ETV Bharat / state

ಸಿಎಂ ಕಾರ್ಯಕ್ರಮಕ್ಕೆ ಸ್ವಪಕ್ಷದ ಶಾಸಕ ಓಲೇಕಾರರಿಂದಲೇ ಕಪ್ಪು ಬಾವುಟ ಪ್ರದರ್ಶನಕ್ಕೆ ನಿರ್ಧಾರ - ನೆಹರು ಓಲೇಕಾರ್ ಅನುದಾನ

ಸುಮಾರು ವರ್ಷಗಳಿಂದ ಇದ್ದ ಕೋರ್ಟ್ ಸಂಕೀರ್ಣದ ಜಗಳವನ್ನು ದಿ. ಸಿ.ಎಂ. ಉದಾಸಿ ಸಚಿವರಾಗಿದ್ದಾಗ ಸರಿಪಡಿಸಿ ಸಂಕೀರ್ಣ ನಿರ್ಮಿಸಲಾಗಿತ್ತು‌. ವಕೀಲರ ಸಂಘದ ಕಟ್ಟಡ ನಿರ್ಮಾಣಕ್ಕೆ ಏಳೂವರೆ ಕೋಟಿ ರೂಪಾಯಿ ಹಣ ಕೊಡಿಸಿದ್ದೆ ಎಂದು ಶಾಸಕ ಓಲೇಕಾರ್​ ತಿಳಿಸಿದರು.

Neharu Olekar Pressmeet
ಬಿಜೆಪಿ ಶಾಸಕ ನೆಹರು ಓಲೇಕಾರ್​
author img

By

Published : Aug 20, 2022, 7:49 PM IST

ಹಾವೇರಿ : ನಗರದಲ್ಲಿ ನಾಳೆ ಮಧ್ಯಾಹ್ನ 3.30ಕ್ಕೆ ನಡೆಯಲಿರುವ ಕಾರ್ಯಕ್ರಮಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಆಗಮಿಸಲಿದ್ದು, ಆ ವೇಳೆ ಕಪ್ಪು ಬಾವುಟ ಪ್ರದರ್ಶಿಸಲು ಬಿಜೆಪಿ ಶಾಸಕರೇ ಆಗಿರುವ ನೆಹರು ಓಲೇಕಾರ್​ ಮತ್ತು ಅವರ ಬೆಂಬಲಿಗರು ನಿರ್ಧರಿಸಿದ್ದಾರೆ. ವಕೀಲರ ಸಂಘದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭಕ್ಕೆ ಆಹ್ವಾನ ನೀಡದ್ದಕ್ಕೆ ಶಾಸಕ ನೆಹರು ಓಲೇಕಾರ್​ ಮತ್ತು ಬೆಂಬಲಿಗರು ಗರಂ ಆಗಿದ್ದಾರೆ.

ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನಡೆಯಲಿರುವ ವಕೀಲರ ಸಂಘದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭಕ್ಕೆ ನಾಳೆ ಸಿಎಂ ಬಸವರಾಜ ಬೊಮ್ಮಾಯಿ ಆಗಮಿಸಲಿದ್ದಾರೆ. ತಾವು ಶಾಸಕರಾಗಿದ್ದಾಗ ವಕೀಲರ ಸಂಘದ ಕಟ್ಟಡಕ್ಕೆ ಅನುದಾನ ಕೊಡಿಸಿದ್ದೇವೆ ಎಂದರು. ಆದರೂ ಸಹ ನೂತನ ಕಟ್ಟಡ ಉದ್ಘಾಟನಾ ಸಮಾರಂಭಕ್ಕೆ ತಮ್ಮನ್ನೇ ಕಡೆಗಣಿಸಿರುವುದಕ್ಕೆ ಶಾಸಕ ಓಲೇಕಾರ್​ ಗರಂ ಆಗಿದ್ದಾರೆ. ಸರ್ಕಾರದ ಜಾಗ ಮತ್ತು ಸರ್ಕಾರದ ಹಣದಲ್ಲಿ ನಿರ್ಮಾಣ ಆಗಿರುವ ವಕೀಲರ ಸಂಘದ ಕಟ್ಟಡ ಉದ್ಘಾಟನೆ ವೇಳೆ ನೆಹರು ಓಲೇಕಾರ್ ಅಭಿಮಾನಿಗಳು ಬೆಂಬಲಿಗರು ಕಪ್ಪುಬಟ್ಟೆ ಧರಿಸಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

ಬಿಜೆಪಿ ಶಾಸಕ ನೆಹರು ಓಲೇಕಾರ್ ಸುದ್ದಿಗೋಷ್ಠಿಯಲ್ಲಿ​ ಮಾತನಾಡಿದರು.

ಈ ಬಗ್ಗೆ ಮಾಧ್ಯಮಗೋಷ್ಟಿ ಮಾತನಾಡಿದ ಸ್ಥಳೀಯ ಶಾಸಕ ಓಲೇಕಾರ್, ಸ್ಥಳೀಯ ಶಾಸಕರನ್ನು ಕಡೆಗಣಿಸಿರುವುದು ದುರಂತದ ಸಂಗತಿ. ಸುಮಾರು ವರ್ಷಗಳಿಂದ ಕೋರ್ಟ್ ಸಂಕೀರ್ಣದ ಜಗಳವಿತ್ತು. ದಿವಂಗತ ಸಿ.ಎಂ. ಉದಾಸಿಯವರು ಸಚಿವರಾಗಿದ್ದಾಗ ಅದನ್ನು ಸರಿಪಡಿಸಿ ಸಂಕೀರ್ಣ ನಿರ್ಮಿಸಲಾಗಿತ್ತು‌. ವಕೀಲರ ಸಂಘದ ಕಟ್ಟಡ ನಿರ್ಮಾಣಕ್ಕೆ ಏಳೂವರೆ ಕೋಟಿ ರೂಪಾಯಿ ಕೊಡಿಸಿದ್ದೆ ಎಂದು ಹೇಳಿದ್ದಾರೆ.

ನಾಳಿನ ಕಾರ್ಯಕ್ರಮದ ವಿರುದ್ಧ ನಮ್ಮ ಕಾರ್ಯಕರ್ತರು ಪ್ರತಿಭಟನೆ ಹಾಗೂ ಕಪ್ಪುಬಟ್ಟೆ ಪ್ರದರ್ಶನ ಮಾಡಲು ಸಜ್ಜಾಗಿದ್ದಾರೆ. ಉದ್ದೇಶಪೂರ್ವಕವಾಗಿ ನನ್ನನ್ನು ಕಾರ್ಯಕ್ರಮಕ್ಕೆ ಆಹ್ವಾನಿಸದೆ ಕೈಬಿಟ್ಟಿದ್ದಾರೆ. ಪ್ರೋಟೊಕಾಲ್ ಪ್ರಕಾರ ನನ್ನನ್ನು ಕರೆಯಬೇಕಿತ್ತು. ಈ ಬಗ್ಗೆ ಜಿಲ್ಲಾಧಿಕಾರಿಗಳನ್ನು ಕೇಳಿದ್ದೇನೆ, ಆದರೆ ಅವರು ನೋಡೋಣ, ಏನು ಬೇಕಾದರೂ ಮಾಡಲಿ ಅವರಿಗೆ ಜವಾಬ್ದಾರಿ ಇದೆ ಎಂದು ಹಾರಿಕೆಯ ಉತ್ತರ ನೀಡಿದ್ದಾರೆ. ನನ್ನ ಹೆಸರು ಕಡೆಗಣಿಸಿರೋದರ ಬಗ್ಗೆ ಪ್ರತಿಭಟನೆ ಮಾಡುವೆ ಹಾಗೂ ಹಕ್ಕುಚ್ಯುತಿಯನ್ನೂ ಮಂಡಿಸುವೆ ಎಂದು ತಿಳಿಸಿದರು.

ಶುಕ್ರವಾರ ಈ ಕುರಿತು ಸಿಎಂ ನಿವಾಸದಲ್ಲಿ ಭೇಟಿಯಾಗಿ ಅವರ ಗಮನಕ್ಕೆ ತಂದಿದ್ದೇನೆ. ಈ ಬಗ್ಗೆ ಸರ್ಕಾರ ವಿಚಾರ ಮಾಡಬೇಕಿತ್ತು. ಮೂರು ಬಾರಿ ಶಾಸಕನಾದವನನ್ನು ಬಿಟ್ಟು ಕಾರ್ಯಕ್ರಮ ಮಾಡುತ್ತಾರೆ ಎಂದರೆ ಇದು ಸರ್ಕಾರಕ್ಕೆ ಮುಖಭಂಗ ಆದಂತೆ. ನಾನೆಂದೂ ಮಂತ್ರಿಯಾಗಿ ಕೆಲಸ ಮಾಡಬೇಕು ಎಂದು ಆಸೆ ಪಟ್ಟವನಲ್ಲ. ಶಾಸಕನಾಗಿಯೇ ಸಾಕಷ್ಟು ಕೆಲಸ ಮಾಡಿದ್ದೇನೆ. ಸಚಿವನಾದರೆ ರಾಜ್ಯದ ತುಂಬ ಕೆಲಸ ಮಾಡಬಹುದು. ಇದೇ ವೇಳೆ ನಾಳೆ ಸಿಎಂ ಭಾಗವಹಿಸುವ ಬೇರೊಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವೆ ಎಂದು ಶಾಸಕ ನೆಹರು ಓಲೇಕಾರ್​ ಹೇಳಿದರು.

ಇದನ್ನೂ ಓದಿ : ಹಿಂದುಳಿದ ವರ್ಗಗಳ ಹಾಸ್ಟೆಲ್ ಸುಧಾರಣೆಗೆ ಹೆಚ್ಚುವರಿ 250 ಕೋಟಿ ಮಂಜೂರಾತಿ: ಸಿಎಂ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.