ETV Bharat / business

ನಿಮಗೆ ತೀರಾ ಅಗತ್ಯ ಇದೆಯಾ?, ತುರ್ತಾಗಿ ಹಣ ಬೇಕೇ ಬೇಕಾ? ಇವು ಅತ್ಯುತ್ತಮ 'ತುರ್ತು ಸಾಲದ' ಆಯ್ಕೆಗಳಾಗಿವೆ! - EMERGENCY LOAN

ಆರ್ಥಿಕ ತುರ್ತು ಸಂದರ್ಭಗಳಲ್ಲಿ ಸಹಾಯ ಮಾಡಲು ಈ ಸಾಲಗಳು ನೆರವಿಗೆ ಬರುತ್ತವೆ, ಸಾಲವನ್ನು ತೆಗೆದುಕೊಳ್ಳುವ ಮೊದಲು ಇವುಗಳನ್ನು ತಿಳಿದುಕೊಳ್ಳುವುದು ಅತ್ಯಂತ ಮುಖ್ಯವಾಗಿದೆ.

which-is-best-emergency-loan-here-is-how-to-choose-most-suitable-emergency-loan-for-your-urgent
ನಿಮಗೆ ತೀರಾ ಅಗತ್ಯ ಇದೆಯಾ?, ತುರ್ತಾಗಿ ಹಣ ಬೇಕೇ ಬೇಕೇ? ಇವು ಅತ್ಯುತ್ತಮ 'ತುರ್ತು ಸಾಲದ' ಆಯ್ಕೆಗಳಾಗಿವೆ! (ANI)
author img

By ETV Bharat Karnataka Team

Published : Nov 12, 2024, 7:17 PM IST

ಜೀವನದಲ್ಲಿ ಯಾವಾಗ ಬೇಕಾದರೂ ಹಣಕಾಸಿನ ತುರ್ತು ಪರಿಸ್ಥಿತಿ ಬರಬಹುದು. ಅದು ವೈದ್ಯಕೀಯ ತುರ್ತುಸ್ಥಿತಿ ಆಗಿರಲಿ, ಕಾರು ದುರಸ್ತಿ ಅಥವಾ ಮನೆ ನವೀಕರಣ ಹೀಗೆ ಅನೇಕ ಸಂದರ್ಭಗಳಲ್ಲಿ ಹಣದ ಅಗತ್ಯ ಬಿದ್ದೇ ಬೀಳುತ್ತದೆ. ಅಂತಹ ಸಂದರ್ಭಗಳಲ್ಲಿ, ಅನೇಕ ಜನರು ಆರ್ಥಿಕ ಸಮಸ್ಯೆಗಳಿಂದ ಹೊರಬರಲು ತುರ್ತು ಸಾಲಗಳ ಮೊರೆ ಹೋಗುತ್ತಾರೆ. ಅಷ್ಟಕ್ಕೂ ತುರ್ತು ಸಾಲಗಳಿಗಾಗಿ ಮಾರುಕಟ್ಟೆಯಲ್ಲಿ ಹಲವು ಆಯ್ಕೆಗಳಿವೆ. ನೀವು ನಿಮ್ಮ ಅನುಕೂಲತೆಗೆ ತಕ್ಕಂತೆ ಹಾಗೂ ಹೊರೆ ಆಗದಂತಹ ಆಯ್ಕೆಗಳನ್ನು ಹುಡುಕುವುದು ಸೂಕ್ತ.

ತುರ್ತು ಸಾಲಗಳು ಆರ್ಥಿಕ ತುರ್ತು ಸಂದರ್ಭಗಳಲ್ಲಿ ನಮ್ಮ ಅಗತ್ಯಗಳನ್ನು ಪೂರೈಸುತ್ತವೆ. ವಿವಿಧ ರೀತಿಯ ತುರ್ತು ಸಾಲಗಳು ಈಗ ಮಾರುಕಟ್ಟೆಯಲ್ಲಿ ಲಭ್ಯವಿವೆ - ವೈಯಕ್ತಿಕ ಸಾಲ, ಕ್ರೆಡಿಟ್ ಕಾರ್ಡ್ ಮುಂಗಡ. ಹೀಗೆ ಅನೇಕ ಆಯ್ಕೆಗಳಿವೆ. ನಿಮಗೆ ಎಷ್ಟು ಹಣ ಬೇಕು, ಅದು ಎಷ್ಟು ತುರ್ತು ಇದೆ. ಮತ್ತು ನೀವು ಯಾವ ರೀತಿಯ ಆರ್ಥಿಕ ಪರಿಸ್ಥಿತಿಯಲ್ಲಿದ್ದೀರಿ ಎಂಬುದರ ಆಧಾರದ ಮೇಲೆ ನೀವು ಸಾಲದ ಮೊರೆ ಹೋಗಬೇಕಾಗುತ್ತದೆ.

ತುರ್ತು ಸಾಲಗಳ ವಿಧಗಳು: ವೈಯಕ್ತಿಕ ಸಾಲಗಳು ಹಣಕಾಸಿನ ತುರ್ತು ಸಂದರ್ಭಗಳಲ್ಲಿ ಬಹಳ ಬೆಸ್ಟ್ ಆಯ್ಕೆ ಆಗಿದೆ. ತ್ವರಿತವಾಗಿ ಅನುಮೋದನೆ ಪಡೆಯುವುದು ಸೇರಿದಂತೆ, ಬೇಕು ಅನಿಸಿದಾಗ ಹಣ ಕೈ ಸೇರುತ್ತದೆ. ಅಂತಹ ಸಾಲಗಳು ಸ್ಥಿರವಾದ ಬಡ್ಡಿದರಗಳನ್ನು ಹೊಂದಿವೆ. ಮಾಸಿಕ EMI ಆಯ್ಕೆಗಳಿವೆ. ಇದರೊಂದಿಗೆ, ಸಾಲ ಪಾವತಿಯನ್ನು ನಿಮ್ಮ ಅಗತ್ಯಕ್ಕೆ ತಕ್ಕಂತೆ ನೀವು ಅಂದುಕೊಂಡ ಬಜೆಟ್​​ನಲ್ಲಿ ಯೋಜಿಸಬಹುದು. ಹೆಚ್ಚಿನ ವೈಯಕ್ತಿಕ ಸಾಲಗಳಿಗೆ ಭದ್ರತೆಯ ಅಗತ್ಯವಿಲ್ಲ. ಅಂದರೆ ಸಾಲವನ್ನು ಮೇಲಾಧಾರವಿಲ್ಲದೆ ನೀಡಲಾಗುತ್ತದೆ. ಆದಾಗ್ಯೂ, ಸಾಲದ ಅನುಮೋದನೆಯು ನಿಮ್ಮ ಕ್ರೆಡಿಟ್ ಸ್ಕೋರ್, ಆದಾಯ ಮತ್ತು ಉದ್ಯೋಗದ ಇತಿಹಾಸದ ಆಧಾರದ ಮೇಲೆ ಇದು ಲಭ್ಯ ಆಗುತ್ತದೆ ಎಂಬುದು ಗೊತ್ತಿರಬೇಕಾಗುತ್ತದೆ.

ಕ್ರೆಡಿಟ್ ಕಾರ್ಡ್‌ಗಳು: ಹಣಕಾಸಿನ ತುರ್ತು ಪರಿಸ್ಥಿತಿಗಳಿಗೆ ಮತ್ತೊಂದು ಆಯ್ಕೆ ಎಂದು ಅದು ಅಸ್ತಿತ್ವದಲ್ಲಿರುವ ಕ್ರೆಡಿಟ್ ಕಾರ್ಡ್. ತುರ್ತು ಸಂದರ್ಭದಲ್ಲಿ ನೀವು ಕ್ರೆಡಿಟ್​ ಕಾರ್ಡ್​ ಬಳಕೆ ಮಾಡಿ ನಿಮ್ಮ ತುರ್ತು ಅಗತ್ಯಗಳನ್ನು ಪೂರೈಸಿಕೊಳ್ಳಬಹುದು. ಕ್ರೆಡಿಟ್ ಕಾರ್ಡ್ ಮರುಪಾವತಿಗೆ ನಿಮಗೆ ಸುಮಾರು 45 ದಿನಗಳ ಕಾಲಾವಕಾಶ ಇರುತ್ತದೆ. ಇದು ಸಾಲಗಾರರಿಗೆ ಅನುಕೂಲಕರವಾಗಿರುತ್ತದೆ. ಅಷ್ಟಕ್ಕೂ ಕ್ರೆಡಿಟ್ ಕಾರ್ಡ್‌ಗಳ ಮೇಲಿನ ಬಡ್ಡಿದರಗಳು ವೈಯಕ್ತಿಕ ಸಾಲಗಳಿಗಿಂತ ಹೆಚ್ಚು ಇರುತ್ತದೆ ಎಂಬುದು ಗಮನದಲ್ಲಿರಲಿ. ನಗದು ಮುಂಗಡಗಳ ಮೇಲೆ ಶುಲ್ಕ ವಿಧಿಸುವ ಸಾಧ್ಯತೆಯೂ ಇದೆ. ನಿಮ್ಮ ಕ್ರೆಡಿಟ್ ಕಾರ್ಡ್ ಅನ್ನು ನೀವು ಹೆಚ್ಚು ಬಳಸುತ್ತೀರಿ ಎಂದರೆ, ನಿಮ್ಮ ಕ್ರೆಡಿಟ್ ಬಳಕೆಯ ಅನುಪಾತವು ಹೆಚ್ಚಾಗುತ್ತದೆ. ಇದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ತೀವ್ರ ಪರಿಣಾಮ ಬೀರಬಹುದು. ಈ ಬಗ್ಗೆ ತೀವ್ರ ಎಚ್ಚರಿಕೆ ಅಥವಾ ನಿಗಾ ಇರಬೇಕಾಗಿರುವುದು ತೀರಾ ಅವಶ್ಯಕವಾಗಿದೆ. ಇಲ್ಲದಿದ್ದರೆ ನೀವು ಭಾರಿ ಪ್ರಮಾಣದ ಶುಲ್ಕ ಪಾವತಿಸಬೇಕಾಗುತ್ತದೆ.

ತುರ್ತು ಸಾಲವನ್ನು ತೆಗೆದುಕೊಳ್ಳುವ ಮೊದಲು ಇವುಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು

ಸಾಲ ಮಂಜೂರಾತಿ ಸಮಯ: ಆರ್ಥಿಕ ತುರ್ತು ಸಂದರ್ಭಗಳಲ್ಲಿ ಸಾಲದ ಅನುಮೋದನೆಯನ್ನು ತ್ವರಿತವಾಗಿ ಪಡೆಯುವುದು ಬಹಳ ಮುಖ್ಯ. ಕೆಲವು ತುರ್ತು ಸಾಲಗಳನ್ನು ಗಂಟೆಗಳಲ್ಲಿ ಅನುಮೋದಿಸಲಾಗುತ್ತದೆ. ಮತ್ತು ವೈಯಕ್ತಿಕ ಸಾಲಗಳು ಒಂದು ಅಥವಾ ಎರಡು ದಿನಗಳನ್ನು ತೆಗೆದುಕೊಳ್ಳಬಹುದು. ಕ್ರೆಡಿಟ್ ಕಾರ್ಡ್ ಮುಂಗಡಗಳಿಗೆ ತ್ವರಿತ ಅನುಮೋದನೆ ಇರುತ್ತದೆ.

ತುರ್ತು ಸಾಲದ ಅರ್ಹತೆ: ತುರ್ತು ಸಾಲದ ಅರ್ಹತೆಯು ಸಾಲವನ್ನು ಒದಗಿಸುವ ಹಣಕಾಸು ಸಂಸ್ಥೆಗಳು ಮತ್ತು ಸಾಲದ ಪ್ರಕಾರವನ್ನು ಅವಲಂಬಿಸಿರುತ್ತದೆ. ಸಾಮಾನ್ಯವಾಗಿ ಕ್ರೆಡಿಟ್ ಸ್ಕೋರ್, ಆದಾಯ, ಉದ್ಯೋಗ ಸ್ಥಿತಿ ಇತ್ಯಾದಿಗಳು ಇದರಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತವೆ. ವೈಯಕ್ತಿಕ ಸಾಲಗಳಿಗೆ ಉತ್ತಮ ಕ್ರೆಡಿಟ್ ಸ್ಕೋರ್ ಮತ್ತು ಸ್ಥಿರ ಆದಾಯ ಸಾಕಾಗುತ್ತದೆ. ಅಲ್ಲದೇ, ಕ್ರೆಡಿಟ್ ಕಾರ್ಡ್ ಮುಂಗಡಗಳು - ನಿಮ್ಮ ಬಾಕಿಗಳನ್ನು ಅವಲಂಬಿಸಿರುತ್ತದೆ.

ಬಡ್ಡಿ ದರಗಳು: ಕ್ರೆಡಿಟ್ ಕಾರ್ಡ್‌ಗಳ ಮೇಲಿನ ಬಡ್ಡಿದರಗಳು ವೈಯಕ್ತಿಕ ಸಾಲಗಳಿಗಿಂತ ಹೆಚ್ಚಾಗಿರುತ್ತದೆ. ನೀವು ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿದ್ದರೆ, ನೀವು ಉತ್ತಮ ಬಡ್ಡಿದರಗಳಲ್ಲಿ ಸಾಲಗಳನ್ನು ಪಡೆದುಕೊಳ್ಳಬಹುದು.

ಪಾವತಿ ನಿಯಮಗಳು: ಪಾವತಿ ನಿಯಮಗಳು ತಿಂಗಳಿಗೆ ಪಾವತಿಸಬೇಕಾದ EMI ಮೊತ್ತ ಮತ್ತು ಸಾಲದ ಅವಧಿಯನ್ನು ಸೂಚಿಸುತ್ತವೆ. ವೈಯಕ್ತಿಕ ಸಾಲಗಳ ಸಂದರ್ಭದಲ್ಲಿ, ಒಂದು ವರ್ಷದಿಂದ 5 ವರ್ಷಗಳವರೆಗೆ ಸ್ಥಿರವಾದ ನಿಯಮಗಳಿವೆ. ಮತ್ತು ಕ್ರೆಡಿಟ್ ಕಾರ್ಡ್‌ಗಳು ಕಡಿಮೆ ಪ್ರಮಾಣದ EMI ಹೊಂದಿರುತ್ತವೆ. ಆದರೆ, ಬಡ್ಡಿದರಗಳು ತುಂಬಾ ಹೆಚ್ಚು. ಕಡಿಮೆ ಒಟ್ಟು EMIಗಳೊಂದಿಗೆ ಸಾಲ ಮರುಪಾವತಿ ಅವಧಿಯು ಹೆಚ್ಚಾಗುತ್ತದೆ.

ತುರ್ತು ಸಾಲಗಳ ಸಾಧಕ- ಬಾಧಕ

  • ತುರ್ತು ಸಾಲಗಳು ನಿಮಗೆ ಅಗತ್ಯವಿರುವ ಹಣವನ್ನು ತ್ವರಿತವಾಗಿ ಪಡೆಯಲು ಸಹಾಯ ಮಾಡುತ್ತದೆ.
  • ಈ ಸಾಲದ ಹಣವನ್ನು ನಾವು ವೈದ್ಯಕೀಯ ಬಿಲ್‌ಗಳಿಂದ ಹಿಡಿದು ಮನೆ ರಿಪೇರಿವರೆಗೂ ಬಳಸಬಹುದು.
  • ಅಂತಹ ಸಾಲಗಳಲ್ಲಿ, ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ನೀವು ಪಾವತಿ ನಿಯಮಗಳು ಮತ್ತು EMI ಆಯ್ಕೆಗಳನ್ನು ಆಯ್ಕೆ ಮಾಡಬಹುದಾಗಿದೆ.

ಅನಾನುಕೂಲಗಳು:

  • ತುರ್ತು ಸಾಲಗಳಿಗೆ ಸಾಮಾನ್ಯವಾಗಿ ಹೆಚ್ಚಿನ ಬಡ್ಡಿದರಗಳನ್ನು ವಿಧಿಸಲಾಗುತ್ತದೆ.
  • ಹೆಚ್ಚಿನ ತುರ್ತು ಸಾಲಗಳಿಗೆ ಮೂಲ ಶುಲ್ಕ ಹಾಕಲಾಗುತ್ತದೆ ಹಾಗೂ ಪಾವತಿ ವಿಳಂಭವಾದರೆ ಹೆಚ್ಚಿನ ದಂಡಗಳನ್ನು ವಿಧಿಸಲಾಗುತ್ತದೆ.
  • ತುರ್ತು ಸಾಲಗಳು ನಿಮ್ಮ ಸಾಲವನ್ನು ಹೆಚ್ಚಿಸಬಹುದು. ಇದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಇದು ಹಣಕಾಸಿನ ತೊಂದರೆಗಳಿಗೆ ಕಾರಣವಾಗುವ ಸಾಧ್ಯತೆಯಿದೆ.

ಇದನ್ನು ಓದಿ:ಮಾರಾಟದ ಭರಾಟೆ: ಸೆನ್ಸೆಕ್ಸ್​ 820 ಅಂಕ ಕುಸಿತ, 24,000 ಪಾಯಿಂಟ್ಸ್​​ಗಳಿಂದ ಕೆಳಗಿಳಿದ ನಿಫ್ಟಿ

12 ಲಕ್ಷ ಕೋಟಿಗೆ ತಲುಪಿದ ನಿವ್ವಳ ನೇರ ತೆರಿಗೆ ಸಂಗ್ರಹ: ಶೇ 15.4 ರಷ್ಟು ಏರಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.