ETV Bharat / state

ಬಿಜೆಪಿಯ ಸೋಲಿಗೆ ಒಳ ಮೀಸಲಾತಿಯೂ ಒಂದು ಕಾರಣ : ಮಾಜಿ ಸಚಿವ ಬಿ ಸಿ ಪಾಟೀಲ್​​​ - ಈಟಿವಿ ಭಾರತ ಕನ್ನಡ

ಬಿಜೆಪಿ ಪಕ್ಷದ ಹಲವು ತೀರ್ಮಾನಗಳು ಪಕ್ಷದ ಸೋಲಿಗೆ ಕಾರಣವಾಗಿದೆ. ಇದುವರೆಗೆ ಪಕ್ಷಕ್ಕೆ ಇಷ್ಟು ದೊಡ್ಡ ಪ್ರಮಾಣದ ನಷ್ಟ ಉಂಟಾಗಿರಲಿಲ್ಲ. ನಮ್ಮ ಸೋಲಿನ ಬಗ್ಗೆ ಇಂದು ನಾವು ಪರಾಮರ್ಶೆ ಮಾಡಬೇಕಿದೆ ಎಂದು ಮಾಜಿ ಸಚಿವ ಬಿ.ಸಿ ಪಾಟೀಲ್​ ಹೇಳಿದರು.

former-minister-bc-patil-spoke-about-bjp-lose
ಒಳ ಮೀಸಲಾತಿ ಬಿಜೆಪಿಯ ಸೋಲಿಗೆ ಪ್ರಮುಖ ಕಾರಣ : ಮಾಜಿ ಸಚಿವ ಬಿಸಿ ಪಾಟೀಲ್​​​
author img

By

Published : May 14, 2023, 4:01 PM IST

Updated : May 14, 2023, 4:18 PM IST

ಬಿಜೆಪಿಯ ಸೋಲಿಗೆ ಒಳ ಮೀಸಲಾತಿಯೂ ಒಂದು ಕಾರಣ : ಮಾಜಿ ಸಚಿವ ಬಿ ಸಿ ಪಾಟೀಲ್​​​

ಹಾವೇರಿ : ಜನರು ಬಿಜೆಪಿಯ ಅಭಿವೃದ್ಧಿಗೆ ಮತ ನೀಡುತ್ತಾರೆ ಎಂದುಕೊಂಡಿದ್ದೆವು. ಬಿಜೆಪಿಯ ಹಲವು ನಿರ್ಧಾರಗಳು ಪಕ್ಷದ ಸೋಲಿಗೆ ಕಾರಣವಾಗಿದೆ. ಪ್ರಮುಖವಾಗಿ ಒಳಮೀಸಲಾತಿ ಬಿಜೆಪಿ ಸೋಲಿಗೆ ಕಾರಣವಾಗಿದೆ ಎಂದು ಮಾಜಿ ಸಚಿವ ಬಿ.ಸಿ ಪಾಟೀಲ್​ ಅಭಿಪ್ರಾಯಪಟ್ಟಿದ್ದಾರೆ.

ಜಿಲ್ಲೆಯ ಹಿರೇಕೆರೂರಿನ ತಮ್ಮ ಸ್ವಗೃಹದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ನಾನು ಸೋಲನ್ನು ನಿರೀಕ್ಷಿಸಿರಲಿಲ್ಲ. ಒಳ ಮೀಸಲಾತಿಯಿಂದಾಗಿ ಹಲವು ಲಂಬಾಣಿ ತಾಂಡಾಗಳಿಂದ ಮತಗಳು ನಮಗೆ ಬಂದಿಲ್ಲ. ಸುಮಾರು 90 ಶೇಕಡಾ ಮತಗಳು ಬೇರೆ ಪಕ್ಷಕ್ಕೆ ಹೋಗಿದೆ. ಜೊತೆಗೆ ಜನರು ಕಾಂಗ್ರೆಸ್​ನ ಗ್ಯಾರಂಟಿಗಳನ್ನು ನಂಬಿದ್ದಾರೆ. ಚುನಾವಣಾ ಫಲಿತಾಂಶ ಮತ್ತು ಜನರ ತೀರ್ಪಿಗೆ ತಲೆಬಾಗುತ್ತೇನೆ ಎಂದು ಹೇಳಿದರು.

ಇನ್ನು ಜನರು ನನ್ನನ್ನು ನಾಲ್ಕು ಬಾರಿ ಆಯ್ಕೆ ಮಾಡಿದ್ದರು. ಇಂದು ನಾನು ಸೋತಿದ್ದರೂ ತಾಲೂಕಿನ ಜನರ ಋಣವನ್ನು ತೀರಿಸಿದ್ದೇನೆ ಎಂಬ ತೃಪ್ತಿ ನನಗಿದೆ. ತಾಲೂಕಿನಲ್ಲಿ ಎಲ್ಲಾ ಕೆರೆಗಳನ್ನು ತುಂಬಿಸುವ ಕಾರ್ಯಗಳನ್ನು ಮಾಡಿದ್ದೇವೆ. ಕುಡಿಯುವ ನೀರಿನ ವ್ಯವಸ್ಥೆಗಳನ್ನು ಮಾಡಿದ್ದೇವೆ. ಸಂಪೂರ್ಣವಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸಿ ತಾಲೂಕಿಗೆ ಹೊಸ ರೂಪವನ್ನು ನೀಡಿದ್ದೇನೆ. ಈ ಬಾರಿ ಸೋತಿದ್ದರೂ ಸುಮಾರು 69 ಸಾವಿರ ಜನ ನನ್ನೊಂದಿಗೆ ನಿಂತಿದ್ದಾರೆ. ನಾವೇನು ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿದ್ದೇವೆ. ಅದನ್ನು ಮುಂದಿನ ಶಾಸಕರು ಮುಂದುವರೆಸಿಕೊಂಡು ಹೋಗಲಿ ಎಂಬುದು ನಮ್ಮ ಇಚ್ಛೆ. ಇವತ್ತು ಕಾಂಗ್ರೆಸ್​ ಪಕ್ಷಕ್ಕೆ ಜನರು ಆಶೀರ್ವಾದ ಮಾಡಿದ್ದಾರೆ. ಕಾಂಗ್ರೆಸ್​ ಸರ್ಕಾರ ಎಲ್ಲಾ ಅಭಿವೃದ್ಧಿ ಕೆಲಸವನ್ನು ಮುಂದುವರೆಸಿಕೊಂಡು ಹೋಗಲಿದೆ ಎಂದು ವಿಶ್ವಾಸವಿದೆ ಎಂದು ಹೇಳಿದರು.

ಬಿಜೆಪಿ ಪಕ್ಷದ ಹಲವು ತೀರ್ಮಾನಗಳು ಪಕ್ಷದ ಸೋಲಿಗೆ ಕಾರಣವಾಗಿದೆ. ಕೆಲವು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಅದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಇದುವರೆಗೆ ಪಕ್ಷಕ್ಕೆ ಇಷ್ಟು ದೊಡ್ಡ ಪ್ರಮಾಣದ ನಷ್ಟ ಉಂಟಾಗಿರಲಿಲ್ಲ. ನಮ್ಮ ಸೋಲಿನ ಬಗ್ಗೆ ಇಂದು ನಾವು ಪರಾಮರ್ಶೆ ಮಾಡಬೇಕಿದೆ ಎಂದು ಹೇಳಿದ್ರು.

ಇನ್ನು ಒಳ ಮೀಸಲಾತಿಗೆ ಬಗ್ಗೆ ಬಂಜಾರ ಸಮುದಾಯದವರು ಎಲ್ಲಾ ಕಡೆ ಪ್ರತಿಭಟನೆ ನಡೆಸಿದರು. ಸದಾಶಿವ ಆಯೋಗವನ್ನು ಜಾರಿಗೊಳಿಸಿದರೂ ಜನರಿಗೆ ಅರ್ಥ ಆಗಿಲ್ಲ. ಹೀಗಾಗಿ ಪಕ್ಷಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಜನರು ಕಾಂಗ್ರೆಸ್​ನ ಗ್ಯಾರಂಟಿಯನ್ನು ನಂಬಿದರು. ಆದರೆ ಕಾಂಗ್ರೆಸ್​ನವರಿಗೆ ಈ ಗ್ಯಾರಂಟಿಯನ್ನು ಈಡೇರಸಲು ಸಾಧ್ಯವಾಗದು. ಏಕೆಂದರೆ ಈ ಗ್ಯಾರಂಟಿಗಳ ಈಡೇರಿಕೆಗೆ ರಾಜ್ಯದ ಬಜೆಟ್​ ಕೂಡ ಸಾಕಾಗಲ್ಲ ಎಂದು ಹೇಳಿದರು. ಕಾಂಗ್ರೆಸ್​ದು ಬೋಗಸ್​ ಗ್ಯಾರಂಟಿ. ಅದನ್ನು ಜನ ನಂಬಿದ್ದಾರೆ. ಕಾಂಗ್ರೆಸ್​ ತಾವು ಕೊಟ್ಟಂತಹ ಭರವಸೆಗಳನ್ನು ಈಡೇರಿಸದಿದ್ದರೆ ಬೀದಿಗಿಳಿದು ಹೋರಾಟ ಮಾಡುವುದು. ಜನರ ತೀರ್ಪಿಗೆ ನಾವು ತಲೆ ಬಾಗಲೇಬೇಕು. ಸುಮಾರು 70318 ಮತದಾರರು ನನಗೆ ಮತ ಹಾಕಿದ್ದಾರೆ‌. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಸೋತ ಕೂಡಲೇ ರಾಜಕೀಯ ಮುಗಿಯುವುದಿಲ್ಲ. ನನ್ನ ಬೆಂಬಲಿಗರು ಅಭಿಮಾನಿಗಳಿಗಾಗಿ ನಾನು ರಾಜಕೀಯದಲ್ಲಿರುತ್ತೇನೆ ಎಂದು ಪಾಟೀಲ್​ ಹೇಳಿದರು.

ಇದನ್ನೂ ಓದಿ : ನಾನೂ ಕೋರ್ಟ್ ಮೊರೆ ಹೋಗುತ್ತೇನೆ: ಬಿಜೆಪಿ ಶಾಸಕ ಸಿ.ಕೆ.ರಾಮಮೂರ್ತಿ

Last Updated : May 14, 2023, 4:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.