್ಯ ಏಕೆ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಜನರು ಸೇರುತಿದ್ದಂತೆ ಹಿಂದೂ ಸಮಾಜಕ್ಕೆ ಅವಹೇಳನಕಾರಿಯಾಗಿ ನಿಂದಿಸಿ ಪರಾರಿಯಾಗಿದ್ದಾರೆ.
![Four accused arrested in hanagal](https://etvbharatimages.akamaized.net/etvbharat/prod-images/kn-hgl-01-aropiarrest-photo-av-kac10013_25042020111546_2504f_1587793546_454.jpg)
ಇದಾದ ಸ್ವಲ್ಪ ಸಮಯದಲ್ಲಿ 15-20 ಜನ ಯುವಕರು ಬಂದು ಗಲಾಟೆ ಮಾಡಿದ್ದಾರೆ ಎಂದು ಪೇಟೆ ಓಣೆಯ ಜನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಪೊಲೀಸರು ನಾಲ್ಕು ಆರೋಪಿಗಳನ್ನು ಬಂದಿಸಿದ್ದು, ಉಳಿದ 15 ಜನರಿಗೆ ಬಲೆ ಬಿಸಿದ್ದಾರೆ.
![Four accused arrested in hanagal](https://etvbharatimages.akamaized.net/etvbharat/prod-images/kn-hgl-01-aropiarrest-photo-av-kac10013_25042020111546_2504f_1587793546_835.jpg)