ETV Bharat / state

'ಡಿಸಿಎಂ ಡಿಕೆ ಶಿವಕುಮಾರ್​ ಜೈಲಿಗೆ ಹೋಗುವುದರಲ್ಲಿ ಅನುಮಾನವೇ ಇಲ್ಲ'; ಕೆ ಎಸ್​ ಈಶ್ವರಪ್ಪ - DK Shivakumar case

ಸದ್ಯದಲ್ಲೇ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಜೈಲಿಗೆ ಹೋಗಲಿದ್ದಾರೆ. ಆದರೆ, ಲೋಕಸಭೆ ಚುನಾವಣೆ ಮುಂಚೆನಾ ಅಥವಾ ನಂತರವಾ ಎನ್ನುವುದು ತೀರ್ಮಾನವಾಗಬೇಕಿದೆ ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ.

ಮಾಜಿ ಸಚಿವ ಕೆಎಸ್ ಈಶ್ವರಪ್ಪ
ಮಾಜಿ ಸಚಿವ ಕೆಎಸ್ ಈಶ್ವರಪ್ಪ
author img

By ETV Bharat Karnataka Team

Published : Nov 30, 2023, 7:50 PM IST

ಮಾಜಿ ಸಚಿವ ಕೆಎಸ್ ಈಶ್ವರಪ್ಪ

ಹಾವೇರಿ: ಜಾತಿ ಜನಗಣತಿ ಬಿಡುಗಡೆ ಮಾಡಿದ ದಿನವೇ ರಾಜ್ಯದಲ್ಲಿ ಕಾಂಗ್ರೆಸ್ ಇರುವುದಿಲ್ಲ ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ. ಹಾವೇರಿಯಲ್ಲಿಂದು ಮಾತನಾಡಿದ ಅವರು, ಜಾತಿ ಜನಗಣತಿ ಮಾಡುವುದು ಕೇಂದ್ರ ಸರ್ಕಾರದ ಕರ್ತವ್ಯ. ಈವರೆಗೂ ಯಾವ ಪ್ರಧಾನಿಗಳು ಜಾತಿಗಣತಿ ಮಾಡಿಲ್ಲ. ಆದರೆ, ಪ್ರಧಾನಿ ನರೇಂದ್ರ ಮೋದಿ ಗಣತಿ ಮಾಡುವುದಾಗಿ ತಿಳಿಸಿದ್ದಾರೆ. ಆದರೆ, ಅದಕ್ಕೂ ಮೊದಲೇ ಬಿಹಾರ ಮತ್ತು ರಾಜ್ಯದಲ್ಲಿ ಜಾತಿಗಣತಿ ಶುರುವಾಗಿದೆ. ಸಿಎಂ ಸಿದ್ದರಾಮಯ್ಯ 163 ಕೋಟಿ ರೂ. ವೆಚ್ಚ ಮಾಡಿ ಕಾಂತರಾಜ್ ನೇತೃತ್ವದ ಸಮಿತಿಯಿಂದ 7 ವರ್ಷಗಳ ಹಿಂದೆ ವರದಿ ಪಡೆದಿದ್ದರು. ಆಗ ಏಕೆ ಸಿದ್ದರಾಮಯ್ಯ ಜಾತಿ ಗಣತಿ ಬಿಡುಗಡೆ ಮಾಡಲಿಲ್ಲ ಎಂದು ಈಶ್ವರಪ್ಪ ಪ್ರಶ್ನಿಸಿದರು.

ಸಮ್ಮಿಶ್ರ ಸರ್ಕಾರದ ಅವಧಿಯಲ್ಲಾದರೂ ಈ ವರದಿ ಬಿಡುಗಡೆ ಮಾಡಬೇಕಿತ್ತು. ಈಗ ಅಧಿಕಾರಕ್ಕೆ ಬಂದು ಆರು ತಿಂಗಳಾಯಿತು, ಜಾತಿಗಣತಿ ಬಿಡುಗಡೆ ಏಕೆ ಮಾಡಲಿಲ್ಲ? ಹಿಂದುಳಿದ ಮತ್ತು ದಲಿತ ಮಠಗಳ ಒಕ್ಕೂಟದ ಮಠಾಧೀಶರು ಸಿದ್ದರಾಮಯ್ಯರನ್ನು ಕೇಳಿದಾಗ ನವೆಂಬರ್​ನಲ್ಲಿ ಬಿಡುಗಡೆ ಮಾಡುವುದಾಗಿ ತಿಳಿಸಿದ್ದರು. ಈಗಲೂ ಬಿಡುಗಡೆ ಮಾಡಲಿಲ್ಲ. ಈಗ ಲಿಂಗಾಯತರು, ಒಕ್ಕಲಿಗರು ಜಾತಿ ಗಣತಿ ವೈಜ್ಞಾನಿಕವಾಗಿಲ್ಲ ಎನ್ನುತ್ತಿದ್ದಾರೆ. ಕಾಂತರಾಜ್ ಸಮಿತಿಯ ಕಾರ್ಯದರ್ಶಿ ಸಹಿ ಮಾಡಿಲ್ಲ, ಓರಿಜನಲ್ ಪ್ರತಿ ಕೂಡ ಕಳ್ಳತನವಾಗಿದೆ ಎನ್ನುತ್ತಿದ್ದಾರೆ. ಈಗ ಜಯಪ್ರಕಾಶ್ ಹೆಗಡೆಯವರಿಗೆ ಹೆಚ್ಚಿನ ಕಾಲಾವಕಾಶ ಕೇಳುವಂತೆಯೂ ಹೇಳುತ್ತಿದ್ದಾರೆ ಎಂದು ಈಶ್ವರಪ್ಪ ಆರೋಪಿಸಿದರು.

ಸರ್ಕಾರ ಕೇಳಿದ ದಿನವೇ ವರದಿ ನೀಡುವುದಾಗಿ ಜಯಪ್ರಕಾಶ್ ಹೆಗಡೆ ಕೂಡ ತಿಳಿಸಿದ್ದರು. ಇದೀಗ ಕಾರಣಗಳನ್ನು ಹುಟ್ಟುಹಾಕಲಾಗುತ್ತಿದೆ. ಈ ಜಾತಿ ಗಣತಿ ಗೊಂದಲವನ್ನು ಶುರು ಮಾಡಿದ್ದೇ ಕಾಂಗ್ರೆಸ್. ಇದರಲ್ಲಿ ಬಿಜೆಪಿಯ ಪಾತ್ರವಿಲ್ಲ. ವರದಿ ಬಿಡುಗಡೆ ಮಾಡಿ ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ಚಾಂಪಿಯನ್ ಎನ್ನಿಸಿಕೊಳ್ಳಲು ಹೊರಟಿದ್ದರು. ಆದರೆ, ಈ ಜಾತಿ ಗಣತಿಯನ್ನು ಆರಂಭದಲ್ಲಿಯೇ ಬಿಡುಗಡೆ ಮಾಡಿದ್ದರೇ ಈ ಸಮಸ್ಯೆಗಳು ಆಗುತ್ತಿರಲಿಲ್ಲ ಎಂದು ಈಶ್ವರಪ್ಪ ಹೇಳಿದರು.

ರಾಜ್ಯ ಸರ್ಕಾರವೇ ಸಿಬಿಐ ತನಿಖೆಗೆ ಒಳಪಡಿಸಿ ಸರ್ಕಾರವೇ ವಾಪಸ್ ಪಡೆಯುವ ಅಧಿಕಾರ ಇಲ್ಲ. ಕೇಸ್​ ಮುಂದುವರೆಸಲು ತಮ್ಮ ಅಭ್ಯಂತರವಿಲ್ಲ ಎಂದು ನ್ಯಾಯಾಲಯವೇ ಹೇಳಿದೆ. ಡಿಕೆ ಶಿವಕುಮಾರ್ ವಿಚಾರಣೆ ಈಗಾಗಲೇ ಶೇ. 90ರಷ್ಟು ಮುಗಿದಿದೆ. ಇನ್ನೇನು ಚಾರ್ಜ್​ಸೀಟ್ ಹಾಕುವುದು ಮಾತ್ರ ಬಾಕಿ ಇದೆ. ಅವರ ಅಕ್ರಮ ದಾಖಲೆಗಳ ಬಂಡಲ್ ಇರುವುದನ್ನು ಕಂಡಿದ್ದಾರೆ. ಅವರು ತಪ್ಪಿತಸ್ಥರು ಅನ್ನೋದು ಸದ್ಯದಲ್ಲೇ ತೀರ್ಮಾನವಾಗಲಿದ್ದು, ಡಿಕೆ ಶಿವಕುಮಾರ್​ ಜೈಲಿಗೆ ಹೋಗಲಿದ್ದಾರೆ. ಆದರೆ, ಲೋಕಸಭೆ ಚುನಾವಣೆ ಮುಂಚೆನಾ ಅಥವಾ ನಂತರವಾ ಎನ್ನುವುದು ತೀರ್ಮಾನವಾಗಬೇಕಿದೆ ಎಂದರು.

ಬೆಳಗಾವಿಯಲ್ಲಿ ಇದೇ 4 ರಂದು ಆರಂಭವಾಗುವ ಚಳಿಗಾಲದ ಅಧಿವೇಶದಲ್ಲಿ ಸರ್ಕಾರವನ್ನು ಕಟ್ಟಿಹಾಕಲು ಬಿಜೆಪಿ ಸಿದ್ಧತೆ ನಡೆಸಿದೆ. ಸರ್ಕಾರಕ್ಕೆ ಗ್ಯಾರಂಟಿಗಳಿಗೆ ಹಣ ತಂದು ಹಾಕುವುದಕ್ಕೆ ಸಾಧ್ಯವಾಗುತ್ತಿಲ್ಲ. ಅಭಿವೃದ್ಧಿ ಶೂನ್ಯವಾಗಿದೆ. ಕಳೆದ ಸರ್ಕಾರ ಮಾಡಿದ ಅಭಿವೃದ್ಧಿ ಕಾರ್ಯಗಳಿಗೆ ಹಣ ನೀಡಲಾಗುತ್ತಿಲ್ಲ. ಪ್ರತಿ ಶಾಸಕರಿಗೆ ಎರಡು ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಬೇಕಿತ್ತು. ಅವರಿಗೆ ಒಂದು ರೂಪಾಯಿ ನೀಡಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.

ಮಾಧ್ಯಮಗೋಷ್ಟಿ ಬಳಿಕ ಬ್ಯಾಡಗಿ ತಾಲೂಕಿನ ಕಾಗಿನೆಲೆಯಲ್ಲಿ ನಡೆದ ಕನಕದಾಸರ 536ನೇ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಈಶ್ವರಪ್ಪ, 536 ವರ್ಷಗಳ ಹಿಂದೆಯೇ ಕನಕದಾಸರು ಹೇಳಿದ ಮಾತನ್ನು ಸರಿಪಡಿಸಿದ್ದರೆ ದೇಶದಲ್ಲಿ ಇಷ್ಟೆಲ್ಲ ಜಾತಿಗಳು ಇರುತ್ತಿರಲಿಲ್ಲ ಎಂದರು. ಕಾರ್ಯಕ್ರಮದಲ್ಲಿ ಕಾಗಿನೆಲೆ ನಿರಂಜನಾನಂದಪುರಿ ಶ್ರೀಗಳು ಹಾಜರಿದ್ದರು.

ಇದನ್ನೂ ಓದಿ: ದಾಸಶ್ರೇಷ್ಠ ಕನಕದಾಸ ಜಯಂತಿ; ಇತಿಹಾಸ ಮತ್ತು ಮಹತ್ವ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.