ಹಾವೇರಿ : ಜಿಲ್ಲೆ ಶಿಗ್ಗಾಂವಿ ತಾಲೂಕಿನ ಗಂಜಿಗಟ್ಟಿ ಗ್ರಾಮದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಶಂಕು ಸ್ಥಾಪನೆ ನೆರವೇರಿಸಿದರು. ಇದೇ ವೇಳೆ ಕುರುಬ ಸಮುದಾಯದ ಬಾಂಧವರು ಸಿಎಂ ಬಸವರಾಜ ಬೊಮ್ಮಾಯಿಗೆ ಟಗರು ಮರಿ ನೀಡಿ ಸನ್ಮಾನ ಮಾಡಿದರು.
ನಂತರ ಮಾತನಾಡಿದ ಸಿಎಂ ಬೊಮ್ಮಾಯಿ, ಹಾಲುಮತ ಸಮುದಾಯದ ಭವನ ನಿರ್ಮಾಣಕ್ಕೆ 3 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದೇನೆ. ಶಿಕ್ಷಣದಲ್ಲಿ ಈ ಸಮುದಾಯದ ಮಕ್ಕಳು ಮುಂದೆ ಬರಬೇಕು.
21ನೇ ಶತಮಾನ ಜ್ಞಾನದ ಶತಮಾನ. ಕನಕದಾಸರು ಹುಟ್ಟಿದ ನಾಡು, ಸಂತರ ಸಿಂಚನ ಇದೆ. ಸಮಾನತೆ ಗುಣ ಇದೆ. ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡೋಣ ಎಂದರು.
ಶಿಗ್ಗಾಂವಿ-ಸವಣೂರು ಕ್ಷೇತ್ರದ ಅಭಿವೃದ್ಧಿ ನನ್ನ ಗುರಿ. ಸನ್ಮಾನ ಮಾಡಿ ಕರಿ ಕಂಬಳಿ ಹಾಕಿದ್ದಾರೆ. ಈ ಬಗ್ಗೆ ಸಾಕಷ್ಟು ಚರ್ಚೆ ಆಗಿದೆ. ಅದು ಅವರ ಶ್ರಮ, ಅವರ ಪ್ರೀತಿಯ ಸಂಕೇತ, ಅದು ಜೀವಂತಿಕೆಯ ಸಂಕೇತ, ಚಳಿಗಾಲದಲ್ಲಿ ಬೇರೆಯೊಬ್ಬರಿಗೆ ರಕ್ಷಣೆ ನೀಡುತ್ತೆ ಎಂದರು.
ಇದನ್ನೂ ಓದಿ :ಹಿಜಾಬ್ ಬಗ್ಗೆ ವಿವಾದ ಸೃಷ್ಟಿಸುವವರ ಮೇಲೆ ಕಾನೂನು ಕ್ರಮ: ಬೊಮ್ಮಾಯಿ