ಹಾವೇರಿ: ಸಿಎಂ ಬಸವರಾಜ್ ಬೊಮ್ಮಾಯಿ ಅವರು ಅಸಮರ್ಥ ಮುಖ್ಯಮಂತ್ರಿ ಎಂದು ವಿಧಾನಸಭೆ ಮಾಜಿ ಸ್ಪೀಕರ್ ಕೆ. ಬಿ ಕೋಳಿವಾಡ್ ಅವರು ಆರೋಪಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸಿಎಂ ಬಸವರಾಜ್ ಬೊಮ್ಮಾಯಿ ಸಂತೋಷ ಪಾಟೀಲ್ ಪ್ರಕರಣದಲ್ಲಿ ಆರೋಪಿ ಸಚಿವ ಕೆ. ಎಸ್ ಈಶ್ವರಪ್ಪ ಜೊತೆ ನೇರಾ ನೇರ ಮಾತನಾಡಿ ತೀರ್ಮಾನ ತೆಗೆದುಕೊಳ್ಳುತ್ತೇನೆ ಎನ್ನುತ್ತಿದ್ದಾರೆ. ಅವರು ಈ ರೀತಿ ಹೇಳುತ್ತಿರುವುದು ದಡ್ಡತನ, ಅವಿವೇಕತನ. ಅವರೊಬ್ಬ ಅಸಮರ್ಥ ಮುಖ್ಯಮಂತ್ರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಾರಕಿಹೊಳಿ ಪ್ರಕರಣದಂತೆ ಈ ಪ್ರಕರಣದಿಂದ ಆರೋಪಿಗಳು ಹೊರಬಂದರೆ ಆಶ್ಚರ್ಯ ಪಡಬೇಕಾಗಿಲ್ಲ. ಕೆಲ ಹಿಂದೂ ಸಂಘಟನೆಗಳು ಮತ್ತು ಮುಸ್ಲಿಂ ಸಂಘಟನೆಗಳು ಬಿಜೆಪಿ ಕೃಪಾಪೋಷಿತ ಸಂಘಟನೆಗಳು ಎಂದು ಆರೋಪಿಸಿದರು. ಪಿಎಫ್ಐ ಮತ್ತು ಎಸ್ಟಿಎಫ್ಐ ಸಂಘಟನೆಗಳನ್ನ ಬಿಜೆಪಿಯವರೇ ಬೆಳೆಸುತ್ತಿದ್ದಾರೆ ಎಂದು ಕೋಳಿವಾಡ್ ಆರೋಪಿಸಿದರು.
ಇದನ್ನೂ ಓದಿ: ನೋಡಿ: ಸಿದ್ದೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದ ತಹಶೀಲ್ದಾರ್ ನಾಹಿದಾ