ETV Bharat / state

ಫೋಟೋ ಇಟ್ಟು ಶ್ವಾನಕ್ಕೆ ಶಾಸ್ತ್ರೋಕ್ತವಾಗಿ ತಿಥಿ ಮಾಡಿದ ಹಾವೇರಿ ದಂಪತಿ

ಸಾವನ್ನಪ್ಪಿದ ಮನುಷ್ಯರ ತಿಥಿ ಮಾಡುವುದನ್ನ ನಾವೆಲ್ಲರೂ ನೋಡಿದ್ದೇವೆ. ಆದರೆ ಹಾವೇರಿ ಜಿಲ್ಲೆಯ ಸವಣೂರಿನ ಮನೆಯೊಂದರಲ್ಲಿ ನಾಯಿಯ ತಿಥಿ ಮಾಡುವ ಮೂಲಕ ಪ್ರಾಣಿ ಪ್ರೇಮ ಮೆರೆದಿದ್ದಾರೆ.

Dog death anniversary
ನಾಯಿಗೆ ತಿಥಿ
author img

By

Published : Jul 12, 2021, 11:20 PM IST

ಹಾವೇರಿ: ಜಿಲ್ಲೆಯ ಸವಣೂರಿನ ಪ್ರಶಾಂತ್​ ಮತ್ತು ಪಾರ್ವತಿ ದಂಪತಿ ಮದುವೆಯಾಗಿ 10 ವರ್ಷವಾದರೂ ಮಕ್ಕಳಾಗಿರಲಿಲ್ಲ. ಕಳೆದ 3 ವರ್ಷಗಳ ಹಿಂದೆ ಕಾರು ಚಾಲಕನೊಬ್ಬ ಈ ದಂಪತಿಗೆ ಶ್ವಾನವೊಂದನ್ನು ನೀಡಿದ್ದನು. ಅದಕ್ಕೆ ಈ ದಂಪತಿ ಟೈಸನ್ ಎಂದು ನಾಮಕರಣ ಮಾಡಿ ಸ್ವಂತ ಮಗನಂತೆ ಸಾಕಿದ್ದರು. ಆದರೆ ಅನಾರೋಗ್ಯದಿಂದ ಟೈಸನ್ ಶನಿವಾರ ನಿಧನವಾಗಿದೆ. ಈ ಹಿನ್ನೆಲೆಯಲ್ಲಿ ಮನುಷ್ಯರಿಗೆ ಮಾಡುವಂತೆ ನಾಯಿಯ ತಿಥಿ ಮಾಡುವ ಮೂಲಕ ಈ ದಂಪತಿ ಪ್ರಾಣಿ ಪ್ರೇಮ ಮೆರೆದಿದ್ದಾರೆ.

ಕಳೆದ ಕೆಲವು ದಿನಗಳಿಂದ ಟೈಸನ್ ಅನಾರೋಗ್ಯಕ್ಕೆ ತುತ್ತಾಗಿತ್ತು. ಹಲವು ಬಾರಿ ಚಿಕಿತ್ಸೆ ನೀಡಿದ್ದರೂ ಫಲಕಾರಿಯಾಗದೆ ಶನಿವಾರ ಸಾವನ್ನಪ್ಪಿತ್ತು. ಸ್ವಂತ ಮಗನನ್ನು ಕಳೆದುಕೊಂಡಂತೆ ಪಾರ್ವತಿ ಮತ್ತು ಪ್ರಶಾಂತ್​ ದುಃಖ ತೃಪ್ತರಾಗಿದ್ದು, ಮನುಷ್ಯರಂತೆ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

ನಾಯಿಗೆ ತಿಥಿ: ಫೋಟೋ ಇಟ್ಟು ಶಾಸ್ತ್ರೋಕ್ತ ಪೂಜೆ..

ಮೂರು ವರ್ಷಗಳ ಹಿಂದೆ ಮನೆಗೆ ಪ್ರವೇಶಿಸಿದ ಟೈಸನ್ ಮನೆಯ ಮಗನಂತೆ ಇತ್ತು. ಮನೆಯ ಮಕ್ಕಳು ತಂದೆ ತಾಯಿಯನ್ನ ಪ್ರೀತಿಸುವಂತೆ ತಮ್ಮ ಜೊತೆ ಒಡನಾಟ ಇಟ್ಟುಕೊಂಡಿತ್ತು. ಇಂತಹ ಟೈಸನ್ ಸಾವನಪ್ಪಿದ್ದು, ನಮಗೆ ಇನ್ನಿಲ್ಲದ ನೋವು ತಂದಿದೆ ಎಂದು ಪ್ರಶಾಂತ್​ ಪತ್ನಿ ಪಾರ್ವತಿ ದುಃಖ ವ್ಯಕ್ತಪಡಿಸಿದ್ದಾರೆ.

ನಾವು ಹೊರಗಡೆ ಹೋದಾಗ ಟೈಸನ್ ಮನೆಯಲ್ಲಿ ನಮ್ಮ ತಂದೆ-ತಾಯಿ ಜತೆ ಸಹ ಅಷ್ಟೆ ಪ್ರೀತಿಯಿಂದ ಇರುತ್ತಿತ್ತು. ಇಂತಹ ಶ್ವಾನವನ್ನು ಕಳೆದುಕೊಂಡಿದ್ದು, ನಮ್ಮ ಸ್ವಂತ ಮಗನನ್ನು ಕಳೆದುಕೊಂಡಷ್ಟು ದುಃಖವಾಗಿದೆ ಎಂದು ಮಾಲೀಕ ಪ್ರಶಾಂತ್​ ಭಾವುಕರಾದರು.

ಫೋಟೋ ಇಟ್ಟು ಶಾಸ್ತ್ರೋಕ್ತ ಪೂಜೆ:

ಶ್ವಾನಕ್ಕೆ ಮನುಷ್ಯರಿಗೆ ಮಾಡುವಂತೆ ತಿಥಿ ಮಾಡಿದರು. ಸ್ವಾಮೀಜಿಗಳನ್ನು ಕರೆಯಿಸಿ ಟೈಸನ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಜತೆಗೆ ನಾಯಿಗೆ ಇಷ್ಟವಾದ ತಿನಿಸುಗಳು ಸೇರಿದಂತೆ ವಿವಿಧ ಭಕ್ಷ್ಯಗಳನ್ನು ನೈವೇದ್ಯಕ್ಕೆ ಇಡಲಾಗಿತ್ತು. ಬಳಿಕ ಸಾಂಬ್ರಾಣಿ ಹಾಕಿ ಪ್ರಾರ್ಥನೆ ಸಲ್ಲಿಸಿದರು. ಈ ವಿಶಿಷ್ಟ ತಿಥಿಗೆ ಅಕ್ಕಪಕ್ಕದ ಜನರು ಹಾಗೂ ಪ್ರಶಾಂತ ಸಂಬಂಧಿಕರು ಭಾಗವಹಿಸಿ ಪೂಜೆ ಸಲ್ಲಿಸಿದರು.

ಇದನ್ನೂ ಓದಿ: ಗೆಳೆಯನಂತೆ ಕಾಲು ಹಿಡಿದು ನಾಯಿಯನ್ನು ರಸ್ತೆ ದಾಟಿಸಿದ ಪುಟ್ಟ ಪೋರ: ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.