ETV Bharat / bharat

ಅಹಮದಾಬಾದ್‌ನ ಖ್ಯಾತಿ ಆಸ್ಪತ್ರೆಯಲ್ಲಿ ಇಬ್ಬರು ರೋಗಿಗಳು ಸಾವು ಆರೋಪ ; ಆಸ್ಪತ್ರೆ ಧ್ವಂಸಗೊಳಿಸಿದ ಕುಟುಂಬಸ್ಥರು - KHYATI HOSPITAL

ಅಹಮದಾಬಾದ್​ನ ಖ್ಯಾತಿ ಆಸ್ಪತ್ರೆಯಲ್ಲಿ ಆಂಜಿಯೋಗ್ರಫಿ ಚಿಕಿತ್ಸೆಯಿಂದಾಗಿ ಇಬ್ಬರು ಸಾವನ್ನಪ್ಪಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ, ಮೃತರ ಕುಟುಂಬಸ್ಥರು ಇಂದು ಆಸ್ಪತ್ರೆಯನ್ನು ಧ್ವಂಸಗೊಳಿಸಿದ್ದಾರೆ.

khyati-hospital
ಖ್ಯಾತಿ ಆಸ್ಪತ್ರೆ (ETV Bharat)
author img

By ETV Bharat Karnataka Team

Published : Nov 12, 2024, 7:22 PM IST

ಅಹಮದಾಬಾದ್ (ಗುಜರಾತ್) : ಇಲ್ಲಿನ ಎಸ್‌ಜಿ ಹೆದ್ದಾರಿಯಲ್ಲಿರುವ ಖ್ಯಾತಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇದೀಗ ವಿವಾದಕ್ಕೀಡಾಗಿದೆ. ಆಸ್ಪತ್ರೆಯಲ್ಲಿ ಸುಮಾರು 19 ಜನರಿಗೆ ಕುಟುಂಬಸ್ಥರ ಅನುಮತಿಯಿಲ್ಲದೆ ಆಂಜಿಯೋಗ್ರಫಿ ಮಾಡಿದ್ದರಿಂದ ಇಬ್ಬರು ರೋಗಿಗಳು ಸಾವನ್ನಪ್ಪಿರುವ ಆರೋಪ ಕೇಳಿಬಂದಿದೆ.

ನ.10 ರಂದು ಉಚಿತ ಶಿಬಿರ ಆಯೋಜಿಸಲಾಗಿತ್ತು : ಇಡೀ ಘಟನೆ ಕುರಿತು ಮಾತನಾಡಿದ ಮೃತರ ಕುಟುಂಬಸ್ಥರು, ಕಡಿ ತಾಲೂಕಿನ ಬೋರಿಸ್ನಾ ಗ್ರಾಮದಲ್ಲಿ ಖ್ಯಾತಿ ಆಸ್ಪತ್ರೆ ವತಿಯಿಂದ ಉಚಿತ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು. ಮಾಹಿತಿ ಪ್ರಕಾರ, ಈ ಉಚಿತ ಪರೀಕ್ಷಾ ಶಿಬಿರದಲ್ಲಿ 80 ರಿಂದ 90 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದಿದ್ದಾರೆ.

ಖ್ಯಾತಿ ಆಸ್ಪತ್ರೆಗೆ 19 ಜನರನ್ನು ಕರೆತರಲಾಯಿತು : ಬೋರಿಸ್ನಾ ಗ್ರಾಮದ 19 ಜನರನ್ನು ಚಿಕಿತ್ಸೆಗಾಗಿ ಆಂಬ್ಯುಲೆನ್ಸ್ ಮೂಲಕ ಖ್ಯಾತಿ ಆಸ್ಪತ್ರೆಗೆ ಕರೆತರಲಾಯಿತು. 19 ರೋಗಿಗಳಲ್ಲಿ 12 ಜನರಿಗೆ ಆಂಜಿಯೋಗ್ರಫಿ ಮಾಡಲಾಗಿದೆ. ಇದರಲ್ಲಿ 12 ರೋಗಿಗಳಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಕುಟುಂಬಸ್ಥರ ಪ್ರಕಾರ, ಅವರಿಗೆ ಮೊದಲು ಯಾವುದೇ ರೀತಿಯ ಕಾಯಿಲೆ ಇರಲಿಲ್ಲ. ತಪಾಸಣೆಗೆ ಮಾತ್ರ ಅವರನ್ನು ಕರೆಸಲಾಗಿದ್ದು, ನಂತರ ನಮ್ಮ ಅನುಮತಿಯಿಲ್ಲದೆ ಆಂಜಿಯೋಗ್ರಫಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

PMJAY ಯೋಜನೆಯಿಂದ ರೂ. 1 ಲಕ್ಷದ 28 ಸಾವಿರ ಕಡಿತ: ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ, ಸೇನ್ಮಾ ನಾಗರಭಾಯ್ ಮತ್ತು ಮಹೇಶ್ ಬಾರೋಟ್ ಸಾವನ್ನಪ್ಪಿದ್ದಾರೆ. ಈ ಪರೀಕ್ಷೆಗಾಗಿ ಪಿಎಂಜೆಎವೈ ಯೋಜನೆಯಲ್ಲಿ 1 ಲಕ್ಷ 28 ಸಾವಿರ ರೂ.ಗಳನ್ನು ಕಡಿತಗೊಳಿಸಲಾಗಿದೆ. ಸರ್ಕಾರದ ಯೋಜನೆಯಿಂದ ಆಸ್ಪತ್ರೆಯಲ್ಲಿ ಅನ್ಯಾಯವಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಮೃತನ ಸಂಬಂಧಿಕರಿಂದ ಆಸ್ಪತ್ರೆ ಧ್ವಂಸ : ಘಟನೆಯ ಬಗ್ಗೆ ಮಾಹಿತಿ ಪಡೆದು ಗ್ರಾಮಸ್ಥರು, ಸರಪಂಚ್ ಸೇರಿದಂತೆ ಇತರೆ ಜನರು ಆಸ್ಪತ್ರೆಗೆ ಬಂದಾಗ ಅವರನ್ನು ಭೇಟಿ ಮಾಡಲು ಆಸ್ಪತ್ರೆಯ ಸಿಬ್ಬಂದಿ, ವೈದ್ಯರು ಯಾರೂ ಸಿದ್ಧರಿರಲಿಲ್ಲ. ಇದರಿಂದ ಕುಪಿತಗೊಂಡ ಕುಟುಂಬಸ್ಥರು ಆಸ್ಪತ್ರೆಯನ್ನು ಧ್ವಂಸಗೊಳಿಸಿದ್ದಾರೆ. ರಾಜ್ಯ ಆರೋಗ್ಯ ಸಚಿವ ಹೃಷಿಕೇಶ್ ಪಟೇಲ್ ಅವರು ಟ್ವೀಟ್ ಮಾಡುವ ಮೂಲಕ ಪ್ರಕರಣದ ತನಿಖೆಗೆ ಆದೇಶಿಸಿದ್ದಾರೆ.

ಆರೋಗ್ಯ ಇಲಾಖೆಯಲ್ಲಿ ದೂರು ಸ್ವೀಕರಿಸಲಾಗುವುದು : ಅಹಮದಾಬಾದ್ ಮಹಾನಗರ ಪಾಲಿಕೆಯ ಆರೋಗ್ಯ ಅಧಿಕಾರಿ ಭವಿನ್ ಸೋಲಂಕಿ ಘಟನೆಯ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದರು. ಇಡೀ ಘಟನೆಯ ಬಗ್ಗೆ ಎಎಂಸಿಯಿಂದ ತನಿಖೆ ನಡೆಸಲಾಗುವುದು, ಆರೋಗ್ಯ ಇಲಾಖೆಯಲ್ಲಿ ಮೃತರ ಕುಟುಂಬಸ್ಥರಿಂದ ದೂರನ್ನು ಸ್ವೀಕರಿಸಿ, ಸೂಕ್ತ ದಾಖಲೆಗಳನ್ನು ಪಡೆದು, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ಕುಟುಂಬಸ್ಥರ ಅನುಮತಿಯಿಲ್ಲದೆ ಆಪರೇಷನ್ ಮಾಡಬಾರದು : ಯಾವುದೇ ವ್ಯಕ್ತಿಯ ಸಂಬಂಧಿಕರನ್ನು ಸಂಪರ್ಕಿಸದೆ ಯಾವುದೇ ಆಪರೇಷನ್ ಮಾಡಬಾರದು ಎಂಬುದು ನಿಯಮ ಎಂದು ಆರೋಗ್ಯ ಅಧಿಕಾರಿ ಭವಿನ್ ಸೋಲಂಕಿ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ : ಮೂರನೇ ದಿನವೂ ಮುಂದುವರಿದ ರೋಗಿಗಳ ಸಾವಿನ ಸರಣಿ; ನಾಂದೇಡ್​ ಆಸ್ಪತ್ರೆಯಲ್ಲಿ ಅಸುನೀಗಿದವರ ಸಂಖ್ಯೆ 35ಕ್ಕೆ ಏರಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.