ETV Bharat / state

ರಾಣೆಬೆನ್ನೂರಲ್ಲಿ ನಕಲಿ ಎಸಿಬಿ ಅಧಿಕಾರಿ ಅರೆಸ್ಟ್​ - ರಾಣೇಬೇನ್ನೂರಲ್ಲಿ ನಕಲಿ ಎಸಿಬಿ ಅಧಿಕಾರಿ ಬಂಧನ

ನಗರಸಭೆಯ ಅಧಿಕಾರಿಗಳಿಗೆ ವಂಚಿಸುತ್ತಿದ್ದ ನಕಲಿ ಎಸಿಬಿ ಅಧಿಕಾರಿಯನ್ನು ರಾಣೆಬೆನ್ನೂರಲ್ಲಿ ಪೊಲೀಸರು ಬಂಧಿಸಿದ್ದಾರೆ.

Fake ACB officer arrested
ನಕಲಿ ಎಸಿಬಿ ಅಧಿಕಾರಿ ಬಂಧನ
author img

By

Published : Nov 27, 2021, 6:14 PM IST

ರಾಣೆಬೆನ್ನೂರು(ಹಾವೇರಿ): ಎಸಿಬಿ ಅಧಿಕಾರಿ ಎಂದು ಹೇಳಿಕೊಂಡು ನಗರಸಭೆಯ ಅಧಿಕಾರಿಗಳಿಗೆ ವಂಚಿಸುತ್ತಿದ್ದ ನಕಲಿ ಅಧಿಕಾರಿಯನ್ನು ಇಲ್ಲಿನ ಶಹರ್​ ಠಾಣಾ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಬೆಂಗಳೂರಿನ ಹಲಸೂರು ನಿವಾಸಿ ಜಾನ್ ಮ್ಯಾಥ್ಯೂ ಅಲಿಯಾಸ್ ಕೆ ಪಿ ಮ್ಯಾಥ್ಯೂ ಬಂಧಿತ ಆರೋಪಿ. ಈತ ನಗರಸಭೆಯ ಇಂಜಿನಿಯರ್​​ ಮಹೇಶ್​​ ಗುಡಿಸಲಮನಿ ಎಂಬುವರಿಗೆ ತಾನು ಎಸಿಬಿ ಅಧಿಕಾರಿ. ಇತ್ತೀಚಿಗೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ ಪಟ್ಟಿಯಲ್ಲಿ ನಿಮ್ಮ ಹೆಸರಿದೆ. ನನಗೆ ಹಣ ನೀಡಿದರೆ ನಿಮ್ಮ ಹೆಸರನ್ನು ಪಟ್ಟಿಯಿಂದ ತೆಗೆಯುವುದಾಗಿ ಹಣದ ಬೇಡಿಕೆ ಇಟ್ಟಿದ್ದನಂತೆ.

ಬಳಿಕ ಇಂಜಿನಿಯರ್​​ ಈ ವಿಷಯವನ್ನು ನಗರಸಭೆ ಪೌರಾಯುಕ್ತರಾದ ಉದಯ್​ ಕುಮಾರ್​.ಬಿ. ಟಿ ಅವರ ಗಮನಕ್ಕೆ ತಂದು ರಾಣೆಬೆನ್ನೂರಿನ ಶಹರ್​ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ತಕ್ಷಣ ಕಾರ್ಯ ಪ್ರವೃತರಾದ ಪೊಲೀಸರು ಆರೋಪಿಯನ್ನು ಬಂಧಿಸಿ ಆತನ ವಿರುದ್ಧ ಐಪಿಸಿ ಸೆಕ್ಷನ್ 385,418,419,420,511 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗಟ್ಟಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.