ರಾಣೆಬೆನ್ನೂರು: ನಗರದ ಗಂಗಾಪುರ ರಸ್ತೆ ಹಾಗೂ ಹೊನ್ನತ್ತಿ ರಸ್ತೆ ಮಾರ್ಗವಾಗಿ ಸಂಚರಿಸುವ ವಾಹನ ಸವಾರರು ಟ್ರಾಫಿಕ್ ಸಮಸ್ಯೆಯಿಂದ ಬೇಸತ್ತು ಹೋಗಿದ್ದರು. ಈ ಕುರಿತು ಈಟಿವಿ ಭಾರತ ವಿಸ್ತೃತ ವರದಿ ಬಿತ್ತರಿಸಿತ್ತು. ಸದ್ಯ ಟ್ರಾಫಿಕ್ ಸಮಸ್ಯೆ ಒಂದು ಮಟ್ಟಕ್ಕೆ ಬಗೆಹರಿದಿದ್ದು, ವಾಹನ ಸವಾರರು ನಿಟ್ಟುಸಿರು ಬಿಡುವಂತಾಗಿದೆ.
ಹೊನ್ನತ್ತಿ ಮಾರ್ಗದ ರೈಲ್ವೆ ಗೇಟಿನಲ್ಲಿ ಕೇಳ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ಹಿನ್ನಲೆ ಈ ಮಾರ್ಗದಲ್ಲಿ ವಾಹನಗಳನ್ನು ಬಂದ್ ಮಾಡಲಾಗಿತ್ತು. ಈ ಹಿನ್ನೆಲೆ ಎಲ್ಲಾ ವಾಹನಗಳು ಗಂಗಾಪುರ ರೈಲ್ವೆ ಗೇಟ್ ಮಾರ್ಗವಾಗಿ ರಾಣೆಬೆನ್ನೂರು ನಗರಕ್ಕೆ ಬರಬೇಕಿತ್ತು. ಹೀಗಾಗಿ ಪ್ರತಿ ನಿತ್ಯ ವಾಹನ ಸವಾರರು ಟ್ರಾಫಿಕ್ ಕಿರಿಕಿರಿ ಅನುಭವಿಸುವಂತಾಗಿತ್ತು. ಈ ರಸ್ತೆಯಲ್ಲಿ ಸಾವಿರಾರು ವಾಹನಗಳು, ಬಸ್ಸುಗಳು, ಸರಕು ಲಾರಿಗಳು ಸಂಚಾರ ಮಾಡುವುದರಿಂದ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದೆ. ಅದರಲ್ಲೂ ರೈಲು ಸಂಚರಿಸುವ ಸಮಯದಲ್ಲಿ ಗೇಟ್ ಬಂದ್ ಮಾಡಿದ್ರೆ ಸುಮಾರು ಒಂದು ಕಿಲೋಮೀಟರ್ ದೂರದಷ್ಟು ವಾಹನಗಳು ಸಾಲುಗಟ್ಟಿ ನಿಲ್ಲುತ್ತಿದ್ದವು. ಇದರಿಂದ ವಹನ ಸವಾರರಿಗೆ ಇನ್ನಷ್ಟು ಕಿರಿಕಿರಿಯಾಗುತ್ತಿತ್ತು.
Byte: ಮಲ್ಲಿಕಾರ್ಜುನ ಅಂಗಡಿ,ನಗರಸಭಾ ಸದಸ್ಯ
ಇವೆಲ್ಲಾ ಸಮಸ್ಯೆಗಳ ಕುರಿತು ವಿಸ್ತೃತ ವರದಿಯನ್ನ ಈಟಿವಿ ಭಾರತ ಬಿತ್ತರಿಸಿತ್ತ. ಇದರಿಂದ ಎಚ್ಚೆತ್ತುಕೊಂಡ ನಗರಸಭೆ ಹಾಗೂ ರೈಲ್ವೆ ಅಧಿಕಾರಿಗಳು ರೈಲ್ವೆ ಗೇಟ್ ಬಳಿ ಟ್ರಾಫಿಕ್ ಸಮಸ್ಯೆ ತಡೆಯಲು ಪರ್ಯಾಯವಾಗಿ ರಸ್ತೆ ನಿರ್ಮಿಸಿದ್ದಾರೆ. ಸದ್ಯ ಗಂಗಾಪುರ-ಹೊನ್ನತ್ತಿ ರಸ್ತೆಯ ಮಾರ್ಗದ ಸವಾರರು ಹಾಗೂ ಸಾರ್ವಜನಿಕರು ಟ್ರಾಫಿಕ್ ಸಮಸ್ಯೆಯಿಂದ ಮುಕ್ತಿ ಹೊಂದಿದ್ದಾರೆ.
ವರದಿಯಿಂದ ಎಚ್ಚೆತ್ತುಕೊಂಡ ಪೊಲೀಸರು...
ಈಟಿವಿ ಭಾರತ ಸುದ್ದಿ ಪ್ರಸಾರ ಮಾಡಿದ್ದೇ ತಡ ಸಂಚಾರಿ ಪೊಲೀಸ್ ಠಾಣೆಯವರು ಸಹ ಇಲ್ಲಿನ ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಇಬ್ಬರು ಸಿಬ್ಬಂದಿಯನ್ನ ನಿಯೋಜಿಸಿದ್ದಾರೆ. ಆದರಿಂದ ಸಾವಿರಾರು ವಾಹನಗಳನ್ನು ನಿಯಂತ್ರಿಸಲು ಹಾಗೂ ಸವಾರರು ಸುಗಮವಾಗಿ ಸಾಗಲು ಸಾಧ್ಯವಾಗಿದೆ.
ಈಟಿವಿ ಭಾರತ, ರಾಣೆಬೆನ್ನೂರು