ಹಾವೇರಿ: ರೈತರಿಗೆ ಹಣ ನೀಡದೆ ಕಾರ್ಖಾನೆಯಲ್ಲಿನ ಸಕ್ಕರೆ ಸಾಗಿಸುತ್ತಿದ್ದ ಲಾರಿಗಳನ್ನು ಕಬ್ಬು ಬೆಳೆಗಾರರು ತಡೆ ಹಿಡಿದ ಘಟನೆ ಜಿಲ್ಲೆಯ ಸಂಗೂರಿನಲ್ಲಿ ನಡೆದಿದೆ.
ಸ್ಥಳೀಯ ಸಹಕಾರಿ ಸಕ್ಕರೆ ಕಾರ್ಖಾನೆಯನ್ನ ಜಿ ಎಂ ಶುಗರ್ಸ್ ಕಂಪನಿ 30 ವರ್ಷಕ್ಕೆ ಲೀಸ್ ಪಡೆದಿದೆ. ಈ ಕಂಪನಿ ರೈತರಿಗೆ ಮತ್ತು ಅಡಳಿತ ಮಂಡಳಿಗೆ ಹಣ ನೀಡುವುದು ಬಾಕಿ ಇದೆ. ಈ ಹಣ ಪಾವತಿಸಿದ ಬಳಿಕವಷ್ಟೇ ಕಾರ್ಖಾನೆಯ ಸಕ್ಕರೆ ಸಾಗಿಸುವಂತೆ ನ್ಯಾಯಾಲಯ ಆದೇಶ ನೀಡಿತ್ತು ಎನ್ನಲಾಗ್ತಿದೆ. ಆದರೆ ಕಳೆದ ರಾತ್ರಿ ಕಂಪನಿಯು, ಸಕ್ಕರೆಯನ್ನು ಲಾರಿಗಳಲ್ಲಿ ತುಂಬಿಸಿ ಸಾಗಿಸಲು ಮುಂದಾಗಿತ್ತು.
ಇದರಿಂದ ಆಕ್ರೋಶಗೊಂಡ ರೈತರು ಸಕ್ಕರೆ ತುಂಬಿದ ಲಾರಿಗಳನ್ನು ಕಾರ್ಖಾನೆ ಅವರಣದಲ್ಲಿ ತಡೆದು, ಮುಖ್ಯ ಗೇಟ್‌ಗೆ ಬೀಗ ಹಾಕಿದ್ದಾರೆ. ಅಲ್ಲದೆ ರೈತರ ಮತ್ತು ಅಡಳಿತ ಮಂಡಳಿಯ ಬಾಕಿ ಹಣ ಪಾವತಿಸಿದ ಬಳಿಕವೇ ಲಾರಿ ಬಿಡುವುದಾಗಿ ಪಟ್ಟು ಹಿಡಿದಿದ್ದಾರೆ.