ETV Bharat / state

ಕುರುಬ ಜನಾಂಗಕ್ಕೆ ಎಸ್​ಟಿ ಮೀಸಲಾತಿ ಸಿಗುವವರೆಗೂ ಹೋರಾಟ ನಿಲ್ಲಲ್ಲ: ಸಚಿವ ಈಶ್ವರಪ್ಪ - Fight until the kurubas gets an ST

ರಾಜಕೀಯವನ್ನು ಬದಿಗಿಟ್ಟು ಬಂದಿರುವ ನಾವು, ರಾಜ್ಯದಲ್ಲಿರುವ ಬಡ ಕುರುಬರಿಗೆ ಸೌಲಭ್ಯ ಕಲ್ಪಿಸುವುದಕ್ಕಾಗಿ ಎಸ್​ಟಿ ಮೀಸಲಾತಿ ಹೋರಾಟ ಪ್ರಾರಂಭಿಸಿದ್ದೇವೆ. ಕಾಗಿನೆಲೆ ಶ್ರೀಗಳ ನೇತೃತ್ವದಲ್ಲಿ ಕುರುಬ ಜನಾಂಗಕ್ಕೆ ಎಸ್​ಟಿ ಮೀಸಲಾತಿ ಸಿಗುವವರೆಗೂ ಹೋರಾಟ ಮುಂದುವರೆಸುವುದಾಗಿ ಸಚಿವ ಈಶ್ವರಪ್ಪ ತಿಳಿಸಿದರು.

ಸಚಿವ ಈಶ್ವರಪ್ಪ
ಸಚಿವ ಈಶ್ವರಪ್ಪ
author img

By

Published : Jan 15, 2021, 10:03 PM IST

ಹಾವೇರಿ: ಕನಕದಾಸರ ಭಕ್ತಿಗೆ ಕೃಷ್ಣನು ತಿರುಗಿ ದರ್ಶನ ನೀಡಿರುವಾಗ, ಕಾಗಿನೆಲೆ ಶ್ರೀಗಳ ಪಾದಯಾತ್ರೆಗೆ ಪ್ರಧಾನಿ ನರೇಂದ್ರ ಮೋದಿ ಒಲಿಯುವುದಿಲ್ಲವೇ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಅಭಿಪ್ರಾಯಪಟ್ಟಿದ್ದಾರೆ.

ಬ್ಯಾಡಗಿ ತಾಲೂಕಿನ ಕಾಗಿನೆಲೆಯಲ್ಲಿ ನಡೆದ ಕುರುಬರ ಎಸ್​ಟಿ ಪಾದಯಾತ್ರೆ ಆರಂಭದ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾವು ಯಾವ ಜಾತಿಯ ಅರ್ಹತೆಯನ್ನು ಕಸಿದುಕೊಳ್ಳುತ್ತಿಲ್ಲ, ಬದಲಿಗೆ ನಮ್ಮ ಅರ್ಹತೆಯ ಮೀಸಲಾತಿ ಕೇಳುತ್ತಿದ್ದೇವೆ ಎಂದರು.

ಕುರುಬರ ಎಸ್​ಟಿ ಪಾದಯಾತ್ರೆ ಆರಂಭದ ಸಮಾವೇಶದಲ್ಲಿ ಸಚಿವರ ಮಾತು

ಎಸ್​ಟಿ ಮೀಸಲಾತಿ ಹೋರಾಟಕ್ಕೆ ಎಲ್ಲಾ ಪಕ್ಷದ ಕುರುಬ ಮುಖಂಡರು ಇಚ್ಚಾಶಕ್ತಿ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಕಾರಣ ನಿಸ್ವಾರ್ಥವಾಗಿ ಎಸ್​ಟಿ ಮೀಸಲಾತಿ ಹೋರಾಟ ಆರಂಭಿಸಿರುವ ಕಾಗಿನೆಲೆ ಶ್ರೀಗಳು ಎಂದು ಈಶ್ವರಪ್ಪ ಅಭಿಪ್ರಾಯಪಟ್ಟರು.

ರಾಜಕೀಯವನ್ನು ಬದಿಗಿಟ್ಟು ಬಂದಿರುವ ನಾವು, ರಾಜ್ಯದಲ್ಲಿರುವ ಬಡ ಕುರುಬರಿಗೆ ಸೌಲಭ್ಯ ಕಲ್ಪಿಸುವುದಕ್ಕಾಗಿ ಈ ಹೋರಾಟ ಪ್ರಾರಂಭಿಸಿದ್ದೇವೆ. ಕಾಗಿನೆಲೆ ಶ್ರೀಗಳ ನೇತೃತ್ವದಲ್ಲಿ ಕುರುಬ ಜನಾಂಗಕ್ಕೆ ಎಸ್​ಟಿ ಮೀಸಲಾತಿ ಸಿಗುವವರೆಗೂ ಹೋರಾಟ ಮುಂದುವರೆಸುವುದಾಗಿ ಈಶ್ವರಪ್ಪ ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.