ಹಾವೇರಿ : ಜಿಲ್ಲೆಯ ಹಾನಗಲ್ ತಾಲೂಕಿನ ಕೋಣನಕೊಪ್ಪದ 8 ಎಕರೆ ಜಮೀನಿನಲ್ಲಿ ಅಡಿಕೆ, ಬಾಳೆ, ತೆಂಗು ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆದು ನೆಮ್ಮದಿಯ ಜೀವನ ಕಳೆಯುತ್ತಿದ್ದರು. ಕಾರ್ಯನಿಮಿತ್ತ ಬೆಳಗಾವಿಯಲ್ಲಿದ್ದರು. ಆಗಾಗ ಕೋಣನಕೊಪ್ಪದ ತೋಟಕ್ಕೆ ಬಂದು ರಿಲ್ಯಾಕ್ಸ್ ಆಗುತ್ತಿದ್ದರು. ಆದರೆ, ಕಳೆದ ವರ್ಷದಿಂದ ಸೋಮಶೇಖರ್ ತೋಟಕ್ಕೆ ಕಳ್ಳರ ಕಾಟ ಶುರುವಾಗಿತ್ತು.
ಲಕ್ಷಾಂತರ ರೂಪಾಯಿ ಆದಾಯ ತರುವ ಎಳನೀರು. ಅಡಿಕೆ ಮತ್ತು ಬಾಳೆಗೊನೆಗಳು ರಾತ್ರೋರಾತ್ರಿ ಕಾಣೆಯಾಗುತ್ತಿದ್ದವು. ಸೋಮಶೇಖರ್ ಹೆಚ್ಚು ಇರುವುದು ಬೆಳಗಾವಿಯಲ್ಲಿ. ಜಮೀನು ಇರುವುದು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕೋಣನಕೊಪ್ಪದಲ್ಲಿ. ಈ ಸಮಸ್ಯೆಗೆ ಸೋಮಶೇಖರ್ ಮೊರೆ ಹೋಗಿದ್ದು ಆಧುನಿಕ ತಂತ್ರಜ್ಞಾನದತ್ತ.
ಸೋಮಶೇಖರ್ ತಮ್ಮ ತೋಟದಲ್ಲಿ ಸೋಲಾರ್ ಸಿಸ್ಟಮ್‌ನಿಂದ ಕಾರ್ಯನಿರ್ವಹಿಸುವ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದರು. ಈ ತಂತ್ರಜ್ಞಾನದ ಮೂಲಕ ಬೆಳಗಾವಿಯಲ್ಲಿದ್ದು, ಕೋಣನಕೊಪ್ಪದ ತೋಟ ವೀಕ್ಷಣೆ ಮಾಡಲು ಸಹಕಾರಿಯಾಯಿತು.
ಅಲ್ಲದೆ, ತೋಟಕ್ಕೆ ಅಪರಿಚಿತರು ಕಾಲಿಡುತ್ತಿದ್ದಂತೆ ಸಿಸಿಟಿವಿ ಕ್ಯಾಮೆರಾ ಸೆನ್ಸಾರ್ ಆ ಕಡೆ ತಿರುಗಿ ಬಂದವರ ದೃಶ್ಯವನ್ನು ಸೋಮಶೇಖರ್ ಮೊಬೈಲ್‌ಗೆ ಕಳಿಸುತ್ತದೆ. ಸೋಮಶೇಖರ್ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾ ಲಕ್ಷಾಂತರ ರೂಪಾಯಿ ಮೌಲ್ಯದ್ದಾಗಿದೆ.
ದೃಶ್ಯದ ಜೊತೆಗೆ ಆಡಿಯೋ ಸಹ ಕಳಿಸುತ್ತೆ. ಇದರಿಂದ ಸೋಮಶೇಖರ್ ತೋಟಕ್ಕೆ ಯಾರಾದರು ಅಪರಿಚಿತರು ಬರುತ್ತಿದ್ದಂತೆ ಅಲ್ಲಿನ ತಮ್ಮ ಸಹಾಯಕನಿಗೆ ತೋಟದಲ್ಲಿ ಈ ರೀತಿ ಬಂದಿದ್ದಾರೆ ಗಮನಹರಿಸು ಎಂದು ತಿಳಿಸುತ್ತಾರೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಒಂದೊಂದು ಬಾರಿ ದ್ವನಿ ಕೇಳುತ್ತಿದ್ದಂತೆ ತೋಟಕ್ಕೆ ಬಂದ ಅಪರಿಚಿತರು ತೋಟದಲ್ಲಿ ಯಾರು ಇದ್ದಾರೆ ಎಂದು ಭಯದಿಂದ ಕಾಲ್ಕೀಳಲಾರಂಭಿಸಿದರು. ಪರಿಣಾಮ, ಈಗ ತೋಟದಲ್ಲಿ ಕಳ್ಳತನ ನಿಂತಿದೆ. ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಅಡಿಕೆ ತೆಂಗು ಮತ್ತು ಬಾಳೆಯ ಫಸಲು ಸೋಮಶೇಖರ್ ಕೈಸೇರುತ್ತಿವೆ. ಈ ಸಿಸಿಟಿವಿ ಕ್ಯಾಮೆರಾ ಸುಮಾರು 1 ಕಿ.ಮೀ ಸುತ್ತಳತೆಯ ದೃಶ್ಯ ಕವರ್ ಮಾಡುತ್ತೆ.
ಇದರಿಂದ ಸೋಮಶೇಖರ್ ಅಷ್ಟೇ ಅಲ್ಲ. ಅವರ ಆಜು-ಬಾಜು ತೋಟದವರಿಗೆ ಸಹ ಅನುಕೂಲವಾಗಿದೆ. ತೋಟ ಆಧುನಿಕ ತಂತ್ರಜ್ಞಾನ ಹೊಂದಿದ್ದು, ವಿದ್ಯುತ್ ಇಲ್ಲದಿದ್ದರೂ ನೀರು ಪೂರೈಸುವ 40 ಸಾವಿರ ಲೀಟರ್ ಸಂಗ್ರಹಗಾರವನ್ನು ಸಹ ಇವರು ನಿರ್ಮಿಸಿದ್ದಾರೆ. ವಿದ್ಯುತ್ ಇಲ್ಲದಾಗ ಈ ಟ್ಯಾಂಕ್ನಿಂದ ತೋಟಕ್ಕೆ ನೀರು ಹರಿಯುತ್ತೆ.
ವಿದ್ಯುತ್ ಬರುತ್ತಿದ್ದಂತೆ ಟ್ಯಾಂಕ್‌ಗೆ ನೀರು ಸೇರುತ್ತೆ. ಟ್ಯಾಂಕರ್ ತುಂಬಿಕೊಳ್ಳುತ್ತೆ. ಜೊತೆಗೆ ತೋಟದಲ್ಲಿರುವ ಬೆಳೆಗಳಿಗೆ ನೀರು ಸಹ ಹರಿಯುವ ವ್ಯವಸ್ಥೆ ಸಹ ಇದೆ. ಒಟ್ಟಾರೆಯಾಗಿ ಸೋಮಶೇಖರ್‌ಗೆ ಆಧುನಿಕ ತಂತ್ರಜ್ಞಾನ ಬಳಕೆಯಿಂದ ನೆಮ್ಮದಿಯ ಜೀವನ ತಂದಿದೆ. ತಮ್ಮ ತೋಟವನ್ನ ಕಳ್ಳರಿಂದ ರಕ್ಷಿಸುವ ಜೊತೆಗೆ ಆದಾಯ ಕೈಸೇರುವಂತೆ ಮಾಡಿದೆ.
ಓದಿ: ಭಾರತೀಯ ಯುದ್ಧ ವಿಮಾನಗಳ ಅತಿದೊಡ್ಡ ಫ್ಲೈಪಾಸ್ಟ್.. 75 ರ ಆಕೃತಿಯಲ್ಲಿ ಹಾರಾಡಿದ ಜಾಗ್ವಾರ್ಸ್