ETV Bharat / state

ಬರ ಪರಿಹಾರ ಕಡಿಮೆ ಮಾಡಿದ್ದಕ್ಕೆ ಕಿಡಿ; ಸರ್ಕಾರಕ್ಕೆ ತಲಾ 1 ಸಾವಿರ ರೂ. ಕೊಡಲು ಮುಂದಾದ ಹಾವೇರಿ ರೈತರು

ಬರ ಪರಿಹಾರವಾಗಿ ರಾಜ್ಯ ಸರ್ಕಾರ ರೈತರಿಗೆ 20 ರಿಂದ 25 ಸಾವಿರ ನೀಡುವಂತೆ ಹಾವೇರಿ ರೈತರು ಆಗ್ರಹಿಸಿದ್ದಾರೆ.

ಹಾವೇರಿ ರೈತರ ಆಕ್ರೋಶ
ಹಾವೇರಿ ರೈತರ ಆಕ್ರೋಶ
author img

By ETV Bharat Karnataka Team

Published : Dec 12, 2023, 10:27 AM IST

ಹಾವೇರಿ: ರಾಜ್ಯದಲ್ಲಿ ಬರಗಾಲದಿಂದ ತತ್ತರಿಸಿರುವ ರೈತರಿಗೆ ಸರ್ಕಾರ 2000 ರೂಪಾಯಿ ಬರ ಪರಿಹಾರ ನೀಡಲು ಮುಂದಾಗಿದೆ. ಆದರೆ ಇದಕ್ಕೆ ಹಾವೇರಿ ಜಿಲ್ಲೆ ಸವಣೂರು ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರ ರೈತರನ್ನು ಭಿಕ್ಷುಕರಂತೆ ನೋಡುತ್ತಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ಸರ್ಕಾರ ರೈತರಿಗೆ ಪರಿಹಾರವಾಗಿ 2 ಸಾವಿರ ರೂಪಾಯಿ ನೀಡುವುದು ಬೇಡ, ತಾವೇ ಒಂದು ಸಾವಿರ ರೂಪಾಯಿಯನ್ನು ಸರ್ಕಾರಕ್ಕೆ ನೀಡುವುದಾಗಿ ಆಕ್ರೋಶ ಹೊರಹಾಕಿದ್ದಾರೆ. ನಂತರ ಐವತ್ತಕ್ಕೂ ಅಧಿಕ ರೈತರು ತಮ್ಮ ಕೈಯಲ್ಲಿ 500 ಮುಖಬೆಲೆಯ ನೋಟುಗಳನ್ನು ಹಿಡಿದು ಅಣುಕು ಪ್ರದರ್ಶನ ಮಾಡಿದರು.

ಮುಂಗಾರು ಪೂರ್ವ ಹಿನ್ನೆಲೆ ಸಾವಿರಾರು ರೂಪಾಯಿ ಖರ್ಚು ಮಾಡಿ ಬಿತ್ತನೆ ಮಾಡಲಾಗಿತ್ತು. ಆಗ ಮಳೆ ಕೈಕೊಟ್ಟಿತ್ತು. ಮುಂಗಾರು ಪೂರ್ವ ಕೈಕೊಟ್ಟಿದ್ದರಿಂದ ಮತ್ತೆ ಮುಂಗಾರು ಮಳೆಗೆ ಬಿತ್ತನೆ ಮಾಡಲಾಯಿತು. ಆಗಲೂ ವರುಣನ ಅವಕೃಪೆಯಿಂದ ಇದ್ದ ಬೆಳೆಯನ್ನು ಕಳೆದುಕೊಳ್ಳಬೇಕಾಯಿತು. ಕೊನೆಯ ಪಕ್ಷ ಹಿಂಗಾರು ಬೆಳೆಗೆ ಜಮೀನು ಸಿದ್ಧಪಡಿಸಿಟ್ಟುಕೊಳ್ಳಲಾಯಿತು. ಆದರೆ ಹಿಂಗಾರು ಕೂಡ ಕೈಕೊಟ್ಟಿತು. ಸದ್ಯ ಒಂದು ಎಕರೆಗೆ ಬಿತ್ತನೆ ಮಾಡಲು ಪ್ರತಿಯೊಬ್ಬ ರೈತರು 10 ಸಾವಿರದಿಂದ ಹಿಡಿದು 20 ಸಾವಿರದವರೆಗೆ ಹಣ ಖರ್ಚು ಮಾಡಿದ್ದೇವೆ. ಗೊಬ್ಬರ ಆಳುಹೂಳು ಎಂದು ಎಕರೆಗೆ ಸುಮಾರು 25 ಸಾವಿರ ರೂಪಾಯಿ ಹಣ ಖರ್ಚು ಮಾಡಿದ್ದೇವೆ ಎಂದರು.

ಸಾಲ ಸೂಲ ಮಾಡಿ ಬಿತ್ತನೆ ಮಾಡಿದ ಬೆಳೆಗಳು ಹಾಳಾಗಿವೆ. ಆದರೆ ಸರ್ಕಾರ ತಮಗೆ 2 ಸಾವಿರ ರೂಪಾಯಿ ಹಾಕಲು ಮುಂದಾಗಿರುವುದು ತೀವ್ರ ಬೇಸರ ತರಿಸಿದೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು. ಬಳಿಕ ರೈತರೆಲ್ಲ ಸೇರಿ ತಲಾ ಒಂದೊಂದು ಸಾವಿರ ರೂಪಾಯಿ ಸೇರಿಸಿ ತಹಶಿಲ್ದಾರ್‌ಗೆ ಹಣ ನೀಡಲು ಮುಂದಾದರು. ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಕಾಂಗ್ರೆಸ್ ಸರ್ಕಾರ ರೈತರನ್ನು ಭಿಕ್ಷುಕರಂತೆ ನೋಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.

25 ಸಾವಿರ ಪರಿಹಾರಕ್ಕೆ ಆಗ್ರಹ: ಸರ್ಕಾರ ಕನಿಷ್ಠ ಪಕ್ಷ ಎಕರೆಗೆ 20 ರಿಂದ 25 ಸಾವಿರ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದರು. ಅಲ್ಲದೆ ರೈತರು ಈ ರೀತಿ ಕೂಡಿಸಿದ ಹಣವನ್ನು ತಹಶಿಲ್ದಾರ್ ಮೂಲಕ ಸರ್ಕಾರಕ್ಕೆ ನೀಡಲು ಮುಂದಾದರು. ಆದರೆ ಹಣ ಪಡೆಯದ ಸವಣೂರು ತಹಶಿಲ್ದಾರ್, ರೈತರಿಗೆ ಅಧಿಕ ಪ್ರಮಾಣದ ಪರಿಹಾರ ವಿತರಣೆ ಮಾಡುವಂತೆ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ತಿಳಿಸಿದರು.

ಇದನ್ನೂ ಓದಿ: ಸಂಗೊಳ್ಳಿ ರಾಯಣ್ಣ ಸೊಸೈಟಿ ಗ್ರಾಹಕರು-ಛಲವಾದಿ ಮಹಾಸಭಾ ಪ್ರತಿಭಟನೆ : ಸಮಸ್ಯೆ ಆಲಿಸಿದ ಸಚಿವರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.