ಹಾವೇರಿ: ಹಾವೇರಿ ಲೋಕಸಭಾ ಕ್ಷೇತ್ರ ಮತ್ತೊಮ್ಮೆ ಬಿಜೆಪಿ ಮಡಿಲಿಗೆ ಸೇರಿಕೊಂಡಿದ್ದು, ಹ್ಯಾಟ್ರಿಕ್ ಕನಸು ಕಾಣುತ್ತಿದ್ದ ಶಿವಕುಮಾರ ಉದಾಸಿ, ಭಾರಿ ಮತಗಳ ಅಂತರದಿಂದ ತಮ್ಮ ಕನಸನ್ನ ನನಸು ಮಾಡಿಕೊಂಡಿದ್ದಾರೆ.
ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಮೈತ್ರಿ ಅಭ್ಯರ್ಥಿ ಹಾಗೂ ರಾಜಕೀಯ ಸಂತರೆಂದೆ ಗುರುತಿಸಿಕೊಂಡಿದ್ದ ಡಿ.ಆರ್.ಪಾಟೀಲ್ ಬಹಳಷ್ಟು ಪ್ರಯತ್ನಗಳ ನಡುವೆಯೂ ಸೋಲಿನ ದಾರಿ ಹಿಡಿದಿದಿದ್ದು, ಡಿ.ಆರ್.ಪಾಟೀಲ್ ಪುತ್ರ ಹಾಗೂ ಚುನಾವಣಾ ಮುಖಂಡತ್ವ ವಹಿಸಿದ್ದ ಸಚಿನ್ ಪಾಟೀಲ್ ಅವರು ಸೋಲನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹೊರ ಹಾಕಿದ್ದಾರೆ.
ನನ್ನ ತಂದೆ ವಿರುದ್ಧ ಗೆಲುವು ಸಾಧಿಸಿದ ಶಿವಕುಮಾರ್ ಉದಾಸಿ ಅವರನ್ನು ಅಭಿನಂದಿಸುತ್ತೇನೆ. ಇದು ಸಂಪೂರ್ಣವಾಗಿ ನನ್ನ ವೈಫಲ್ಯ. ನಾನು ನನ್ನ ಭುಜದ ಮೇಲೆ ಸಂಪೂರ್ಣ ಆಪಾದನೆಯನ್ನು ತೆಗೆದುಕೊಳ್ಳುತ್ತೇನೆ. ನಮ್ಮ ಸಂಘಟನೆಯಲ್ಲಿ ಏನೋ ಕೊರತೆ ಇದೆ. ಮೋದಿ ಅಲೆಗೆ ನಮನ. ಅಭಿಯಾನದ ಸಂದರ್ಭದಲ್ಲಿ ವಿಶೇಷವಾಗಿ ಬಿಜೆಪಿ ನಾಯಕರುಗಳ ಹಾಗೂ ಗದುಗಿನ ಜನತೆಯ ಭಾವನೆಗಳನ್ನು ನಾನು ನೋಯಿಸಿದರೆ ಕ್ಷಮೆ ಇರಲಿ ಎಂದು ಮನವಿ ಮಾಡಿದ್ದಾರೆ.