ರಾಣೇಬೆನ್ನೂರು : ನಗರದ ವಾರ್ಡ್ ನಂ14 ರಲ್ಲಿ ನಗರಸಭೆ ಪೂರೈಸುವ ಕುಡಿಯುವ ನೀರು ಕಲುಷಿತಗೊಂಡಿದ್ದು, ಈ ನೀರಿಗೆ ಚರಂಡಿ ನೀರು ಬೆರಕೆಯಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕಳೆದ ಹದಿನೈದು ದಿನಗಳಿಂದ ವಾರ್ಡ್ ನಂ14 ರ ನಿವಾಸಿಗಳಿಗೆ ಕಲುಷಿತ ನೀರು ಪೊರೈಕೆಯಾಗುತ್ತಿದ್ದು, ಜನರು ನೀರು ಕುಡಿಯಲು ಹಿಂದೇಟು ಹಾಕುತ್ತಿದ್ದಾರೆ. ನಗರಸಭೆ ನದಿ ನೀರನ್ನು ಶುದ್ಧೀಕರಣ ಮಾಡಿ ವಾರಕ್ಕೊಮ್ಮೆ ನಗರಕ್ಕೆ ಪೂರೈಕೆ ಮಾಡುತ್ತದೆ. ಆದರೆ ವಾರ್ಡ್ ನಂ14ರಲ್ಲಿ ಮಾತ್ರ ನೀರು ಕಲುಷಿತವಾಗಿ ಪೂರೈಕೆ ಮಾಡಲಾಗುತ್ತಿದೆ. ಈ ನೀರನ್ನು ಕುಡಿದು ಕೆಲವರ ಆರೋಗ್ಯ ಹದಗೆಟ್ಟಿದೆ ಎಂದು ಸ್ಥಳೀಯರ ಆರೋಪಿಸಿದ್ದಾರೆ.
ಇನ್ನೂ ಕುಡಿಯವ ನೀರಿಗೆ ಚರಂಡಿ ನೀರು, ಶೌಚಾಲಯ ನೀರು ಸೇರಿದಂತೆ ಕಸ ಕಡ್ಡಿಗಳು ಮಿಶ್ರಿತವಾಗುತ್ತಿವೆ. ಸದ್ಯ ಕುಡಿಯುವ ನೀರು ಸಂಪೂರ್ಣವಾಗಿ ಕಪ್ಪು ಬಣ್ಣದಿಂದ ಕೂಡಿದ್ದು, ಕುಡಿಯಲು ಯೋಗ್ಯವಾಗಿಲ್ಲ. ಇದರಿಂದ ಇಲ್ಲಿನ ಸಾರ್ವಜನಿಕರು ಅನೇಕ ಬಾರಿ ನಗರಸಭೆಗೆ ಮನವಿ ಮಾಡಿದರು ಅಧಿಕಾರಿಗಳು ಕೂಡ ಇದರ ಬಗ್ಗೆ ಗಮನಹರಿಸಿಲ್ಲ. ಇದನ್ನು ಸರಿ ಪಡಿಸದಿದ್ದರೆ ಮುಂದಿನ ದಿನಗಳಲ್ಲಿ ನಗರಸಭೆ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.