ಹಾನಗಲ್: ತಾಲೂಕಿನ ಬೈಚವಳ್ಳಿ ಗ್ರಾಮದ ರೈತನೋರ್ವನ ಮಗಳಾದ ರಮ್ಯಾ ಎನ್. ಸೋಮಪ್ಪನವರ, ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625ಕ್ಕೆ 607ಅಂಕಗಳನ್ನ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾಳೆ.
ಬೈಚವಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ರಮ್ಯಾ ವ್ಯಾಸಂಗ ಮಾಡಿದ್ದು, ಯಾವುದೇ ಟ್ಯೂಷನ್ ಪಡೆಯದೇ ಶಾಲೆಯಲ್ಲಿ ಮಾಡಲಾದ ಪಾಠವನ್ನು ಶ್ರದ್ಧೆಯಿಂದ ಆಲಿಸಿ ತನ್ನ ಪರಿಶ್ರಮದಿಂದ ಉತ್ತಮ ಅಂಕ ಗಳಿಸಿದ್ದಾಳೆ ಎಂದು ಶಾಲೆಯ ಮುಖ್ಯೋಪಾಧ್ಯಾಯರು ಸೇರಿದಂತೆ ಊರಿನ ಗಣ್ಯರು ಸಿಹಿ ತಿನ್ನಿಸುವುದರ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿನಿ ರಮ್ಯಾ ಮಾತನಾಡಿ, ಈ ಸಾಧನೆ ತೃಪ್ತಿ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದ್ದು, ಈ ಸಾಧನೆಗೆ ನನ್ನ ತಂದೆ, ತಾಯಿ ಮತ್ತು ನಮ್ಮ ಶಾಲೆಯ ಶಿಕ್ಷಕವೃಂದವೇ ಕಾರಣ ಎಂದಿದ್ದಾಳೆ.